ಕುಟುಂಬದಿಂದ, ಕುಟಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂದು ಅನ್ಕೊಂಡಿದ್ದಾರೆ: ದೇವೇಗೌಡ ಕುಟುಂಬದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಜಿಲ್ಲೆಯಲ್ಲಿ ಈಗ ಪರಿವರ್ತನೆ ಗಾಳಿ ಬೀಸುತ್ತಿದೆ, ಸಂವಿಧಾನದಲ್ಲಿ ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಅಂತ ಇದೆ. ಆದರೆ ಇವರು ತಿಳಿದುಕೊಂಡಿರೋದು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಗೋಸ್ಕರ ಅನ್ಕೊಂಡಿದ್ದಾರೆ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ: ಜಿಲ್ಲೆಯಲ್ಲಿ ಈಗ ಪರಿವರ್ತನೆ ಗಾಳಿ ಬೀಸುತ್ತಿದೆ, ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳಬೇಕೆಂದು ಸಂವಿಧಾನದಲ್ಲಿ ಏನಾದ್ರೂ ಬರೆದಿದೆಯಾ, ಸಂವಿಧಾನದಲ್ಲಿ ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಅಂತ ಇದೆ. ಆದರೆ ಇವರು ತಿಳಿದುಕೊಂಡಿರೋದು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಅನ್ಕೊಂಡಿದ್ದಾರೆ ಎನ್ನುವ ಮೂಲಕ ಮಂಡ್ಯದಲ್ಲಿ ಹೆಚ್.ಡಿ.ದೇವೇಗೌಡ ಕುಟುಂಬದ ವಿರುದ್ಧ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೇಗಾದರೂ ಮಾಡಿ ಗೆಲುವು ಸಾಧಿಸಲು ಉಭಯ ಪಕ್ಷಗಳು ಹರಸಾಹಸ ಪಡುತ್ತಿವೆ. ಅದರಲ್ಲೂ ಮಂಡ್ಯದಲ್ಲಿ ಹೇಗಾದರೂ ಮಾಡಿ ಬಿಜೆಪಿ ಗೆಲುವು ಸಾಧಿಸಬೇಕೆಂಬ ಆಸೆಯಿಂದ ಶಥಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಂಡ್ಯದಲ್ಲಿ ಮಾತನಾಡಿದ ಸಿ.ಟಿ.ರವಿ ಟಿಪ್ಪು ಆಡಳಿತ ಭಾಷೆಯಾಗಿ ಜಾರಿಗೆ ತಂದಿದ್ದು ಪಾರ್ಸಿ ಭಾಷೆ, ಆದರೂ ಕೆಲವರು ಟಿಪ್ಪುನನ್ನು ಕನ್ನಡ ಪ್ರೇಮಿ ಅಂತಾ ಹೇಳ್ತಾರೆ. ಮಂಡ್ಯ ಅಂದ್ರೆ ಕನ್ನಡ, ನಮ್ಮಪ್ಪ & ತಾತ ಮಾತಾಡಿದ್ದು ಕನ್ನಡ ಕೆಲವರು ದಿನಾಲೂ ಬೆಳಗ್ಗೆ ಎದ್ದರೆ ಟಿಪ್ಪು ಅಂತ ಹೇಳ್ತಾರೆ. ಇಲ್ಲಿನ ದೇವಾಲಯವನ್ನು ಮಸೀದಿ ಆಗಿ ಪರಿವರ್ತನೆ ಮಾಡಿದ್ದಾರೆ. ಅಂಥವರಿಗೆ ರಾಜಕೀಯವಾಗಿ ಬುದ್ಧಿ ಕಲಿಸಬೇಕಲ್ವಾ ಎಂದು ಹೇಳಿದರು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Wed, 22 February 23