ಮಂಡ್ಯ ಹೊರವಲಯದಲ್ಲಿ ಸ್ಥಗಿತಗೊಂಡಿದ್ದ ಕಾರ್ಖಾನೆಯಲ್ಲಿ ವೃದ್ಧ ಮಾಲಕಿಯ ಕತ್ತು ಬಿಗಿದು ಭೀಕರವಾಗಿ ಕೊಲೆ
ಕೊಲೆಯಾಗಿರೊ ನಳಿನಿ ಸ್ಥಿತಿವಂತರಾಗಿದ್ದರು. ಗಂಡ ರಮೇಶ್, ಮಂಡ್ಯದಲ್ಲಿ ಕಾಫಿಪುಡಿ ಅಂಗಡಿ ಹಾಗೂ ಹೆಬ್ಬಾಳ ಬಳಿ ಚಿಕೋರಿ ಕಾರ್ಖಾನೆಯನ್ನ ನಡೆಸುತ್ತಿದ್ದರು. ಆದರೆ ಬರುಬರುತ್ತ ಸಾಕಷ್ಟು ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಮನೆಯನ್ನು ಬ್ಯಾಂಕ್ ನಲ್ಲಿ ಅಡ ಇಟ್ಟಿದ್ದರು. ಕಾರ್ಖಾನೆ ಬಂದ್ ಆಗಿತ್ತು. ಇದ್ದೊಬ್ಬ ಮಗ ಹುಟ್ಟು ಪೋಲಿ ಬಿದ್ದಿದ್ದ.
ಆಕೆ ಸಾಕಷ್ಟು ಸ್ಥಿತಿವಂತೆ. ಸಕ್ಕರೆ ನಗರಿಯಲ್ಲಿ ಭವ್ಯವಾದ ಮನೆ, ಒಂದು ಕಾರ್ಖಾನೆ ಸಹಾ ಇತ್ತು. ಆದರೆ ಸಾಲದ ಸುಳಿಗೆ ಸಿಲುಕಿ ಪಡಬಾರದ ಕಷ್ಟ ಅನುಭವಿಸುತ್ತಿದ್ದರು. ಚೆನ್ನಾಗಿಯೇ ಇದ್ದ ಕಾರ್ಖಾನೆ ಸಹ ಬಂದ್ ಆಗಿತ್ತು. ಆಗಾಗ ಬಂದು ಆ ಕಾರ್ಖಾನೆಯನ್ನ ನೋಡಿಕೊಂಡು ಹೋಗುತ್ತಿದ್ದರು. ಅದೇ ರೀತಿ ಕಾರ್ಖಾನೆ ನೋಡಲು ಬಂದ ಆ ಮಹಿಳೆ (woman) ಭೀಕರವಾಗಿ ಹತ್ಯೆಯಾಗಿದ್ದಾಳೆ. ಹತ್ಯೆಯ (murder) ಹಿಂದೆ ಸಾಕಷ್ಟು ಅನುಮಾನಗಳು ಮೂಡಿವೆ. ಹೌದು ಕಾರ್ಖಾನೆಯ ಮಾಲಕಿಯನ್ನ ಕಾರ್ಖಾನೆಯಲ್ಲಿಯೇ ಹಗ್ಗದಿಂದ ಕತ್ತು ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ನಗರದ ಹೊರವಲಯದ ಹೆಬ್ಬಾಳ ಬಳಿ (Hebbal in Mandya outskirts) ನಡೆದಿದೆ. ಹೆಬ್ಬಾಳದ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ಜಿಕೆಎನ್ ಚಿಕೋರಿ ಇಂಡಸ್ಟ್ರೀಸ್ ನಲ್ಲಿ ನಡೆದಿದೆ. ಮಂಡ್ಯದ ವಿದ್ಯಾನಗರ ನಿವಾಸಿ ನಳಿನಿ (62) ಕೊಲೆಯಾದ ದುರ್ದೈವಿ. ಅಂದಹಾಗೆ ಮೈಸೂರಿನ ವೃದ್ದಾಶ್ರಮವೊಂದರಲ್ಲಿ ಇದ್ದ ನಳಿನಿ, ಆಗಾಗ ಬಂದು ಬಂದ್ ಆಗಿದ್ದ ತಮ್ಮ ಕಾರ್ಖಾನೆಯನ್ನ ನೋಡಿಕೊಳ್ಳುತ್ತಿದ್ದರು.
ಅದೇ ರೀತಿ ಮಂಗಳವಾರ (ಅಕ್ಟೋಬರ್ 24) ಸಹ ಕಾರ್ಖಾನೆಗೆ ಬಂದಿದ್ದಾರೆ. ಆದರೆ ರಾತ್ರಿ ಹತ್ತು ಗಂಟೆಯಾದರೂ ಸೊಸೆಯ ಮೊಬೈಲ್ ಕರೆಯನ್ನು ಸ್ವೀಕರಿಸಿಲ್ಲ. ಹೀಗಾಗಿ ಅನುಮಾನಗೊಂಡ ಬೆಂಗಳೂರಿನಲ್ಲಿ ಇದ್ದ ಸೊಸೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕಾರ್ಖಾನೆ ಬಳಿ ಹೋಗಿ ನೋಡಿದಾಗ ಕೊಲೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಅಂದಹಾಗೆ ಕೊಲೆಯಾಗಿರೊ ನಳಿನಿ ಸಾಕಷ್ಟು ಸ್ಥಿತಿವಂತರಾಗಿದ್ದರು. ಮಂಡ್ಯದ ವಿದ್ಯಾನಗರದಲ್ಲಿ ವಾಸವಾಗಿದ್ದರು. ಈಕೆಯ ಗಂಡ ರಮೇಶ್, ಮಂಡ್ಯದಲ್ಲಿ ಕಾಫಿಪುಡಿ ಅಂಗಡಿ ಹಾಗೂ ಹೆಬ್ಬಾಳ ಬಳಿ ಚಿಕೋರಿ ಕಾರ್ಖಾನೆಯನ್ನ ನಡೆಸುತ್ತಿದ್ದರು. ಆದರೆ ಬರುಬರುತ್ತ ಸಾಕಷ್ಟು ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಮನೆಯನ್ನು ಬ್ಯಾಂಕ್ ನಲ್ಲಿ ಅಡ ಇಟ್ಟಿದ್ದರು. ಕಾರ್ಖಾನೆ ಬಂದ್ ಆಗಿತ್ತು. ಇದ್ದೊಬ್ಬ ಮಗ ಹುಟ್ಟು ಪೋಲಿ ಆಗಿದ್ದ.
Also Read: ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ, ಆದರೆ ಈಗ ಪತ್ನಿಗೆ ಚಿತ್ರಹಿಂಸೆ ನೀಡ್ತಿದ್ದಾನಂತೆ
ಹೀಗಾಗಿ ನಳಿನಿ ಹಾಗೂ ಆಕೆಯ ಗಂಡ ರಮೇಶ್ ಇಬ್ಬರೂ ಮೈಸೂರಿನ ವೃದ್ದಾಶ್ರಮದಲ್ಲಿ ಇದ್ದರು. ಆದರೆ ಪ್ರತಿನಿತ್ಯ ಮೈಸೂರಿನಿಂದ ಮಂಡ್ಯಕ್ಕೆ ಬಂದು ಕಾರ್ಖಾನೆಯನ್ನ ನೋಡಿಕೊಂಡು ಹೋಗುತ್ತಿದ್ದರು. ಅದೇ ರೀತಿ ಮೊನ್ನೆ ಕಾರ್ಖಾನೆಗೆ ಬಂದಾಗ ಈ ಘಟನೆ ನಡೆದಿದೆ. ನಳಿನಿ ಕೊಲೆಯಿಂದ ಸಾಕಷ್ಟು ಅನುಮಾನಗಳು ಮೂಡುತ್ತಿದ್ದು, ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ತನ್ನದೆ ಮಾಲೀಕತ್ವದ ಕಾರ್ಖಾನೆಯಲ್ಲಿಯೇ ಮಹಿಳೆಯ ಕೊಲೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು ಪೊಲೀಸರ ತನಿಖೆಯಿಂದ ಕೊಲೆಯ ರಹಸ್ಯ ತಿಳಿಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ