AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

58 ವರ್ಷದಿಂದ ಇದ್ದ ದೇಗುಲದ ಗುಡ್ಡಪ್ಪ ನೇಮಕ ವಿವಾದಕ್ಕೆ ತೆರೆ; ದೇವಾಲಯದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದ ಬಸಪ್ಪ

ಮಂಡ್ಯ ಜಿಲ್ಲೆ ದೊಡ್ಡಬಾಣಸವಾಡಿ ಗ್ರಾಮದಲ್ಲಿ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕ ಕಳೆದ 58 ವರ್ಷದಿಂದ ನಡೆದಿರಲಿಲ್ಲ. ಸದ್ಯ ಬಸಪ್ಪ 3 ದೇಗುಲಕ್ಕೆ ಮೂವರು ಪೂಜಾರಿಗಳನ್ನು ನೇಮಿಸುವ ಮೂಲಕ ಅಚ್ಚರಿ ಮೂಡಿಸಿದೆ.

58 ವರ್ಷದಿಂದ ಇದ್ದ ದೇಗುಲದ ಗುಡ್ಡಪ್ಪ ನೇಮಕ ವಿವಾದಕ್ಕೆ ತೆರೆ; ದೇವಾಲಯದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದ ಬಸಪ್ಪ
ದೇವಾಲಯದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದ ಬಸಪ್ಪ
TV9 Web
| Edited By: ಆಯೇಷಾ ಬಾನು|

Updated on: Feb 20, 2022 | 9:42 AM

Share

ಮಂಡ್ಯ: ಬಸಪ್ಪನ ಮತ್ತೊಂದು ಪವಾಡಕ್ಕೆ ಸಕ್ಕರೆನಾಡು ಮಂಡ್ಯ ಸಾಕ್ಷಿಯಾಗಿದೆ. 58 ವರ್ಷದಿಂದ ಇದ್ದ ದೇಗುಲದ ಗುಡ್ಡಪ್ಪ ನೇಮಕ ವಿವಾದಕ್ಕೆ ತೆರೆ ಬಿದ್ದಿದೆ. ದೇವಾಲಯದ ಮುಂಭಾಗದ ಕೊಳಕ್ಕೆ ತಳ್ಳಿ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕ ಮಾಡುವ ಮೂಲಕ ಬಸಪ್ಪನ ಪವಾಡಕ್ಕೆ ಮಂಡ್ಯ ಜನ ಅಚ್ಚರಿ ಪಟ್ಟಿದ್ದಾರೆ.

ಮಂಡ್ಯ ಜಿಲ್ಲೆ ದೊಡ್ಡಬಾಣಸವಾಡಿ ಗ್ರಾಮದಲ್ಲಿ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕ ಕಳೆದ 58 ವರ್ಷದಿಂದ ನಡೆದಿರಲಿಲ್ಲ. ಸದ್ಯ ಬಸಪ್ಪ 3 ದೇಗುಲಕ್ಕೆ ಮೂವರು ಪೂಜಾರಿಗಳನ್ನು ನೇಮಿಸುವ ಮೂಲಕ ಅಚ್ಚರಿ ಮೂಡಿಸಿದೆ. ಜನರ ಗುಂಪಿನಲ್ಲಿ ಕುಳಿತಿದ್ದ ಮೂವರನ್ನು ಗುರುತಿಸಿದ ಬಸಪ್ಪ, ಅವರನ್ನು ದೇವಾಲಯದ ಮುಂಭಾಗದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದೆ. ಚೌಡೇಶ್ವರಿ ದೇಗುಲಕ್ಕೆ ಪ್ರತಾಪ್, ಪಟ್ಟಲದಮ್ಮ ದೇಗುಲಕ್ಕೆ ಮಂಜು, ಮಾರ್ಗೋನಹಳ್ಳಿ ದೇಗುಲಕ್ಕೆ ಅರ್ಚಕರಾಗಿ ಶಿವಣ್ಣ ಆಯ್ಕೆ ಆಗಿದ್ದಾರೆ. 58 ವರ್ಷದಿಂದ ನಿಂತಿದ್ದ ಹಬ್ಬಕ್ಕೆ ಬಸಪ್ಪ ಮುನ್ನುಡಿ ಬರೆದಿದ್ದಾರೆ.

58 ವರ್ಷದ ಹಿಂದೆ ದೇವಾಲಯದ ಅರ್ಚಕರು ಮೃತಪಟ್ಟಿದ್ದರು. ಬಳಿಕ ಮತ್ತಿಬ್ಬರು ಪೂಜಾರಿಗಳನ್ನು ಗ್ರಾಮಸ್ಥರು ನೇಮಿಸಿದ್ರು. ಆದ್ರೆ ಅರ್ಚಕರ ಮೈಮೇಲೆ ದೇವರು ಬಂದಿಲ್ಲ ಎಂದು ಹಬ್ಬವನ್ನು ನಿಲ್ಲಿಸಲಾಗಿತ್ತು. ಸದ್ಯ ಪೂಜಾರಿಗಳ ಆಯ್ಕೆ ವಿವಾದದಿಂದ ನಿಂತಿದ್ದ ಹಬ್ಬ ಆಚರಣೆ ಈಗ ಮತ್ತೆ ಶುರುವಾಗಲಿದೆ.

mandya god bull 1

ದೇವಾಲಯದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದ ಬಸಪ್ಪ

ಇದನ್ನೂ ಓದಿ: Coconut Water: ಹೆಚ್ಚು ಎಳನೀರು ಕುಡಿಯುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ!

ನಾಳೆಯಿಂದ ಪಿಯು ಪ್ರಾಯೋಗಿಕ ಪರೀಕ್ಷೆ ಆರಂಭ; ಹಿಜಾಬ್ ವಿವಾದದಿಂದ ಗೈರಾದರೆ ಮತ್ತೆ ಅವಕಾಶ ಇಲ್ಲ

Follow Us
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು