ಮಂಡ್ಯದಲ್ಲಿ ಪ್ರತಿಷ್ಠೆಯ ಕಣವಾದ ಲೋಕಲ್ ಎಲೆಕ್ಷನ್; ಸ್ವಾಮಿ ವರ್ಸಸ್ ಸ್ವಾಮಿ ನಡುವೆ ಬಿಗ್ ಫೈಟ್

ಸಕ್ಕರೆ ನಗರಿ ಮಂಡ್ಯದಲ್ಲಿ ಯಾವುದೇ ಚುನಾವಣೆಗಳು ನಡೆದರೂ ಸಾಕಷ್ಟು ಜಿದ್ದಾಜಿದ್ದಿಯಲ್ಲಿ ನಡೆಯುತ್ತವೆ. ಅದು ಲೋಕಲ್ ಚುನಾವಣೆ ಆಗಿರಬಹುದು ಅಥವಾ ಲೋಕಸಭಾ ಚುನಾವಣೆ ಆಗಿರಬಹುದು. ಯಾವುದೇ ಎಲೆಕ್ಷನ್ ಇದ್ದರು ಅಲ್ಲಿ ಸಾಕಷ್ಟು ಪೈಪೋಟಿ ಇರುತ್ತದೆ. ಅದೇ ರೀತಿ ಇದೀಗ ನಡೆಯುತ್ತಿರುವ ಲೋಕಲ್ ಬಾಡಿ ಎಲೆಕ್ಷನ್ ಕೂಡ ಸಾಕಷ್ಟು ಜಿದ್ದಾಜಿದ್ದಿ ಏರ್ಪಟ್ಟಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ರಾಜ್ಯ ಸಚಿವ ಚಲುವರಾಯಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಮಂಡ್ಯದಲ್ಲಿ ಪ್ರತಿಷ್ಠೆಯ ಕಣವಾದ ಲೋಕಲ್ ಎಲೆಕ್ಷನ್; ಸ್ವಾಮಿ ವರ್ಸಸ್ ಸ್ವಾಮಿ ನಡುವೆ ಬಿಗ್ ಫೈಟ್
ಕುಮಾರಸ್ವಾಮಿ, ಚಲುವರಾಯಸ್ವಾಮಿ
Edited By:

Updated on: Aug 23, 2024 | 8:47 PM

ಮಂಡ್ಯ, ಆ.23: ಸಕ್ಕರೆ ನಗರಿ ಮಂಡ್ಯ(Mandya) ಜಿಲ್ಲೆ ಅಂದರೇ ಸಾಕು ಚುನಾವಣೆಗಳಿಗೆ ಸಾಕಷ್ಟು ಫೇಮಸ್. ಇಲ್ಲಿ ಯಾವುದೇ ಚುನಾವಣೆ ನಡೆದರೂ ಕೂಡ ಜಿದ್ದಾಜಿದ್ದಿ ಏರ್ಪಡುತ್ತದೆ. ಅದು ಲೋಕಲ್ ಚುನಾವಣೆ(Election) ಅಥವಾ ಲೋಕಸಭಾ ಚುನಾವಣೆ ಇರಬಹುದು. ಯಾವುದೇ ಎಲೆಕ್ಷನ್ ಇದ್ದರೂ ಜಿದ್ದಾಜಿದ್ದಿ ಅಂತೂ ತಪ್ಪಲ್ಲ. ಅದರಲ್ಲೂ ಇತ್ತಿಚೇಗೆ ಲೋಕಸಭಾ ಚುನಾವಣೆ ಮುಗಿದು, ಇದೀಗ ಜಿಲ್ಲೆಯಲ್ಲಿ ಲೋಕಲ್ ಸಮರ ಕೂಡ ಏರ್ಪಟ್ಟಿದೆ. ಜಿಲ್ಲೆಯ ನಗರಸಭೆ ಹಾಗೂ ಪುರಸಭೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ ಸ್ಥಾನದ ಚುನಾವನೆ ನಡೆಯುತ್ತಿದೆ.

ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಂಡ್ಯದಿಂದ ಗೆಲುವು ಸಾಧಿಸಿ ಇದೀಗ ಕೇಂದ್ರದ ಸಚಿವರು ಕೂಡ ಆಗಿದ್ದಾರೆ. ಹೀಗಾಗಿ ಎಲ್ಲಾ ಚುನಾವಣೆಗಳನ್ನ ಕೂಡ ಗಮನಹರಿಸಬೇಕಿದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಲೋಕಲ್ ಫೈಟ್​ ಸಾಕಷ್ಟು ಕೂತುಹಲ ಮೂಡಿಸಿದೆ.

ಇದನ್ನೂ ಓದಿ:ಲೋಕಸಭಾ ಚುನಾವಣೆ: ಮಂಡ್ಯದಲ್ಲಾದ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಕಾಂಗ್ರೆಸ್

ಮಂಡ್ಯ ನಗರಸಭೆ ಚುನಾವಣೆ

ಮಂಡ್ಯ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಇದೇ ತಿಂಗಳು 28ರಂದು ನಡೆಯುತ್ತಿದ್ದು, ಒಟ್ಟು 35 ಸದಸ್ಯರ ಬಲವೊಂದಿದ್ದು, ಅದರಲ್ಲಿ ಕಾಂಗ್ರೆಸ್ 10, ಜೆಡಿಎಸ್​ 18, ಬಿಜೆಪಿ 2 ಹಾಗೂ ಪಕ್ಷೇತರ 5 ಸದಸ್ಯರು ಇದ್ದಾರೆ. ಇದರ ಜೊತೆಗೆ ಜೆಡಿಎಸ್ ಎಂಪಿ ಹಾಗೂ ಕಾಂಗ್ರೆಸ್ ಎಮ್​ಎಲ್​ಎಗೆ ಮತದಾನದ ಹಕ್ಕಿದೆ. ಮ್ಯಾಜಿಕ್ ನಂಬರ್ 19 ಇದ್ದು, ಹೀಗಾಗಿ ಜೆಡಿಎಸ್ ಶತಾಯ ಗತಾಯ ಅಧಿಕಾರಕ್ಕೆ ಏರಲು ತಯಾರಿ ಮಾಡುತ್ತಿದೆ. ಆದರೆ, ಜೆಡಿಎಸ್​ಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕೂಡ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಜೆಡಿಎಸ್ ಬಿಜೆಪಿ ಹಾಗೂ ಪಕ್ಷೇತರರನ್ನ ಸೆಳೆದು ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗಿದೆ.

ಹೀಗಾಗಿ ಕುದುರೆ ವ್ಯಾಪಾರ ಕೂಡ ಜೋರಾಗಿದ್ದು, ಕೆಲವಷ್ಟು ಸದಸ್ಯರಿಗೆ ಪ್ರವಾಸದ ಭಾಗ್ಯ ಕೂಡ ಕಲ್ಪಿಸಲಾಗಿದೆ. ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಲೋಕಲ್ ಸಮರದ ಕಾವು ಜೋರಾಗಿದೆ. ಯಾರಿಗೆ ಗದ್ದುಗೆ ಎನ್ನುವುದನ್ನ ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ