ಪತ್ನಿ ಜೊತೆ ಆಕ್ರಮ ಸಂಬಂಧ! ಪಿಸ್ತೂಲ್​ನಿಂದ ಗುಂಡು ಹಾರಿಸಿ ಯುವಕನ ಹತ್ಯೆಗೆ ಯತ್ನ!

ಪಾಂಡವಪುರ ತಾಲ್ಲೂಕಿನ ಶಂಭೂನಹಳ್ಳಿ ಗ್ರಾಮದ ಜನರೆಲ್ಲ ನಿನ್ನೆ(ಅ.12) ದಸರಾ ಹಬ್ಬವನ್ನ ಮುಗಿಸಿ ಇಂದು ಎಂದಿನಂತೆ ಬೆಳ್ಳಂಬೆಳ್ಳಗೆ ತಮ್ಮ ಕೆಲಸಕ್ಕೆ ಹೋಗಲು ಸಜ್ಜಾಗಿದ್ದರು. ಆದರೆ, ಆ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಗನ್ನು ಸದ್ದು ಮಾಡಿತ್ತು. ತನ್ನ ಪತ್ನಿ ಜೊತೆ ಆಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತಿರಾಯನೊಬ್ಬ ಆದೊಬ್ಬ ಯುವಕನ ಮೇಲೆ ಕಂಟ್ರಿಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾನೆ. ಈ ಕುರಿತ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ.

ಪತ್ನಿ ಜೊತೆ ಆಕ್ರಮ ಸಂಬಂಧ! ಪಿಸ್ತೂಲ್​ನಿಂದ ಗುಂಡು ಹಾರಿಸಿ ಯುವಕನ ಹತ್ಯೆಗೆ ಯತ್ನ!
ಪಿಸ್ತೂಲ್​ನಿಂದ ಗುಂಡು ಹಾರಿಸಿ ಯುವಕನ ಹತ್ಯೆಗೆ ಯತ್ನ, ಗಾಯಾಳು ಮಂಜು
Follow us
ಪ್ರಶಾಂತ್​ ಬಿ.
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 13, 2024 | 6:18 PM

ಮಂಡ್ಯ, ಅ.13: ತನ್ನ ಪತ್ನಿ ಜೊತೆ ಗ್ರಾಮದ ಯುವಕನೊಬ್ಬ ಆಕ್ರಮ ಸಂಬಂಧವನ್ನ ಹೊಂದಿದ್ದಾನೆ ಎಂದು ಪಿಸ್ತೂಲ್​ನಿಂದ ಗುಂಡು ಹಾರಿಸಿ ಗ್ರಾಮದ ಯುವಕನ ಹತ್ಯೆಗೆ ಪತಿರಾಯನೊಬ್ಬ ಮುಂದಾಗಿದ್ದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ (Pandavapura) ತಾಲ್ಲೂಕಿನ ಶಂಭೂನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಂದಹಾಗೆ ಶಂಭೂನಹಳ್ಳಿ ಗ್ರಾಮದ ಮಂಜು(29) ಎಂಬಾತನ ಮೇಲೆ ಅದೇ ಗ್ರಾಮದ ಶಿವರಾಜು ಎಂಬಾತ(37) ಗುಂಡು ಹಾರಿಸಿ ಹತ್ಯೆಗೆ ಮುಂದಾಗಿದ್ದಾನೆ. ಅದೃಷ್ಠವಶಾತ್​​ ಮಂಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ವಿವರ

ಇನ್ನು ಆರೋಪಿ ಶಿವರಾಜ್, ಬಾಂಬೆನಲ್ಲಿ ಹೋಟೆಲ್​​ವೊಂದರಲ್ಲಿ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆದರೆ, ಶಿವರಾಜನ ಪತ್ನಿ ಜೊತೆ ಲಾರಿ ಡ್ರೈವರ್ ಆಗಿದ್ದ ಮಂಜು ಆಕ್ರಮ ಸಂಬಂಧವೊಂದಿದ್ದನಂತೆ. ಈ ವಿಚಾರ ತಿಳಿದು ಎರಡು ವರ್ಷಗಳ ಕೆಳಗೆ ಗಲಾಟೆ ನಡೆದು ಚಾಕುವಿನಿಂದ ಚುಚ್ಚಿ ಮಂಜುನ ಹತ್ಯೆಗೆ ಈ ಹಿಂದೆ ಕೂಡ ಶಿವರಾಜ್ ಮುಂದಾಗಿದ್ದ. ಆವಾಗಲೂ ಕೂಡ ಮಂಜು ಬಚಾವ್ ಆಗಿದ್ದ. ಆನಂತರ ಶಿವರಾಜ್ ಪತ್ನಿ, ಶಿವರಾಜ್​​ನನ್ನ ತೊರೆದು ತವರು ಮನೆ ಸೇರಿದ್ದಳು. ಹೀಗಾಗಿ ಆಗಿನಿಂದಲೂ ಮಂಜುವಿನ ಮೇಲೆ ಶಿವರಾಜ್​ಗೆ ಕೋಪವಿತ್ತು. ಈ ನಿಟ್ಟಿನಲ್ಲಿ ವಾರದ ಹಿಂದೆ ಬಾಂಬೆನಿಂದ ಗ್ರಾಮಕ್ಕೆ ಬಂದಿದ್ದ ಆರೋಪಿ ಶಿವರಾಜ್, ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆಯೆ ಮುಂದೆ ತನ್ನ ಭಾವ ಹಾಗೂ ಸ್ನೇಹಿತನ ಜೊತೆ ಕುಳಿತಿದ್ದ ಮಂಜನ ಮೇಲೆ ಏಕಾಏಕಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ.

ಇದನ್ನೂ ಓದಿ:ಗಣೇಶ ವಿಸರ್ಜನೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಯುವಕರ ಪುಂಡಾಟ; ಇಬ್ಬರು ಅರೆಸ್ಟ್​

ಮೊದಲ ಗುಂಡು ಮಂಜನಿಗೆ ತಗುಲಿಲ್ಲ. ಆ ನಂತರ ಎರಡನೇ ಬಾರಿ ಗುಂಡು ಹಾರಿಸಿದ್ದಾನೆ. ಎರಡನೇ ಗುಂಡು ತಲೆಯ ಭಾಗದಲ್ಲಿ ತಗುಲಿ ಹೋಗಿದೆ. ಅಷ್ಟರಲ್ಲೇ ಜೊತೆಯಲ್ಲಿ ಇದ್ದವರು ಹಾಗೂ ಸ್ಥಳೀಯರು ಶಿವರಾಜ್​ನನ್ನ ಹಿಡಿದಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಮಂಜುನನ್ನ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಂದಹಾಗೆ ಕಳೆದ ಹಲವು ವರ್ಷಗಳಿಂದ ಮಂಜು ಮೇಲೆ ಆರೋಪಿ ಶಿವರಾಜನಿಗೆ ಪತ್ನಿ ವಿಚಾರವಾಗಿ ದ್ವೇಷವಿತ್ತು. ಮೊದಲ ಬಾರಿ ಮಿಸ್ ಆಗಿದ್ದ. ಈ ಬಾರಿ ಮಂಜುನನ್ನ ಹತ್ಯೆ ಮಾಡಲೇಬೇಕು ಎಂದು ಆರು ತಿಂಗಳಿಂದ ಸ್ಕೆಚ್ ಹಾಕಿ, ಇದಕ್ಕಾಗಿಯೇ ಮುಂಬೈನ ಚೋರ್ ಬಜಾರ್‌ನಲ್ಲಿ ಮೂರೂವರೆ ಲಕ್ಷ ಕೊಟ್ಟು ಎರಡು ಗನ್ ಹಾಗೂ ಮ್ಯಾಗಜೀನ್​ಗಳನ್ನು ಖರೀದಿಸಿ ವಾರದ ಹಿಂದೆ ಗ್ರಾಮಕ್ಕೆ ಬಂದಿದ್ದ. ಆದರೆ, ಇಂದು ಸಹ ಆತನ ಸ್ಕೇಚ್ ಮಿಸ್ ಆಗಿದೆ.

ಇನ್ನು ಘಟನೆ ನಂತರ ಗ್ರಾಮಸ್ಥರು ಆರೋಪಿ ಶಿವರಾಜ್​ನನ್ನ ಹಿಡಿದು ಕಟ್ಟಿ ಹಾಕಿ, ಆನಂತರ‌ ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾನೆ. ಪಿಸ್ತೂಲ್​ನನ್ನ ಸೀಜ್ ಮಾಡಿ, ಪಿಸ್ತೂಲ್ ಮೂಲವನ್ನ ಕೆದಕುತ್ತಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಅನೈತಿಕ ಸಂಬಂಧ ಹಿನ್ನೆಲೆ ತನ್ನ ಪತ್ನಿಯ ಪ್ರಿಯಕರನ ಮೇಲೆ ಪತಿರಾಯ ಕ್ರೂರನಾಗಿ ಹತ್ಯೆಗೆ ಮುಂದಾಗಿ, ತಾನಿಟ್ಟ ಸ್ಕೆಚ್ ಮಿಸ್ಸಾಗಿದೆ. ಈ ಸಂಬಂಧ ಪಾಂಡವಪುರ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ