AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗಮಂಗಲದಲ್ಲಿ ಮತ್ತೆ ನಂಗಾನಾಚ್ ಹಾವಳಿ, ಪುರುಷ ಮತದಾರರ ಸೆಳೆಯಲು ಮೈ ಚಳಿ ಬಿಟ್ಟು ಮೈ ಬಳುಕಿಸಿದ ಯುವತಿಯರು, ಶಾಸಕ ಸುರೇಶ್ ಗೌಡ ಬೆಂಬಲಿಗರ ಕೃಪೆ!

ಚುನಾವಣೆ ಹತ್ತಿರವಾಗುತ್ತಿದ್ದಂತೆ ನಂಗನಾಜ್ ಮತ್ತೆ ಮುನ್ನಲೆಗೆ ಬಂದಿದೆ. ಪುರುಷ ಮತದಾರನ ಮನ ಗೆಲ್ಲಲು ಜೆಡಿಎಸ್ ಶಾಸಕ ಸುರೇಶ್ ಗೌಡ ಬೆಂಬಲಿಗರು ನಂಗಾನಾಚ್ ಕಾರ್ಯಕ್ರಮ ಆಯೋಜಿಸಿದ್ದಾರೆ.

ನಾಗಮಂಗಲದಲ್ಲಿ ಮತ್ತೆ ನಂಗಾನಾಚ್ ಹಾವಳಿ, ಪುರುಷ ಮತದಾರರ ಸೆಳೆಯಲು ಮೈ ಚಳಿ ಬಿಟ್ಟು ಮೈ ಬಳುಕಿಸಿದ ಯುವತಿಯರು, ಶಾಸಕ ಸುರೇಶ್ ಗೌಡ ಬೆಂಬಲಿಗರ ಕೃಪೆ!
ನಾಗಮಂಗಲದಲ್ಲಿ ಮತ್ತೆ ನಂಗಾನಾಚ್ ಹಾವಳಿ
TV9 Web
| Updated By: ಆಯೇಷಾ ಬಾನು|

Updated on: Feb 28, 2023 | 11:10 AM

Share

ಮಂಡ್ಯ: ರಾಜ್ಯ ವಿಧಾನ ಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಆದ್ರೆ ಮಂಡ್ಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಪುರುಷ ಮತದಾರರನ್ನು ಸೆಳೆಯುವ ಉದ್ದೇಶದಿಂದ ಜಾತ್ರಾ ಮಹೋತ್ಸವದಲ್ಲೇ ನಂಗಾನಾಚ್ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಗಮಂಗಲದಲ್ಲಿ ಮತ್ತೆ ಅರಬೆತ್ತಲೆ ಡಾನ್ಸ್ ಮರುಕಳಿಸಿದೆ. ಜಾತ್ರಾ ಮಹೋತ್ಸವದಲ್ಲಿ ಅಶ್ಲೀಲ ನೃತ್ಯ ಆಯೋಜಿಸಿ ಯುವಕರು, ಪುರುಷರ ಮತದಾರರನ್ನು ಸೆಳೆಯುವ ತಂತ್ರ ನಡೆದಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ನಂಗನಾಜ್ ಮತ್ತೆ ಮುನ್ನೆಲೆಗೆ ಬಂದಿದೆ. ಪುರುಷ ಮತದಾರನ ಮನ ಗೆಲ್ಲಲು ಜೆಡಿಎಸ್ ಶಾಸಕ ಸುರೇಶ್ ಗೌಡ ಬೆಂಬಲಿಗರು ನಂಗಾನಾಚ್ ಕಾರ್ಯಕ್ರಮ ಆಯೋಜಿಸಿದ್ದಾರೆ. ವೇದಿಕೆ ಮೇಲೆ ಮೈ ಚಳಿ ಬಿಟ್ಟು ಯುವತಿಯರು ಮೈ ಬಳುಕಿಸಿದ್ದಾರೆ. ಅಶ್ಲೀಲ ನೃತ್ಯಕ್ಕೆ ಅಪ್ರಾಪ್ತ ಬಾಲಕನನ್ನ ಬಳಸಿಕೊಂಡು ಅಸಭ್ಯ ರೀತಿಯಲ್ಲಿ ನೃತ್ಯ ಮಾಡಿದ ಪ್ರಸಂಗವೂ ನಡೆದಿದೆ . ಸದ್ಯ ಈ ನೃತ್ಯಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kalaburagi; ಬೇರೆಯವರಂತೆ ಕೈಕಾಲು ಹಿಡಿದಿದ್ದರೆ ಯಾವತ್ತೋ ಮುಖ್ಯಮಂತ್ರಿಯಾಗಿರುತ್ತಿದ್ದೆ: ಬಸನಗೌಡ ಪಾಟೀಲ್ ಯತ್ನಾಳ್

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಟಿ.ಚನ್ನಾಪುರ ಗ್ರಾಮದಲ್ಲಿ ಶ್ರೀ ಮಂಚಮ್ಮದೇವಿ, ಮಸಣಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೆಡಿಎಸ್‌ ಶಾಸಕ ಸುರೇಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕರು ವೇದಿಕೆಯಿಂದ ತೆರಳುತ್ತಿದ್ದಂತೆ ಅಶ್ಲೀಲ ನೃತ್ಯ ಪ್ರಾರಂಭವಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಶಾಸಕ ಬಂಡೆಪ್ಪ ಕಾಂಶಪುರ್, ಮಾಜಿ MLC ಅಪ್ಪಾಜಿಗೌಡ ಹೆಸರು ನಮೂದಿಸಲಾಗಿದ್ದು ಮತದಾರರ ಓಲೈಕೆಗೆ ಅಸಭ್ಯ ನೃತ್ಯ ಪ್ರದರ್ಶಿಸಲಾಗಿದೆ.

ಅಸಭ್ಯ ನೃತ್ಯ ನೋಡಿ ಕೆಲ ಮಹಿಳೆಯರು ಕಾರ್ಯಕ್ರಮದಿಂದ ಕಾಲ್ಕಿತ್ತರು:

ಬೆಂಗಳೂರಿನಿಂದ ಬಂದಿದ್ದ ಚಂದದ ಯುವತಿಯರು ಮೈ ಮೇಲಿದ್ದ ಬಟ್ಟೆಯನ್ನ ಕಿತ್ತೆಸೆದು ಅರೆ ನಗ್ನರಾಗಿ ನೃತ್ಯ ಪ್ರದರ್ಶಿಸಿದ್ದಾರೆ. ಆರ್ಕೆಸ್ಟ್ರಾ ಹೆಸರಲ್ಲಿ ನಂಗಾನಾಚ್ ನಡೆಸಿ ಪಡ್ಡೆ ಹುಡುಗರ ಮನ ಗೆಲ್ಲಲು ಯತ್ನ ನಡೆದಿದೆ. ಅಸಭ್ಯ ನೃತ್ಯ ನೋಡಿ ಕೆಲ ಮಹಿಳೆಯರು ಕಾರ್ಯಕ್ರಮದಿಂದ ಕಾಲ್ಕಿತ್ತಿದ್ದಾರೆ. ಈ ಹಿಂದೆಯೂ ನಾಗಮಂಗಲ ನಂಗಾನಾಚ್‌ಗೆ ಸುದ್ದಿಯಾಗಿತ್ತು. ಚುನಾವಣೆ ಹತ್ತಿರವಾಗ್ತಿದ್ದಂತೆ ಮತ್ತೆ ಹಳೇ ಚಾಳಿ ಮುಂದುವರೆದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ