ವೈರಲ್ ಆಡಿಯೋ: ಮಾದೇಗೌಡ ವಿರುದ್ಧ ಅವಹೇಳನಕಾರಿ ಮಾತು ನನ್ನದೇ ಎಂದ ಶಿವರಾಮೇಗೌಡ -ಶಿಸ್ತುಕ್ರಮಕ್ಕೆ ಜೆಡಿಎಸ್ ತೀರ್ಮಾನ?

ನಾನು ಈ ವಿಚಾರವನ್ನ ಇಲ್ಲಿಗೆ ನಿಲ್ಲಿಸುತ್ತೇನೆ. ನಾನು ಮಾದೇಗೌಡರ ಬಗ್ಗೆ ಈಗಲೂ ಗೌರವ ಇಟ್ಟುಕೊಂಡಿದ್ದೇನೆ. ಆದ್ರೆ ಹಳೆಯ ಸಂಧರ್ಭವನ್ನ ಹೇಳಿದೆ ಅಷ್ಟೆ ಎಂದು ವೀಡಿಯೋ ಬಿಡುಗಡೆ ಮಾಡಿ ಮಧು ಮಾದೇಗೌಡರ ಹೇಳಿಕೆಗೆ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ.

ವೈರಲ್ ಆಡಿಯೋ: ಮಾದೇಗೌಡ ವಿರುದ್ಧ ಅವಹೇಳನಕಾರಿ ಮಾತು ನನ್ನದೇ ಎಂದ ಶಿವರಾಮೇಗೌಡ -ಶಿಸ್ತುಕ್ರಮಕ್ಕೆ ಜೆಡಿಎಸ್ ತೀರ್ಮಾನ?
ಮಂಡ್ಯ ಮಅಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹಾಗೂ ದಿವಂಗತ ಸಂಸದ ಜಿ ಮಾದೇಗೌಡ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 31, 2022 | 11:56 AM

ಬೆಂಗಳೂರು/ಮಂಡ್ಯ: ಜೆಡಿಎಸ್ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡರ (lr shivarame gowda) ಆಡಿಯೋ ವೈರಲ್ (Viral audio) ವಿಚಾರದಲ್ಲಿ ಶಿವರಾಮೇಗೌಡ ಮೇಲೆ ಶಿಸ್ತು ಕ್ರಮಕ್ಕೆ ಜೆಡಿಎಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆಡಿಯೋದಲ್ಲಿ ದಿವಂಗತ ಸಂಸದ, ಹಿರಿಯ ನಾಯಕ ಜಿ ಮಾದೇಗೌಡರಿಗೆ (g madegowda) ಎಕ್ಕಡದಲ್ಲಿ ಹೊಡೆದಿದ್ದೆ ಎಂದು ಶಿವರಾಮೇಗೌಡ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಶಿವರಾಮೇಗೌಡರ ವರ್ತನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದ್ದು, ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಜೆಡಿಎಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ. ತಕ್ಷಣ ಅವರ ಮೇಲೆ ಕ್ರಮ ತೆಗೆಕೊಳ್ಳವಂತೆ ಮಂಡ್ಯ ಜೆಡಿಎಸ್ ನಾಯಕರು ಒತ್ತಡ ಹಾಕಿದ್ದಾರೆ.

ಹಳೆಯ ಸಂಧರ್ಭವನ್ನ ಹೇಳಿದ್ದೆ ಅಷ್ಟೆ ಎಂದು ವೀಡಿಯೋ ಬಿಡುಗಡೆ ಮಾಡಿದ ಎಲ್ ಆರ್ ಶಿವರಾಮೇಗೌಡ: ಈ ಮಧ್ಯೆ, ವೈರಲ್ ಆದ ಆಡಿಯೋ ನನ್ನದೇ ಎಂದು ಜೆಡಿಎಸ್ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಹೇಳಿದ್ದಾರೆ. ಆಡಿಯೋದಲ್ಲಿ ದಿ. ಮಾದೇಗೌಡರ ಬಗ್ಗೆ ಶಿವರಾಮೇಗೌಡ ಹೇಳಿಕೆ ವಿರುದ್ಧ ಮಾದೇಗೌಡ ಪುತ್ರ ವಾಗ್ದಾಳಿ ಹಿನ್ನೆಲೆ ಮಾತನಾಡಿರುವ ಎಲ್ ಆರ್ ಶಿವರಾಮೇಗೌಡ, ಮಾದೇಗೌಡರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿಲ್ಲ. ನಾನು ಮಾದೇಗೌಡರಿಗೆ ಹೆದರಿಕೊಂಡು ನಮ್ಮೂರಲ್ಲಿ ಕೂತಿಲ್ಲ.

ನಾನು 420 ಕೆಲಸ ಮಾಡಿದ್ರೆ ದಾಖಲೆ ಸಮೇತ ಬನ್ನಿ. ನನ್ನ ವಿರುದ್ಧ ಆರೋಪ ಸುಳ್ಳಾದ್ರೆ ನಿಮ್ಮನ್ನ 840 ಅಂತಾರೆ. ಮಧು ಮಾದೇಗೌಡರೇ ನಿಮ್ಮನ್ನ ಟೋಕನ್‌ ಗಿರಾಕಿ ಅಂತಾರೆ. ಅಪ್ಪನ ಹೆಸರಲ್ಲಿ ಟೋಕನ್ ಹಾಕ್ತಾರೆ ಎಂದು ಜನರು ಹೇಳ್ತಾರೆ. ನಾಲಿಗೆ ಹರಿಬಿಡಬೇಡಿ, ಗೊಡ್ಡು ಬೆದರಿಕೆಗೆ ನಾನು ಹೆದರಲ್ಲ. ರಾಜಕಾರಣದಲ್ಲಿ ಇದೆಲ್ಲ ಬರುತ್ತೆ, ಇದನ್ನ ಇಲ್ಲಿಗೆ ನಿಲ್ಲಿಸೋಣ. ಇದನ್ನೆಲ್ಲಾ ಬೆಳೆಸಬೇಕು ಅಂದ್ರೆ ನಾನು ಎಲ್ಲದಕ್ಕೂ ರೆಡಿ. ಸತ್ತವರ ಬಗ್ಗೆ ಇಷ್ಟೊಂದು ಮಾತನಾಡುವುದು ಸರಿಯಲ್ಲ. ನಾನು ಈ ವಿಚಾರ ಇಲ್ಲಿಗೇ ನಿಲ್ಲಿಸುತ್ತೇನೆ ಎಂದು ಶಿವರಾಮೇಗೌಡ ಹೇಳಿದ್ದಾರೆ.

ನಾನು ಈ ವಿಚಾರವನ್ನ ಇಲ್ಲಿಗೆ ನಿಲ್ಲಿಸುತ್ತೇನೆ. ನಾನು ಮಾದೇಗೌಡರ ಬಗ್ಗೆ ಈಗಲೂ ಗೌರವ ಇಟ್ಟುಕೊಂಡಿದ್ದೇನೆ. ಆದ್ರೆ ಹಳೆಯ ಸಂಧರ್ಭವನ್ನ ಹೇಳಿದೆ ಅಷ್ಟೆ ಎಂದು ವೀಡಿಯೋ ಬಿಡುಗಡೆ ಮಾಡಿ ಮಧು ಮಾದೇಗೌಡರ ಹೇಳಿಕೆಗೆ ಎಲ್.ಆರ್. ಶಿವರಾಮೇಗೌಡ ತಿರುಗೇಟು‌ ಕೊಟ್ಟಿದ್ದಾರೆ.

’ನಿಮ್ಮಪ್ಪ ಅವಕಾಶ ಕೊಟ್ಟಿದ್ರೆ ಇಷ್ಟೊತ್ತಿಗೆ ಎರಡು ಬಾರಿ ಮಂತ್ರಿ ಆಗುತ್ತಿದ್ದೆ. ನನ್ನ ತೆಗೆದವನು ನಿಮ್ಮಪ್ಪ’: ನಾನು ಮಾದೇಗೌಡರ ವಿರುದ್ಧ ಅವಹೇಳನವಾಗಿ ಏನು ಹೇಳಿಲ್ಲ. ಈ ಹಿಂದೆ ನನಗೆ ಮಾದೇಗೌಡರ ನಡುವೆ ಹೋರಾಟ ಘಟನಾವಳಿಯನ್ನು ಹೇಳಿದ್ದೇನೆ. ನಾನು ಮಾದೇಗೌಡರಿಗೆ ಹೆದರಿಕೊಂಡು ನಮ್ಮೂರಲ್ಲಿ ಕೂತಿಲ್ಲ. ಮಾದೇಗೌಡರ ವಿರುದ್ಧ ಗೆದ್ದು ಹೋರಾಟ ಮಾಡಿದ್ದೇನೆ. ನನ್ನ ಜೀವನದಲ್ಲಿ 9 ಚುನಾವಣೆಗಳನ್ನು ಎದುರಿಸಿದ್ದೇನೆ. ಮಧುಮಾದೇಗೌಡ ರೀತಿ ದೊಡ್ಡ ವ್ಯಕ್ತಿತ್ವ ಇದ್ದವರ ಮಗ ನಾನಲ್ಲ. ಮಧುಮಾದೇಗೌಡ ಹೀಗಿದ್ರು ಮದ್ದೂರು ತಾಲೂಕಿನಲ್ಲಿ ಮೇಲಕ್ಕೆ ಎದ್ದಿಲ್ಲ. ನಾನು ಅರ್ಧ ಚುನಾವಣೆಯಲ್ಲಿ ಗೆದ್ದಿದ್ದೇನೆ ಅರ್ಧದಲ್ಲಿ ಸೋತಿದ್ದೇನೆ. ನಿಮ್ಮ ಸಾಧನೆ ಏನು? ಎಂಎಲ್‌ಸಿ ಚುನಾವಣೆ ಒಂದರಲ್ಲಿ ನಾಮಿನೇಷನ್ ಆಗಿರೋದು ಬಿಟ್ಟರೇ ಎಲ್ಲೂ‌ ಹೊರಗಡೆ ಬಂದಿಲ್ಲ.

ನನ್ನ ಹೆಸರು ಶಿವರಾಮೇಗೌಡ ಅಷ್ಟೇ. ನೀವು ನಿಮ್ಮ ಅಪ್ಪನ ಹೆಸರು ಇಟ್ಟುಕೊಂಡಿದ್ದೀರಾ. ಹೀಗಿರುವಾಗ ನೀವು 4 ಬಾರಿ ಎಂಎಲ್‌ಎ ಆಗಬೇಕಿತ್ತು. ನಾಲಿಗೆ ಹರಿಬಿಡಬೇಡಿ. ಈ ಗೊಡ್ಡು ಬೆದರಿಕೆಗೆ ನಾನು ಹೆದರಲ್ಲ. ರಾಜಕಾರಣದಲ್ಲಿ ಇದೆಲ್ಲ ಬರುತ್ತದೇ ಇಲ್ಲಿಗೆ ನಿಲ್ಲಿಸೋಣಾ ಇದನ್ನು. ಬೆಳಸಬೇಕು ಅಂದ್ರೆ ನಾನು ಅಡ್ಡಿ ಇಲ್ಲ, ಎಲ್ಲಾದಕ್ಕೂ ರೆಡಿ ಇದ್ದೇನೆ. 1999 ರಲ್ಲಿ ಕಾಂಗ್ರೆಸ್‌ನಲ್ಲಿ ನಿಲ್ಲೋಕೆ ನಿಮ್ಮಪ್ಪ ಅವಕಾಶ ಕೊಟ್ಟಿದ್ರೆ ಇಷ್ಟೊತ್ತಿಗೆ ಎರಡು ಬಾರಿ ಮಂತ್ರಿ ಆಗುತ್ತಿದ್ದೆ. ನನ್ನ ತೆಗೆದವನು ನಿಮ್ಮಪ್ಪ, ಇತಿಹಾಸ ಬೇಡಾ. ಸತ್ತವರ ಬಗ್ಗೆ ಇಷ್ಟೊಂದು ಮಾತನಾಡದುವುದು ಸರಿಯಲ್ಲ ಎಂದು ಮಧುಮಾದೇಗೌಡರ ಹೇಳಿಕೆಗೆ ಎಲ್.ಆರ್.ಶಿವರಾಮೇಗೌಡ ತಿರುಗೇಟು‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಸುಮಲತಾದು ಕಠೋರ ಹೃದಯ; ನಟಿ ರಮ್ಯಾಗೆ ಆದ ಸ್ಥಿತಿ ಸುಮಲತಾಗೂ ಆಗುತ್ತೆ: ಎಲ್. ಆರ್. ಶಿವರಾಮೇಗೌಡ ಭವಿಷ್ಯ

Published On - 11:43 am, Mon, 31 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್