ಮಂಡ್ಯ ಜಿಲ್ಲೆಯಲ್ಲಿ ಶುರುವಾಯ್ತು ಜೆಡಿಎಸ್ V/S ಬಿಜೆಪಿ ಫೈಟ್: ನಾರಾಯಣಗೌಡ ವಿರುದ್ಧ JDS ಜಿಲ್ಲಾಧ್ಯಕ್ಷ ರಮೇಶ್ ವಾಗ್ದಾಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: May 30, 2022 | 12:12 PM

ಸಚಿವ ನಾರಾಯಣಗೌಡ ವಿರುದ್ಧ ವಾಗ್ದಾಳಿ ನಡೆಸಿರುವ ಮಂಡ್ಯ ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ್​ಗೆ ಸಚಿವ ನಾರಾಯಣ ಗೌಡರಿಂದ ಖಡಕ್ ವಾರ್ನಿಂಗ್ ನೀಡಿದ್ದು, ಜೆಡಿಎಸ್ ಜಿಲ್ಲಾಧ್ಯಕ್ಷನಿಗೆ‌ ಕ್ಲಾಸ್ ತೆಗೆದುಕೊಂಡರು.

ಮಂಡ್ಯ ಜಿಲ್ಲೆಯಲ್ಲಿ ಶುರುವಾಯ್ತು ಜೆಡಿಎಸ್ V/S ಬಿಜೆಪಿ ಫೈಟ್: ನಾರಾಯಣಗೌಡ ವಿರುದ್ಧ JDS ಜಿಲ್ಲಾಧ್ಯಕ್ಷ ರಮೇಶ್ ವಾಗ್ದಾಳಿ
ಸಚಿವ ನಾರಾಯಣಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ್
Follow us on

ಮಂಡ್ಯ: ಎಂಎಲ್‌ಸಿ ಚುನಾವಣೆಯಲ್ಲಿ ಜೆಡಿಎಸ್ ಸೋಲಲು ಸಚಿವ ನಾರಾಯಣಗೌಡ ಕಾರಣ. ನಾರಾಯಣಗೌಡನ ಹಿಂಬಾಗಿಲ‌ ರಾಜಕೀಯದಿಂದ ಸೋಲಾಯಿತು. ಹೇಡಿ ಕೆಲಸ ಮಾಡ್ಕೋಂಡು ಇದ್ದಾರೆ, ಮಾನ ಮರ್ಯಾದೆ ಇದೀಯಾ ಎಂದು ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಸಚಿವ ನಾರಾಯಣಗೌಡ ವಿರುದ್ಧ ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ್ ವಾಗ್ದಾಳಿ ಮಾಡಿದರು. ಕಳೆದ ಎಂಎಲ್‌ಸಿ ಚುನಾವಣೆಯಲ್ಲಿ ಮಾಡಿದ ರೀತಿ ಈ ಎಂಎಲ್‌ಸಿ ಚುನಾವಣೆಯಲ್ಲಿ ಮಾಡೋಕೆ ಆಗಲ್ಲ. ತಾಕತ್ತು ಇದರೆ ಈ ಚುನಾವಣೆಯಲ್ಲಿ ಹಾಗೆ ಮಾಡಿ. ಜೆಡಿಎಸ್‌ನಲ್ಲಿರುವವರು ಅಪ್ಪನಿಗೆ ಹುಟ್ಟಿದ ಮಕ್ಕಳು ಎಂದು ಹೇಳಿದರು. ಈ ಹಿನ್ನೆಲೆ ಜಿಲ್ಲೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮತ್ತು ಸಚಿವರ ನಡುವೆ ವಾಕ್ ಸಮರ ಉಂಟಾಗಿದ್ದು, ಜೆಡಿಎಸ್ v/s ಬಿಜೆಪಿ ಫೈಟ್ ಶುರುವಾದಂತ್ತಾಗಿದೆ.

ಇದನ್ನೂ ಓದಿ: ಮೊಸಳೆ ರೀತಿ ಹೋಲುವ ದ್ವೀಪ, ಚಿತ್ರ ನೋಡಿ ಚಕಿತಗೊಂಡ ನೆಟ್ಟಿಗರು

ಇನ್ನೂ ಸಚಿವ ನಾರಾಯಣಗೌಡ ವಿರುದ್ಧ ವಾಗ್ದಾಳಿ ನಡೆಸಿರುವ ಮಂಡ್ಯ ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ್​ಗೆ ಸಚಿವ ನಾರಾಯಣ ಗೌಡರಿಂದ ಖಡಕ್ ವಾರ್ನಿಂಗ್ ನೀಡಿದ್ದು, ಜೆಡಿಎಸ್ ಜಿಲ್ಲಾಧ್ಯಕ್ಷನಿಗೆ‌ ಕ್ಲಾಸ್ ತೆಗೆದುಕೊಂಡರು. ನಿನ್ನ ಕುಟುಂಬದ ಒಬ್ಬ ಕಳ್ಳತನ ಮಾಡಿ ಸಸ್ಪೆಂಡ್ ಆಗಿದ್ದರು. ಆಗ ನೀನು ನನ್ನ ಕಾಲು ಹಿಡಿದುಕೊಂಡಿದ್ದು ಮರೆತು ಬಿಟ್ಟಾ. ಏಯ್ ಬಾ ತಾಕತ್ ಇದರೆ ಒಂದು ಚುನಾವಣೆ ಎದುರಿಸು. 3 ಗಂಟೆ ಟ್ರೈನ್‌ಗೆ ಹೋಗಿ ದೇವೇಗೌಡರ ಮನೆಗೆ ಹೋಗಿ ಚಾಡಿ ಹೇಳೋದು ನಿನ್ನ ಕೆಲಸ. ನಾನು ಯಾರಿಗೂ ಹೆದರಿಲ್ಲ, ಬಗ್ಗಿಲ್ಲ. ನನ್ನ ಬಗ್ಗೆ ಮಾತಾಡಬೇಕು ಅಂದ್ರೆ ಹುಷಾರ್, ನಿನ್ನದೆಲ್ಲಾ ಓಪನ್ ಮಾಡುತ್ತೇನೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷನಿಗೆ ಸಚಿವ ನಾರಾಯಣಗೌಡ ವಾರ್ನ್ ಮಾಡಿದರು.


ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.