ಮುಸ್ಕಾನ್ ಮತ್ತು ಕುಟುಂಬಸ್ಥರನ್ನು ವಿಚಾರಣೆ ನಡೆಸುವಂತೆ ದೂರು ನೀಡಲು ಅನಂತಕುಮಾರ್ ಹೆಗ್ಡೆ ಅಭಿಮಾನಿಗಳು ತೀರ್ಮಾನ

TV9 Digital Desk

| Edited By: ganapathi bhat

Updated on:Apr 09, 2022 | 9:55 AM

ಅಲ್ ಖೈದಾ ಸಂಘಟನೆಯಿಂದ ಮುಸ್ಕಾನ್ ಪ್ರಶಂಸೆ ಹಿನ್ನೆಲೆ ಮುಸ್ಕಾನ್ ಹಾಗೂ ಕುಟುಂಬಸ್ಥರನ್ನು ವಿಚಾರಣೆ ನಡೆಸುವಂತೆ ದೂರು ನೀಡಲು‌ ಅನಂತಕುಮಾರ್ ಹೆಗ್ಡೆ ಅಭಿಮಾನಿಗಳ ಸಂಘ ಮುಂದಾಗಿದೆ.

ಮುಸ್ಕಾನ್ ಮತ್ತು ಕುಟುಂಬಸ್ಥರನ್ನು ವಿಚಾರಣೆ ನಡೆಸುವಂತೆ ದೂರು ನೀಡಲು ಅನಂತಕುಮಾರ್ ಹೆಗ್ಡೆ ಅಭಿಮಾನಿಗಳು ತೀರ್ಮಾನ
ವಿದ್ಯಾರ್ಥಿನಿ ಮುಸ್ಕಾನ್

Follow us on


ಮಂಡ್ಯ: ಮುಸ್ಕಾನ್​ ಹೊಗಳಿ ಅಲ್​ಖೈದಾ ಮುಖ್ಯಸ್ಥ ವಿಡಿಯೋ ಮಾಡಿರುವ ಹಿನ್ನೆಲೆ ಮುಸ್ಕಾನ್ ಹಾಗೂ ಕುಟುಂಬಸ್ಥರನ್ನು ವಿಚಾರಣೆ ನಡೆಸುವಂತೆ ದೂರು ನೀಡಲು ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ಅಭಿಮಾನಿಗಳ ಸಂಘದವರು ತೀರ್ಮಾನಿಸಿದ್ದಾರೆ. ಇಂದು ಮಂಡ್ಯ SP ಗೆ ಅನಂತಕುಮಾರ್ ಹೆಗ್ಡೆ ಅಭಿಮಾನಿಗಳು ದೂರು ನೀಡಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪೊಲೀಸ್ ತನಿಖೆ ಜತೆ NIA ತನಿಖೆ ನಡೆಸುವಂತೆ ಆಗ್ರಹ ವ್ಯಕ್ತಪಡಿಸಿ ದೂರು ನೀಡಲಿದ್ದಾರೆ. ಅಲ್ ಖೈದಾ ಸಂಘಟನೆಯಿಂದ ಮುಸ್ಕಾನ್ ಪ್ರಶಂಸೆ ಹಿನ್ನೆಲೆ ಮುಸ್ಕಾನ್ ಹಾಗೂ ಕುಟುಂಬಸ್ಥರನ್ನು ವಿಚಾರಣೆ ನಡೆಸುವಂತೆ ದೂರು ನೀಡಲು‌ ಅನಂತಕುಮಾರ್ ಹೆಗ್ಡೆ ಅಭಿಮಾನಿಗಳ ಸಂಘ ಮುಂದಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿ ಮುಸ್ಕಾನ್ ಹಿಜಾಬ್ ಗದ್ದಲ ವೇಳೆ ಜೈ ಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದಳು. ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ವಿಚಾರ ದೇಶದಾದ್ಯಂತ ಸುದ್ದಿಯಾಗಿತ್ತು. ಘಟನೆ ಬಳಿಕ ಮುಸ್ಲಿಂ ಸಂಘಟನೆಗಳು ಹಣ, ಉಡುಗೊರೆ, ಬಹುಮಾನ ನೀಡಿ ಬೆಂಬಲ ನೀಡಿದ್ದವು. ಇದೀಗ ಅಲ್ ಖೈದಾ ಸಂಘಟನೆ ಮುಖ್ಯಸ್ಥ ಜವಾಹಿರಿಯಿಂದ ಮುಸ್ಕಾನ್ ಬಗ್ಗೆ ಹೊಗಳಿಕೆ ಕೇಳಿಬಂದಿದೆ. ಈ ಬೆಳವಣಿಗೆ ದೇಶದ ಆಂತರಿಕ ಭದ್ರತೆಗೆ ಅಪಾಯ. ಹಿಜಾಬ್ ಹಿಂದೆ ಕಾಣದ ಕೈಗಳಿವೆ ಎಂಬ ಶಂಕೆ ಇರುವಾಗ ಈ ಘಟನೆ ಅದಕ್ಕೆ ಪುಷ್ಠಿ ನೀಡುವಂತಿದೆ ಎಂದು ಹೇಳಿ ದೂರು ನೀಡಲು ಮುಂದಾಗಿದ್ದಾರೆ. ಮುಸ್ಕಾನ್ ಸೇರಿದಂತೆ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಬೇಕೆಂದು ಒತ್ತಾಯ ಮಾಡಲಿದ್ದಾರೆ.

ಹುಬ್ಬಳ್ಳಿ: ಮತ್ತೊಂದು ವಿವಾದ ಸೃಷ್ಟಿಸುವತ್ತ ಬಿಜೆಪಿ ನಾಯಕನ ಪತ್ರ?!

ರಾಜ್ಯದಲ್ಲಿ ಹಿಜಾಬ್, ಹಲಾಲ್ ದಂಗಲ್ ಮಧ್ಯೆ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಂದಲೇ ಮತ್ತೊಂದು ಬ್ಯಾನ್ ಪತ್ರ ಹೊರಬಿದ್ದಿದೆ. ಮುಸ್ಲಿಂರ ಜೊತೆಗೆ ಮದುವೆಯಾಗೋ ತಮ್ಮ ಸಮಾಜದ ಕುಟುಂಬ ಬಹಿಸ್ಕರಿಸಿ ಎಂದು ಕರೆ ನೀಡಿರುವ ಪತ್ರ ಲಭ್ಯವಾಗಿದೆ. ಸರ್ಕಾರಿ ಲೆಟರ್ ಹೆಡ್​ನಲ್ಲೇ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರಗಿ ಎಂಬವರು ಪತ್ರ ಬರೆದಿದ್ದಾರೆ. ಎಸ್.ಎಸ್.ಕೆ ಸಮಾಜದ ಧರ್ಮದರ್ಶಿಗೆ ಪತ್ರ ಬರೆದಿದ್ದಾರೆ.

ಮೊನ್ನೆಯಷ್ಟೆ ಎಸ್.ಎಸ್.ಕೆ ಸಮಾಜದ ಯುವತಿ ಮುಸ್ಲಿಂ ಯುವಕನ ಜೊತೆ ರಿಜಿಸ್ಟ್ರಾರ್ ವಿವಾಹ ಆಗಿದ್ದಳು. ಅದರ ವಿರುದ್ಧ ಲವ್ ಜಿಹಾದ್ ಎಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಯುವತಿ ನಾನೇ ಇಷ್ಟಪಟ್ಟು ಮದುವೆಯಾಗಿದ್ದೇನೆ ಎಂದು ಹೇಳಿದ್ದಳು. ಘಟನೆಯ ಹಿನ್ನಲೆ ಸಮಾಜದ ಹಿತದೃಷ್ಟಿಯಿಂದ ಬಹಿಷ್ಕಾರ ಮಾಡಿ ಎಂದು ನಾಗೇಶ ಕಲಬುರಗಿ ಪತ್ರ ಬರೆದಿದ್ದಾರೆ.

ತಮ್ಮ ಸಮಾಜದ ಯಾರೇ ಮುಸ್ಲಿಂರ ಜೊತೆ ಮದುವೆಯಾದ್ರು, ಅಂತ ಕುಟುಂಬವನ್ನ ಸಮಾಜದಿಂದ ಹೊರಗಿಡೋದು, ದೇವಸ್ಥಾನ ಪ್ರವೇಶ ನಿಷೆಧ ಮಾಡೋದು ಎಂದು ಪತ್ರದಲ್ಲಿ ಬರೆಯಲಾಗಿದೆ. ಅಂತಹ ಕುಟುಂಬಕ್ಕೆ ಸಮಾದ ಯಾರು ಹೆಣ್ಣು ಕೊಡುವಂತಿಲ್ಲ. ಸಮಾಜದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಲು ನಿಷೇಧ ಹೇರಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ಪ್ರಕರಣ; 6 ಶಂಕಿತರನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯ

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕನ ಮದುವೆ; ಪೋಷಕರಿಂದ ಲವ್ ಜಿಹಾದ್ ಆರೋಪ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada