AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಗಳ ಕಳ್ಳತನ, ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

Mandya News: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಪಿಡಿಜಿ ಕೊಪ್ಪಲು ಎಂಬ ಗ್ರಾಮವೊಂದರಲ್ಲಿ ತಡರಾತ್ರಿ ರೈತ ಲೋಕೇಶ್ ಎಂಬುವವರಿಗೆ ಸೇರಿದ 5 ಮೇಕೆಗಳು ಕಳ್ಳತನವಾಗಿವೆ. ಕಳ್ಳರು ಗ್ರಾಮಕ್ಕೆ ಆಗಮಿಸಿದ್ದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯ ಕೊಟ್ಟಿಗೆಯಲ್ಲಿ ಕಟ್ಟು ಹಾಕಿದ್ದ ಮೇಕೆಗಳು ಕಳ್ಳತನವಾಗಿವೆ.

ಮಂಡ್ಯ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಗಳ ಕಳ್ಳತನ, ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ
ಖದೀಮರ ಕಾರು ಸಿಸಿಟಿವಿಯಲ್ಲಿ ಸೆರೆ
ಪ್ರಶಾಂತ್​ ಬಿ.
| Edited By: |

Updated on: Sep 03, 2023 | 12:54 PM

Share

ಮಂಡ್ಯ, ಸೆ.03: ಚಾಲಾಕಿ ಕಳ್ಳರ ಕೈಚಳಕಕ್ಕೆ ಕೊಟ್ಟಿಗೆಯಲ್ಲಿ ಕಟ್ಟಿದ್ದ 5 ಮೇಕೆಗಳು ಕಳ್ಳತನವಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಪಿಡಿಜಿ ಕೊಪ್ಪಲು ಎಂಬ ಗ್ರಾಮವೊಂದರಲ್ಲಿ ತಡರಾತ್ರಿ ರೈತ ಲೋಕೇಶ್ ಎಂಬುವವರಿಗೆ ಸೇರಿದ 5 ಮೇಕೆಗಳು ಕಳ್ಳತನವಾಗಿವೆ. ಕಳ್ಳರು ಗ್ರಾಮಕ್ಕೆ ಆಗಮಿಸಿದ್ದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯ ಕೊಟ್ಟಿಗೆಯಲ್ಲಿ ಕಟ್ಟು ಹಾಕಿದ್ದ ಮೇಕೆಗಳು ಕಳ್ಳತನವಾಗಿವೆ. ಖದೀಮರು ಮನೆಯ ಬೀಗ ಮುರಿದು 5 ಮೇಕೆಗಳನ್ನು ಕದ್ದಿದ್ದಾರೆ.

ಕಳ್ಳತನದ ವೇಳೆ ಮನೆಯವರು ಎಚ್ಚರಗೊಳ್ಳಬಹುದು ಎನ್ನುವ ಕಾರಣಕ್ಕೆ ಕೊಟ್ಟಿಗೆಯ ಸಮೀಪದ ಮೂರು ಮನೆಗಳ ಹೊರ ಭಾಗದಿಂದ ಬಾಗಿಲು ಹಾಕಿ ಕಳ್ಳತನ ಮಾಡಲಾಗಿದೆ. ಘಟನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ನಷ್ಟ ಎದುರಾಗಿದೆ. ಮಾರುತಿ 800 ವಾಹನದಲ್ಲಿ ಗ್ರಾಮಕ್ಕೆ ಬಂದಿದ್ದ ಖದೀಮರು ಮೇಕೆ ಕದ್ದಿದ್ದಾರೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೆ.ಆರ್. ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕರ್ನಾಟಕದ ಮುಜರಾಯಿ ಇಲಾಖೆ ಅರ್ಚಕರಿಗೆ ಗುಡ್ ನ್ಯೂಸ್, ತಸ್ತಿಕ್​​ ಹಣ ರಿಲೀಸ್​

ಮೇಕೆ ಕದ್ದರೆಂದು ಯುವಕರಿಗೆ ಚಿತ್ರಹಿಂಸೆ ಮಾಡಿದ ಗ್ರಾಮಸ್ಥರು

ತೆಲಂಗಾಣದ ಮಂದಮರ್ರಿಯಲ್ಲಿ ಮೇಕೆ ಕದ್ದ ಶಂಕೆಯಲ್ಲಿ ದಲಿತ ವ್ಯಕ್ತಿ ಹಾಗೂ ಯುವಕನಿಗೆ ಚಿತ್ರಹಿಂಸೆ ನೀಡಿದ್ದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಹಿಂಡಿನಲ್ಲಿ ಮೇಕೆ ಕದ್ದಿದ್ದಾರೆ ಎಂಬ ಶಂಕೆಯಿಂದ ಮಂದಮರ್ರಿಯಲ್ಲಿ ದಲಿತ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ತಲೆಕೆಳಗಾಗಿ ಕಟ್ಟಿ ಹಾಕಿ ಹೊಗೆ ಹಾಕಿ, ಪ್ರಾಣಿಗಳಂತೆ ಥಳಿಸಿದ್ದಾರೆ ಎಂದು ಬೆಳ್ಳಂಪಳ್ಳಿ ಪೊಲೀಸರು ತಿಳಿಸಿದ್ದಾರೆ. ಮಂದಮರ್ರಿಯ ಅಂಗಡಿ ಬಜಾರ್‌ನ ಸ್ವರೂಪ್ ಮತ್ತು ಅವರ ಪುತ್ರ ಶ್ರೀನಿವಾಸ್‌ ಅವರು ಪಟ್ಟಣದ ಹೊರವಲಯದ ಗಂಗನೀಲಪಂಪುಳದಲ್ಲಿ ಕುರಿ ಸಾಕುತ್ತಿದ್ದರು. ಇಪ್ಪತ್ತು ದಿನಗಳ ಹಿಂದೆ ಒಂದು ಮೇಕೆ ನಾಪತ್ತೆಯಾಗಿದೆ. ಕುರುಬ ಬಾಲಕ ತೇಜ (19) ಮತ್ತು ಕಿರಣ್ (30) ಅವರ ಕೈವಾಡವಿದೆ ಆರೋಪಿಸಿ, ಥಳಿಸಿರುವ ಘಟನೆ ನಡೆದಿದೆ. ಸದ್ಯ ಈಗ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?