AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯನ್ನ ಕೊಂದು ಆತ್ಮಹತ್ಯೆಯ ಬಣ್ಣ ಕಟ್ಟಿದ್ಲಾ ಐನಾತಿ ಪತ್ನಿ? ಮಂಡ್ಯ ಜಿಲ್ಲೆಯಲ್ಲೊಂದು ವಿಚಿತ್ರ ಕೊಲೆ ಪ್ರಕರಣ ಬೆಳಕಿಗೆ

ಒಬ್ಬರನ್ನೊಬ್ಬರು ಪ್ರೀತಿಸಿ ಕಳೆದ 13 ವರ್ಷದ ಹಿಂದೆ ಶಶಿಕುಮಾರ್ ನಾಗಮ್ಮ ಪ್ರೇಮ ವಿವಾಹವಾಗಿದ್ದರು. ಇಂದು ಇದ್ದಕ್ಕಿದ್ದಂತೆ ಶಶಿಕುಮಾರ್ ಮೃತದೇಹ ಪತ್ತೆಯಾಗಿದೆ.

ಪತಿಯನ್ನ ಕೊಂದು ಆತ್ಮಹತ್ಯೆಯ ಬಣ್ಣ ಕಟ್ಟಿದ್ಲಾ ಐನಾತಿ ಪತ್ನಿ? ಮಂಡ್ಯ ಜಿಲ್ಲೆಯಲ್ಲೊಂದು ವಿಚಿತ್ರ ಕೊಲೆ ಪ್ರಕರಣ ಬೆಳಕಿಗೆ
ಪತಿ ಶಶಿಕುಮಾರ್, ಪತ್ನಿ ನಾಗಮ್ಮ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 19, 2022 | 5:44 PM

Share

ಮಂಡ್ಯ: ಸ್ವತಃ ಪತ್ನಿಯೇ ಪತಿಯನ್ನ ಕೊಂದು ಆತ್ಮಹತ್ಯೆ (suicide) ಎಂದು ನಂಬಿಸಲು ಯತ್ನಿಸಿರುವಂತಹ ವಿಚಿತ್ರ ಪ್ರಕರಣ ಜಿಲ್ಲೆಯ ಮಳವಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಶಶಿಕುಮಾರ್ ಮೃತ ಪತಿ. ಕತ್ತಿಗೆ ವೈಯರ್ ಬಿಗಿದು ಉಸಿರು ಗಟ್ಟಿಸಿ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ ಎಂದು ಶಶಿಕುಮಾರ್​ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಒಬ್ಬರನ್ನೊಬ್ಬರು ಪ್ರೀತಿಸಿ ಕಳೆದ 13 ವರ್ಷದ ಹಿಂದೆ ಶಶಿಕುಮಾರ್ ನಾಗಮ್ಮ ಪ್ರೇಮ ವಿವಾಹವಾಗಿದ್ದರು. ಇಂದು ಇದ್ದಕ್ಕಿದ್ದಂತೆ ಶಶಿಕುಮಾರ್ ಮೃತದೇಹ ಪತ್ತೆಯಾಗಿದೆ. ಹತ್ಯೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ನಾಗಮ್ಮಳಿಂದ ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಕುಡಿದ ಮತ್ತಿನಲ್ಲಿ ಶಶಿಕುಮಾರ್ ರಾತ್ರಿ ಕಿರಿಕ್ ಮಾಡಿದ್ದ. ಬಳಿಕ ಪತ್ನಿ ಹಾಗೂ ಮಗುವಿನ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಚಾಕುವಿನಿಂದ ಚುಚ್ಚಿಕೊಂಡಿರುವುದಾಗಿ ಪತ್ನಿ ಹೇಳಿಕೆ ನೀಡಿದ್ದಾಳೆ. ಕಳೆದೊಂದು ತಿಂಗಳ ಹಿಂದೆ ನಾಗಮ್ಮಳನ್ನ ಗಾರ್ಮೆಂಟ್ಸ್ ಕೆಲಸದಿಂದ ಶಶಿಕುಮಾರ್ ಬಿಡಿಸಿದ್ದ. ಯಾವಾಗಲೂ ಮೊಬೈಲ್​ನಲ್ಲಿ ನಾಗಮ್ಮ ಪರಪುರುಷನ ಜೊತೆ ಲಲ್ಲೆ ಹೊಡೆಯುತ್ತಿದ್ದಳಂತೆ.

ಈ ಹಿನ್ನಲೆ ಆಗಾಗ ಪತಿ ಪತ್ನಿಯರ ನಡುವೆ ಗಲಾಟೆ ನಡೆಯುತ್ತಿತ್ತು. ಈ ಹಿನ್ನಲೆ ನಾಗಮ್ಮಾಳೆ ಪತಿ ಶಶಿಯನ್ನ ಹತ್ಯೆಗೈದಿರುವುದಾಗಿ ಆರೋಪ ಮಾಡಲಾಗುತ್ತಿದೆ. ಮಳವಳ್ಳಿ ಟೌನ್ ಪೊಲೀಸರಿಂದ ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದು, ಆರೋಪಿ ನಾಗಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಶಿಕುಮಾರ್ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ದೇವಸ್ಥಾನದ ಬಳಿ ಮಲಗುವ ವಿಚಾರಕ್ಕೆ ನಡೆದ ಕೊಲೆ

ಬೆಂಗಳೂರು: ದೇವಸ್ಥಾನದ ಬಳಿ ಮಲಗುವ ವಿಚಾರಕ್ಕೆ ಕೊಲೆ ನಡೆದಿದ್ದು, ಸಿಸಿ ಟಿವಿಯಲ್ಲಿ ಕೊಲೆಗಾರನ ಕೃತ್ಯ ಸೆರೆಯಾಗಿರುವಂತಹ ಘಟನೆ ಯಶವಂತಪುರ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ. ಆರೋಪಿ ಪ್ರಕಾಶ್ ಶಂಕರಪ್ಪ ಎಂಬವರನ್ನ ಕೊಲೆಗೈದಿದ್ದ. ಮೊದಲು ದೊಣ್ಣೆಯಿಂದ ಹೊಡೆದು ನಂತರ ಕೈ ಕಾಲಿನಿಂದ ಥಳಿಸಿ ಕೊಲೆ ಮಾಡಲಾಗಿದೆ. ಸೆ.13 ರಂದು ಕೊಲೆ ಪ್ರಕರಣ ನಡೆದಿದೆ. ವರಸಿದ್ದಿ ವಿನಾಯಕ ದೇವಸ್ಥಾನದ ಮುಂದೆ ಕೊಲೆ ಮಾಡಿದ್ದು, ಕೊಲೆಗಾರ ಪ್ರಕಾಶ್ ಪ್ರತಿನಿತ್ಯ ದೇವಸ್ಥಾನದ ಪೌಳಿಯಲ್ಲಿ ಮಲಗ್ತಿದ್ದ.

ಆ ಜಾಗದಲ್ಲಿ ಶಂಕರಪ್ಪ ಮಲಗಿದ್ದಾನೆ ಎಂದು ಕೆಂಡಾಮಂಡಲನಾದ ಪ್ರಕಾಶ, ಮಲಗಿದ್ದ ಪ್ರಕಾಶನನ್ನ ದೊಣ್ಣೆಯೊಂದರಿಂದ ಹೊಡೆದು ಏಳಿಸ್ತಾನೆ. ನಂತರ ಹೊಟ್ಟೆ ಹಾಗೂ ಮುಖದ ಭಾಗಕ್ಕೆ ಕಾಲಿನಿಂದ ಒದ್ದು ಗಾಯಗೊಳಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಶಂಕರಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದ. ಸದ್ಯ ಆರೋಪಿ ಪ್ರಕಾಶನನ್ನ ಬಂಧಿಸಿ ಯಶವಂತಪುರ ಪೊಲೀಸರು ಜೈಲಿಗಟ್ಟಿದ್ದಾರೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

ಕಲಬುರಗಿ ಹಳೇ ಜೇವರ್ಗಿ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ ಮಾಡಲಾಗಿದೆ. ಕಲಬುರಗಿಯ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಜಮೀರ್(23) ಹತ್ಯೆಯಾದ ಯುವಕ. ಕಳದೆ ರಾತ್ರಿ ಐದಾರು ಜನ ದುಷ್ಕರ್ಮಿಗಳು ಸೇರಿಕೊಂಡು ಬರ್ಬರ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಳೇ ವೈಷಮ್ಯ ಹಿನ್ನೆಲೆ ಜಮೀರ್​ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಸ್ನೇಹಿತೆಯ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧನ

ಬೆಂಗಳೂರು: ಸ್ನೇಹಿತೆಯ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೀತಾ ಅರೆಸ್ಟ್ ಆದ ಆರೋಪಿ. ಆ.16ರಂದು ವಿದ್ಯಾರಣ್ಯಪುರದಲ್ಲಿರುವ ಸ್ನೇಹಿತೆ ಲಕ್ಷ್ಮೀ ಮನೆಗೆ ಗೀತಾ ಬಂದಿದ್ದರು. ಈ ವೇಳೆ ಡಿಸೈನ್ ನೋಡುವ ನೆಪದಲ್ಲಿ 8-10 ಲಕ್ಷ ಮೌಲ್ಯದ ಆಭರಣಗಳನ್ನ ಕದ್ದು ಪರಾರಿಯಾಗಿದ್ದರು. ಬಂಧಿತರಿಂದ 9.84 ಲಕ್ಷ ಮೌಲ್ಯದ 216 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 5:37 pm, Mon, 19 September 22

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​