ಮಂಡ್ಯದಲ್ಲಿ ಸಚಿವರ ವಿರುದ್ದ ತಿರುಗಿಬಿದ್ದ ವೀರಶೈವ ಲಿಂಗಾಯತ ಸಮಾಜ
ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಕೆ.ಸಿ.ನಾರಾಯಣ್ ಗೌಡರಿಂದ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿ.ಎಸ್.ಧನಂಜಯ್ ಕುಮಾರ್ ಆರೋಪ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಗುಬ್ಬಹಳ್ಳಿ ಗ್ರಾಮದಲ್ಲಿ ಕಾಯಕಯೋಗಿ ಶಿವಕುಮಾರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿ.ಎಸ್.ಧನಂಜಯ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ. ತಾಲೂಕಿನಲ್ಲಿ ವೀರಶೈವ ಸಮುದಾಯವನ್ನು ಕಡೆಗಣಿಸಿದ್ದೀರಿ, ಪಟ್ಟಣದಲ್ಲಿ ಇತರೆ ಸಮುದಾಯ ಭವನಗಳ ಗುದ್ದಲಿ ಪೂಜೆಯನ್ನು ಈಗಾಗಲೇ ಮಾಡಲಾಗಿದ್ದು, ಸಂತೋಷದ ವಿಷಯ. ಇತರ ಸಮುದಾಯಗಳು ಕೂಡ ನಮ್ಮ ಅಣ್ಣತಮ್ಮಂದಿರಂತೆ ಆದರೆ ವೀರಶೈವ ಸಮುದಾಯವನ್ನು ಕಡೆಗಣಿಸಿದ್ದೀರಿ ಎಂದಿದ್ದಾರೆ.
ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದು ಯಾರು? ಎಂದು ನಿಮ್ಮನ್ನ ಕೇಳಿಕೊಳ್ಳಿ, ಚುನಾವಣೆ ಸಂದರ್ಭದಲ್ಲಿ ನಾರಾಯಣ ಗೌಡರ ಬೆಂಬಲಕ್ಕೆ ನಿಂತಿದ್ದು ಲಿಂಗಾಯತ ಸಮುದಾಯ. ಆದರೆ ನಮ್ಮ ಸಮುದಾಯಕ್ಕೆ ನ್ಯಾಯಯುತವಾಗಿ ನಡೆದುಕೊಂಡಿಲ್ಲ. ಈಗಲೂ ಕಾಲ ಮಿಂಚಿಲ್ಲ ನಿಮ್ಮ ಅಧಿಕಾರಾವಧಿಯಲ್ಲಿ ಬಸವ ಭವನ ನಿರ್ಮಿಸಿ, ಅತೀ ಶೀಘ್ರದಲ್ಲೇ ನಮ್ಮ ಸಮುದಾಯದ ಭವನಕ್ಕೆ ಶಂಕುಸ್ಥಾಪನೆ ಮಾಡಿ ಎಂದು ವಿ.ಎಸ್.ಧನಂಜಯ್ ಕುಮಾರ್ ಸಚಿವ ಕೆ.ಸಿ.ನಾರಾಯಣ್ ಗೌಡರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಮಂಡ್ಯ: ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡಗೆ ತರಾಟೆಗೆ ತೆಗೆದುಕೊಂಡ ಪ್ರತಿಭಟನಾ ನಿರತ ರೈತರು
ತಾಲೂಕಿನಲ್ಲಿ ಅನೇಕ ಸಮುದಾಯವಿದ್ದು, ಎಲ್ಲಾ ಸಮುದಾಯಗಳ ಭವನಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ನಾರಾಯಣ ಗೌಡರ ಹಿಂದೆ ಪ್ರಬಲವಾಗಿ ನಿಂತಿದ್ದು ಲಿಂಗಾಯತ ಸಮುದಾಯ ಅದನ್ನು ನೀವು ಮರೆತು ನಡೆದುಕೊಳ್ಳುತ್ತಿದ್ದೀರಿ ಎಂದು ಆರೋಪ ಮಾಡಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ