ಮಂಡ್ಯ ಬಾಲಕಿ ಮೇಲೆ ಅತ್ಯಾಚಾರ​​, ಕೊಲೆ : ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ

ಮಳವಳ್ಳಿಯಲ್ಲಿ ಬಾಲಕಿ ದಿವ್ಯ ಮೇಲೆ ಅತ್ಯಾಚಾರ​​ ಮತ್ತು ಕೊಲೆ ಪ್ರಕರಣ ಸಂಬಂಧ ಮೃತ ಬಾಲಕಿ ಕುಟುಂಬಕ್ಕೆ ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.

ಮಂಡ್ಯ ಬಾಲಕಿ ಮೇಲೆ ಅತ್ಯಾಚಾರ​​, ಕೊಲೆ : ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 16, 2022 | 4:38 PM

ಮಂಡ್ಯ: ಮಳವಳ್ಳಿಯಲ್ಲಿ ಬಾಲಕಿ ದಿವ್ಯ ಮೇಲೆ ಅತ್ಯಾಚಾರ​​ ಮತ್ತು ಕೊಲೆ ಪ್ರಕರಣ (Rape and Murder case) ಸಂಬಂಧ ಮೃತ ಬಾಲಕಿ ಕುಟುಂಬಕ್ಕೆ ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ (Basavaraj Bommai) 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಮಂಡ್ಯದ (Mandya) ಕೆ.ಆರ್​.ಪೇಟೆ ತಾಲೂಕಿನ (KR Pete) ತ್ರಿವೇಣಿ ಸಂಗಮದಲ್ಲಿ ಇಂದು (ಅ.16) ನಡೆದ ಕುಂಭಮೇಳ ಸಮಾರೋಪದಲ್ಲಿ ಮಾತನಾಡಿದ ಅವರು ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಪೊಲೀಸ್​​ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಎಲ್ಲ ಸೆಕ್ಷನ್‌ಗಳನ್ನೂ ಹಾಕಲಾಗಿದೆ ಎಂದು ತಿಳಿಸಿದರು.

ಬರೀ ಚಾರ್ಜ್​​ಶೀಟ್​​ ಹಾಕುವುದಲ್ಲ, ಇದೊಂದು ಪಾಠವಾಗುವಂತೆ ಉಗ್ರ ಶಿಕ್ಷೆ ನೀಡುತ್ತೇವೆ. ಇದೊಂದು ಅಮಾನುಷ ಕೃತ್ಯ. ಮನುಷ್ಯತ್ವ ಇಲ್ಲದವರು ಮಾತ್ರ ಹೀಗೆ ಮಾಡಲು ಸಾಧ್ಯ. ಆ ಕಂದಮ್ಮಳ ಪರಿಸ್ಥಿತಿ ನೋಡಿದರೆ ಕರುಳು ಕಿತ್ತು ಬರುತ್ತೆ. ನಿಮ್ಮ ಮನಸಿನಲ್ಲಿ ಯಾವ ಶಿಕ್ಷೆಯಾಗಬೇಕು ಅಂತಾ ಇದೆ, ನನಗೂ ಅದೇ ಭಾವನೆ ಇದೆ. ಕಾನೂನು ನಮ್ಮ ಮನದ ಭಾವನೆಯನ್ನು ಮಾಡಿಕೊಳ್ಳುತ್ತದೆ ಅನ್ನೋ ವಿಶ್ವಾಸವಿದೆ ಎಂದು ಸಿಎಂ ಬೊಮ್ಮಾಯಿ ಭಾವುಕರಾದರು.

ಆಧ್ಯಾತ್ಮದ ಮಾತುಗಳನ್ನಾಡಿ, ಆದಿ ಶಂಕರಾಚಾರ್ಯರನ್ನು ಸ್ಮರಿಸಿದ ಸಿಎಂ ಬೊಮ್ಮಾಯಿ

ನಾಗರೀಕತೆ ಬೇರೆ, ಸಂಸ್ಕೃತಿ ಬೇರೆ. ನಾವು ಏನು ಆಗಿದ್ದೇವೆ ಅನ್ನೋದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಆತ್ಮಸಾಕ್ಷಿ, ಆತ್ಮ ಧೈರ್ಯ ಇದ್ದಗ ಆತ್ಮಗೌರವ ಸಿಗುತ್ತೆ. ಆತ್ಮಗೌರವ ಸಿಕ್ಕರೆ ಆತ್ಮ ಸಂತೃಪ್ತವಾಗಿರುತ್ತದೆ. ಆತ್ಮ ಸಂತೃಪ್ತವಾಗಿರುವ ವ್ಯಕ್ತಿ ಸ್ಥಿತಪ್ರಜ್ಞನಾಗಿರುತ್ತಾನೆ. ಸ್ಥಿತಪ್ರಜ್ಞನಿರುವ ವ್ಯಕ್ತಿ ಏನೇ ಬಂದರೂ ವಿಚಲಿತ ಆಗಲ್ಲ, ತಪ್ಪು ಮಾಡಲ್ಲ. ಆಧ್ಯಾತ್ಮಿಕವಾಗಿ ಸೃಷ್ಟಿಕರ್ತನಲ್ಲಿ ಲೀನವಾಗಬೇಕು. ಜೀವನದಲ್ಲಿ ಗುರು ಗುರಿ ಇರಬೇಕು. ಗುರು ಸಿಗುವುದು ಶ್ರದ್ದಾ ಭಕ್ತಿಯಿಂದ. ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿ. ಪ್ರೀತಿಯಲ್ಲಿ ನಾನಾ ವಿಧವಿದೆ. ಒಂದು ಡೀಲ್ ಮಾಡಿಕೊಂಡು ಕರಾರು ಮಾಡಿಕೊಂಡು ಪ್ರೀತಿ. ಇದ್ಯಾವುದು ಇಲ್ಲದ ಕರಾರು ರಹಿತ ಪ್ರೀತಿಯೇ ಭಕ್ತಿ. ಗುರುವಿನಲ್ಲಿ ಲೀನವಾದರೆ ಗುರು ಸಿಗುತ್ತಾರೆ ಎಂದು ಆಧ್ಯಾತ್ಮದ ನುಡಿಗಳನ್ನಾಡಿದರು.

ಆಧ್ಯಾತ್ಮಿಕ ಒಳಾರ್ಥ ಕೊಟ್ಟವರು ಆದಿ ಶಂಕರಾಚಾರ್ಯರು. ಶಂಕರಚಾರ್ಯರು ದಕ್ಷಿಣದವರೆಗೂ ಪ್ರಯಾಣ ಮಾಡದಿದ್ದರೆ, ದೇಶದಲ್ಲಿ ಹಿಂದೂ ಸಮಾಜ ಹಲವು ಸವಾಲು ಎದುರಿಸಬೇಕಾಗಿತ್ತು. ಆದರೆ ಶಂಕರಾಚಾರ್ಯರು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ನಮ್ಮ ದೇಶ ಬೇರೆ ದೇಶಕ್ಕಿಂತ ವಿಭಿನ್ನ. ಇಲ್ಲಿ ಆಗಿರುವ ಆಧ್ಯಾತ್ಮಿಕ ಕ್ರಾಂತಿ ಬೇರೆ ಯಾವ ದೇಶದಲ್ಲೂ ಇಲ್ಲ. ನಮ್ಮದು ಶ್ರೀಮಂತ ದೇಶ, ಸಾಮಾಜಿಕ ಮೌಲ್ಯದ ಬದುಕು ನಮ್ಮದು. ಆರ್ಥಿಕವಾಗಿ ನಾವು ಸಧೃಡರಲ್ಲದೆ ಇದ್ದರು ಸಂಸ್ಕೃತಿಯಲ್ಲಿ ಶ್ರೀಮಂತರಾಗಿದ್ದೇವೆ. ಇದನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ನಮ್ಮ ಸಂಸ್ಕೃತಿಯ ಮೇಲೆ ಅನೇಕ ದಾಳಿಗಳಾಗಿವೆ. ದೇಶಕ್ಕೆ ಬಂದ ಎಲ್ಲರ ಕೊನೆ ಭಾರತದಲ್ಲೇ ಆಯ್ತು. ಮೊಘಲ್, ಬ್ರಿಟೀಷ್, ಅಲೆಗ್ಸಾಂಡರ್, ಪೋರ್ಚಗಲ್ ಎಲ್ಲರ ಕೊನೆ ಇಲ್ಲೇ ಆಗಿದ್ದು. ನಮ್ಮ ಧರ್ಮದಲ್ಲಿ ಸಹಿಷ್ಣುತೆ ವೈಚಾರಿಕ ಕ್ರಾಂತಿ ಇದೆ. ಎಲ್ಲರೂ ನಮ್ಮವರು ಇಡೀ ಮನುಕುಲ ಒಂದು ಅನ್ನೋ ಭಾವ ನಮ್ಮಲ್ಲಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲಿ ಸುಖ, ಶಾಂತಿ ಮಾನವೀಯತೆ ಮೌಲ್ಯ ಉಳಿಯಬೇಕಾದರೆ ನಮ್ಮ ಧರ್ಮ ಉಳಿಯಬೇಕು ಎಂದು ಹೇಳಿದರು.

ಕುಂಭಮೇಳ ಒಂದು ಪುಣ್ಯ ಕಾರ್ಯವಾಗಿದ್ದು, ಇದು ಮುಂದುವರಿಯಬೇಕು. ಸಂಗಮದಲ್ಲಿ ಪವಿತ್ರ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಪ್ರತಿ 12 ವರ್ಷಕ್ಕೆ ಆಚರಣೆಗೆ ಸರ್ಕಾರಿ ಆಜ್ಞೆ ಹೊರಡಿಸುತ್ತೇನೆ. ಪ್ರವಾಸೋದ್ಯಮದ ಅಭಿವೃದ್ಧಿಗೂ ವಿಶೇಷ ಅನುದಾನ ನೀಡುತ್ತೇನೆ. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಮಂಡ್ಯ ಅಂದರೆ ಇಂಡಿಯಾ ಅನ್ನೋ ಮಾತಿದೆ. ನಮ್ಮ ತಂದೆ ಕಾಲದಿಂದಲೂ ಮಂಡ್ಯಕ್ಕೂ ನಮಗು ಅವಿನಾಭಾವ ಸಂಬಂಧ ಇದೆ. ಸಕ್ಕರೆ ಕಾರ್ಖಾನೆಗೆ ಮುಂದಿನ ದಿನದಲ್ಲಿ ಮತ್ತಷ್ಟು ಆರ್ಥಿಕ ಸಹಾಯ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಬೆಳೆ ನಾಶಕ್ಕೆ 2.30 ಕೋಟಿ ರೈತರಿಗೆ ಪರಿಹಾರ

ನೀರಾವರಿ ಯೋಜನೆಗೆ ಡಿಪಿಆರ್ ಮಾಡಲು ಸೂಚನೆ ನೀಡಲಾಗಿದ್ದು, ಅದಕ್ಕೂ ವಿಶೇಷ ಅನುದಾನ ನೀಡಲಾಗುವುದು. ರಾಜ್ಯದ ಎಲ್ಲಾ ಕಡೆ ಮಳೆ ಹಾನಿಯಾಗಿದೆ. ಅಕ್ಟೋಬರ್ ಬಂದರೂ ಮಳೆ ನಿಂತಿಲ್ಲ. ಅದನ್ನು ನಿವಾಸಿರುವ ಕೆಲಸ ಮಾಡಬೇಕಿದೆ. ಮಂಡ್ಯ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಕಳೆದ ಮಳೆಯ ಪರಿಹಾರ 2.30 ಕೋಟಿ  ಪರಿಹಾರ ನೀಡಲಾಗಿದೆ. ಮಳೆಯಿಂದ ಮೃತರಾದ ಇಬ್ಬರು ಮೃತ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ ಎಂದು ಮಾತನಾಡಿದ್ದಾರೆ

ಮನೆ ಬೆಳೆ ನಾಶ ಪರಿಹಾರ ನೀಡಲಾಗಿದೆ. ಮೊದಲು ಬೆಳೆ ನಾಶ ಪರಿಹಾರ ನೀಡಲು ಒಂದು ವರ್ಷ ಬೇಕಾಗುತ್ತಿತ್ತು. ಈಗ ಕೇವಲ ಒಂದು ತಿಂಗಳಲ್ಲಿ ಅವರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ. ನಮ್ಮ ಸರ್ಕಾರ ಪರಿಹಾರದ ಹಣವನ್ನು ದುಪ್ಪಟ್ಟು ಮಾಡಿದೆ. ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಸಹಾ ಹಣ ನೀಡುತ್ತಿದೆ. ದೇಶದಲ್ಲೇ ನಮ್ಮ ಸರ್ಕಾರ ಮಾತ್ರ ಪರಿಹಾರ ದುಪ್ಪಟ್ಟು ಮಾಡಿದೆ ಎಂದು ನುಡಿದರು.

ರಾಷ್ಟ್ರೀಯ ಹೆದ್ದಾರಿ: ಶೀಘ್ರ ಕ್ರಮ

ರಾಷ್ಟ್ರೀಯ ಹೆದ್ದಾರಿ ವಿಚಾರ ಅಧಿಕಾರಿಗಳ ಸಭೆ ನಡೆಸಲಾಗುವುದು. ಮೈಸೂರು ಬೆಂಗಳೂರು ಮಳೆ ನೀರು ನಿಲ್ಲುವ ವಿಚಾರವಾಗಿ ವಿಶೇಷ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ಬ್ಲಾಕ್ ಸ್ಪಾಟ್‌ಗಳನ್ನು ನಿವಾರಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:07 pm, Sun, 16 October 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ