ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್ ನಿಧನ

ರಾಮಸ್ವಾಮಿ ಅಯ್ಯಂಗಾರ್ 60 ವರ್ಷ ವಯಸ್ಸಾಗಿದ್ರು ಸಲೀಸಾಗಿ ಮೇಲು ಕೋಟೆಯಲ್ಲಿರೋ ಯೋಗ ನರಸಿಂಹ ಸ್ವಾಮಿಯ ಬೆಟ್ಟವನ್ನು ಯಾವುದೇ ಆಯಾಸವಿಲ್ಲದೆ ತಲೆಯ ಮೇಲೆ ನೀರಿನ ಪಾತ್ರೆ ಹೊತ್ತು ಬೆಟ್ಟ ಹತ್ತುತ್ತಿದ್ದರು.

ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್ ನಿಧನ
ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್
Follow us
TV9 Web
| Updated By: ಆಯೇಷಾ ಬಾನು

Updated on: Jun 14, 2022 | 3:41 PM

ಮಂಡ್ಯ: ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್(Ramaswamy Iyengar) ಮಂಗಳವಾರ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ನಿವಾಸಿ, ಮೇಲುಕೋಟೆ ಬಾಹುಬಲಿ ರಾಮಸ್ವಾಮಿ ಅಯ್ಯಂಗಾರ್ ಕೊನೆಯುಸಿರೆಳೆದಿದ್ದಾರೆ. ಕಳೆದ 6 ದಶಕಗಳಿಂದಲೂ‌ ಮೇಲುಕೋಟೆ ಬೆಟ್ಟದ ಮೇಲಿನ ಯೋಗನರಸಿಂಹ ಸ್ವಾಮಿ ದೇಗುಲಕ್ಕೆ ನೀರು ಹೊತ್ತೊಯ್ಯುತ್ತಿದ್ದ ನೌಕರ ರಾಮಸ್ವಾಮಿ ಅಯ್ಯಂಗಾರ್ ಮೇಲುಕೋಟೆ ಬಾಹುಬಲಿ ಎಂದೇ ಖ್ಯಾತಿ ಪಡೆದಿದ್ದರು.

ರಾಮಸ್ವಾಮಿ ಅಯ್ಯಂಗಾರ್ 60 ವರ್ಷ ವಯಸ್ಸಾಗಿದ್ರು ಸಲೀಸಾಗಿ ಮೇಲು ಕೋಟೆಯಲ್ಲಿರೋ ಯೋಗ ನರಸಿಂಹ ಸ್ವಾಮಿಯ ಬೆಟ್ಟವನ್ನು ಯಾವುದೇ ಆಯಾಸವಿಲ್ಲದೆ ತಲೆಯ ಮೇಲೆ ನೀರಿನ ಪಾತ್ರೆ ಹೊತ್ತು ಬೆಟ್ಟ ಹತ್ತುತ್ತಿದ್ದರು. ತನ್ನ ಮೆಚ್ಚಿನ ದೇವರ ಅಭಿಷೇಕಕ್ಕಾಗಿ ಬೆಟ್ಟದ ಕೆಳಗಿನ‌ ಕಲ್ಯಾಣಿಯಿಂದ ನೀರು ತಂದು ಅರ್ಚಕರಿಗೆ ನೀಡ್ತಿದ್ದರು. ಪ್ರತಿದಿನ‌ ಈ ರೀತಿ ನಾಲ್ಕೈದು ಭಾರಿ ನೀರು ಹೊತ್ತು ತಂದ್ರು ಇವರು ಮಾತ್ರ ದಣಿವು‌ ಎಂದು ಯಾವತ್ತು ಕುಳಿತ ಉದಾಹರಣೆ ಇಲ್ವಂತೆ. ಕಡಿದಾಗಿರೋ ಬೆಟ್ಟ ಹತ್ತಲು ಇಲ್ಲಿಗೆ ಬರೋ ಭಕ್ತರು ಸೇರಿದಂತೆ ಪ್ರವಾಸಿ ಮೆಟ್ಟಿಲುಗಳ ಮದ್ಯೆ ಹಾಕಿರೋ ಸಲಾಕೆ ಹಿಡಿದು ಬೆಟ್ಟ ಹತ್ತಿದ್ರೆ, ಇವ್ರು ಮಾತ್ರ ಯಾವುದೇ ಸಹಾಯವಿಲ್ಲದೆ ನಿರಾಯಾಸವಾಗಿ ತಲೆ ಮೇಲೆ ಭಾರದ ನೀರಿನ ಪಾತ್ರೆ ಹೊತ್ತು ಬೆಟ್ಟ ಹತ್ತುತ್ತಿದ್ದರು. ಇದನ್ನೂ ಓದಿ: Raga : ಮೃತ ವ್ಯಕ್ತಿಯನ್ನೂ ಬದುಕಿಸಬಲ್ಲ, ರೋಗಗಳನ್ನೂ ಗುಣಪಡಿಸಬಲ್ಲ ಸಂಜೀವಿನಿಯೇ ರಾಗ

ದೇವರ ಅಭಿಷೇಕ ಮತ್ತು ಪ್ರಸಾದ ತಯಾರಿಕೆಗೆ ಬೆಟ್ಟದ ಕೆಳಗಿನ ಕೊಳದಿಂದ ನೀರು ಸರಬರಾಜು ಮಾಡುವಂತಹ ಪುಣ್ಯದ ಕೆಲಸ ಮಾಡುತ್ತಿದ್ದರು. ಅವರ ಈ ಶಕ್ತಿ ಮತ್ತು ದೃಡಕಾಯ ಶರೀರ ಕಂಡು ಮೇಲುಕೋಟೆ ಬಾಹುಬಲಿ ಎಂದೇ ಜನರು ಹೆಸರು ಕೊಟ್ಟಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಮಸ್ವಾಮಿ ಅಯ್ಯಂಗಾರ್ ಇಂದು ಮಂಗಳವಾರ ದೇವರಿಗೆ ಪ್ರಿಯರಾಗಿದ್ದಾರೆ.

ಮಂಡ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ