‘ಐ ಲವ್​ ಯೂ ಚಿನ್ನು’: ಮೆಸೇಜ್ ಮಾಡಿ ಕಿರುಕುಳ; ಉಪನ್ಯಾಸಕನ ಗ್ರಹಚಾರ ಬಿಡಿಸಿದ ವಿದ್ಯಾರ್ಥಿನಿಯರು

ಮಂಡ್ಯದ ನಾಗಮಂಗಲ ಪದವಿ ಕಾಲೇಜಿನ ಉಪನ್ಯಾಸಕ ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಪಡೆದು 'ಐ ಲವ್ ಯೂ ಚಿನ್ನು' ಎಂದು ಮೆಸೇಜ್ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ಆತನನ್ನು ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ. ನಾಗಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

‘ಐ ಲವ್​ ಯೂ ಚಿನ್ನು’: ಮೆಸೇಜ್ ಮಾಡಿ ಕಿರುಕುಳ; ಉಪನ್ಯಾಸಕನ ಗ್ರಹಚಾರ ಬಿಡಿಸಿದ ವಿದ್ಯಾರ್ಥಿನಿಯರು
ಉಪನ್ಯಾಸಕ
Edited By:

Updated on: Oct 30, 2026 | 5:08 PM

ಮುಖ್ಯಾಂಶಗಳು

  • ವಿದ್ಯಾರ್ಥಿನಿಯರಿಗೆ ಮೆಸೇಜ್ ಮಾಡ್ತಿದ್ದ ಉಪನ್ಯಾಸಕನಿಗೆ ಕ್ಲಾಸ್
  • ಮಂಡ್ಯ ಜಿಲ್ಲೆ ನಾಗಮಂಗಲ ಪದವಿ ಕಾಲೇಜಿನ ಉಪನ್ಯಾಸಕ ಗಂಗೂ
  • ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

ಮಂಡ್ಯ, ಅಕ್ಟೋಬರ್​ 30: ‘ಐ ಲವ್​ ಯೂ ಚಿನ್ನು’ ಎಂದು ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರು ಥಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪದವಿ ಕಾಲೇಜಿನಲ್ಲಿ ನಡೆದಿದೆ. ಗಂಗೂ, ವಿದ್ಯಾರ್ಥಿನಿಯರಿಗೆ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಉಪನ್ಯಾಸಕ. ಸದ್ಯ ಈ ಕುರಿತಾಗಿ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಮಂಡ್ಯ ಜಿಲ್ಲೆಯ ನಾಗಮಂಗಲ ಪದವಿ ಕಾಲೇಜಿನ ಉಪನ್ಯಾಸಕ ಗಂಗೂ, ವಿದ್ಯಾರ್ಥಿನಿಯರ ಮೊಬೈಲ್ ನಂಬರ್​ ಪಡೆದು ಚಾಟಿಂಗ್ ಮಾಡುತ್ತಿದ್ದರು. ಐ ಲವ್ ಯೂ, ಐ ಲೈಕ್​ ಯೂ, ಐ ಲವ್​ ಯೂ ಚಿನ್ನು ಎಂದೆಲ್ಲಾ ಉಪನ್ಯಾಸಕ ಮೆಸೇಜ್ ಮಾಡಿದ್ದಾರೆ. ಇತ್ತ ಉಪನ್ಯಾಸಕನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ರೊಚ್ಚಿಗೆದ್ದು, ಗ್ರಹಚಾರ ಬಿಡಿಸಿದ್ದಾರೆ.

ಆಫೀಸ್ ರೂಮ್​​ಗೆ ನುಗ್ಗಿ ವಿದ್ಯಾರ್ಥಿನಿಯರಿಂದ ಉಪನ್ಯಾಸಕನಿಗೆ ಕ್ಲಾಸ್ 

ನೇರವಾಗಿ ಆಫೀಸ್ ರೂಮ್​​ಗೆ ನುಗ್ಗಿದ ವಿದ್ಯಾರ್ಥಿನಿಯರು ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿನಿಯರಿಂದ ಉಪನ್ಯಾಸಕ ಗಂಗೂಗೆ ಧರ್ಮದೇಟು ನೀಡಿದ್ದಾರೆ. ಈ ವೇಳೆ ಅವರು ಕೈ ಮುಗಿದು ಕೇಳಿಕೊಂಡರು ಬಿಟ್ಟಿಲ್ಲ. ಇನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ಉಪನ್ಯಾಸಕ ಮಾಸ್ಕ್ ಹಾಕಿಕೊಂಡರು. ಈ ವೇಳೆ ‘ಮಾಡುವುದೆಲ್ಲಾ ಮಾಡಿ ಮಾಸ್ಕ್ ಹಾಕಿದ್ದೀಯಾ’ ಎಂದು ವಿದ್ಯಾರ್ಥಿನಿಯರು ಕ್ಲಾಸ್ ತೆಗೆದುಕೊಂಡರು. ಘಟನೆಯಿಂದ ಬೆದರಿದ ಗಂಗೂ ಬೀರು ಸಂದಿಯಲ್ಲಿ ಅವಿತುಕೊಂಡರು.

ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಬಳಿ ನಡೆದಿದೆ. ಬಳ್ಳಾರಿಯ ಕೌಲ್ ಬಜಾರ್ ನಿವಾಸಿ ಅಬೂ(20) ಮೃತ ಬೈಕ್ ಸವಾರ. ರಾತ್ರಿಯಾಗುತ್ತಿದ್ದಂತೆ ಸಂಚರಿಸುವ ಮೈನಿಂಗ್ ಟಿಪ್ಪರ್​ಗಳಿಂದ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಸ್ನೇಹಿತನ ಗರ್ಲ್‌ಫ್ರೆಂಡನ್ನೇ ಕಾಲ್‌ಗರ್ಲ್‌ ಎಂದೆಣಿಸಿ ಅತ್ಯಾಚಾರ! ಪ್ರತೀಕಾರಕ್ಕೆ ಹೊರಟ ಯುವತಿ, ಆಮೇಲಾಯ್ತು ಸಿನಿಮೀಯ ಘಟನೆ

ಈ ಹಿಂದೆಯೂ ಹೀಗೆ ಹಲವು ಅಪಘಾತಗಳು ಸಂಭವಿಸಿವೆ. ಅಪಘಾತ ಸ್ಥಳದಲ್ಲಿ ಜಮಾಯಿಸಿ ನೂರಾರು ಜನರು ಮೈನಿಂಗ್ ವಾಹನಗಳ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.
ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Loading...
Unable to load recommendations.
Follow Us