ಐಪಿಎಲ್ ಬೆಟ್ಟಿಂಗ್ ಆಡಿದ್ದ ಕಿಂಗ್ಪಿನ್ಗಳ ಬಂಧನ; 20 ಬ್ಯಾಂಕ್ ಖಾತೆಯಿಂದ ಹಣ ವಶಪಡಿಸಿಕೊಂಡ ಪೊಲೀಸರು
ಬೇರೆ ಬೇರೆ ಹೆಸರುಗಳಿಂದ ಬ್ಯಾಂಕ್ಗಳಲ್ಲಿ ಖಾತೆ ತೆರೆದು ಆಟವಾಡುತಿದ್ದ 20 ಖಾತೆಗಳಲ್ಲಿ ಇರುವ ಹಣವನ್ನು ಫ್ರೀಜ್ ಮಾಡಿಸಲಾಗಿದೆ. ಇನ್ನು 3 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ದಕ್ಷಿಣ ಕನ್ನಡ: ಕ್ರಿಕೆಟ್ ಎಂದರೆ ಐಪಿಎಲ್ ಎನ್ನುವಷ್ಟರ ಮಟ್ಟಿಗೆ ಜನಪ್ರಿಯವಾಗಿದ್ದು, ಜನರು ಕೂಡ ಇದನ್ನು ಅಷ್ಟೇ ಇಷ್ಟಪಟ್ಟು ವಿಕ್ಷಿಸುತ್ತಾರೆ. ಆದರೆ ಕೊವಿಡ್ ಕಾರಣದಿಂದಾಗಿ ಐಪಿಎಲ್ ಈ ಬಾರಿ ರದ್ದಾಗಿದೆ. ಐಪಿಎಲ್ ರದ್ದಾಗಿದ್ದು ಎಲ್ಲರಿಗೂ ಬೇಸರವನ್ನುಂಟು ಮಾಡಿದೆ. ಹೀಗಿರುವಾಗಲೇ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರ ಮೊಸ ಬೆಳಕಿಗೆ ಬಂದಿದ್ದು, ಸದ್ಯ ಮಂಗಳೂರಿನ ಪೊಲೀಸರು ಬೆಟ್ಟಿಂಗ್ ಆಡುತ್ತಿದ್ದ ತಂಡವನ್ನು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಕುಳಿತುಕೊಂಡ ಅಂತರಾಜ್ಯದಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಮತ್ತು ಆಡಿಸುತ್ತಿದ್ದ ಖದೀಮರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೋಸದ ಬೆಟ್ಟಿಂಗ್ ದಂಧೆಯ ಬುಕ್ಕಿಗಳಾದ ವಿಕ್ರಂ ಕುಂಪಲ, ಧನಪಾಲ್ ಶೆಟ್ಟಿ ಕೃಷ್ಣಾಪುರ, ರಾಜಸ್ಥಾನ ಮೂಲದ ಕಮಲೇಶ್, ಮುಂಬೈನ ಹರೀಶ್ ಶೆಟ್ಟಿ, ಅಶೋಕನಗರದ ಪ್ರೀತೇಶ್ ಮತ್ತು ಉರ್ವ ನಿವಾಸಿ ಅವಿನಾಶ್ನನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಹೇಳಿದ್ದಾರೆ.
ಆರೋಪಿಗಳಲ್ಲಿ ಕೆಲವರನ್ನು ಮುಂಬೈ ಮತ್ತು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಬಂಧಿಸಲಾಗಿದೆ. ಇನ್ನು ಇವರು ಕ್ರಿಕೆಟ್ ಬೆಟ್ಟಿಂಗ್ನ್ನು ಮೊಬೈಲ್ ಆ್ಯಪ್ಗಳಾದ ಸ್ಟಾರ್ ಆಪ್, ಲೋಟೋಸ್ ಬುಕ್ 247 ಬೆಟ್ ಆಪ್ನಲ್ಲಿ ಆಟವಾಡುತ್ತಿದ್ದರು. ಮಂಗಳೂರಿನ ಆಕ್ಸಿಸ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಖಾತೆಗಳ ಬಾಜಿದಾರರಿಂದ ಆನ್ಲೈನ್ ಮೂಲಕ ಹಣ ಸಂಗ್ರಹಿಸಿ ಮೋಸದಿಂದ ಬೆಟ್ಟಿಂಗ್ ಮಾಡುತ್ತಿದ್ದರು.
ಸದ್ಯ ಬೇರೆ ಬೇರೆ ಹೆಸರುಗಳಿಂದ ಬ್ಯಾಂಕ್ಗಳಲ್ಲಿ ಖಾತೆ ತೆರೆದು ಆಟವಾಡುತಿದ್ದ 20 ಖಾತೆಗಳಲ್ಲಿ ಇರುವ ಹಣವನ್ನು ಫ್ರೀಜ್ ಮಾಡಿಸಲಾಗಿದೆ. ಇನ್ನು 3 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಎಕನಾಮಿಕ್ ಆಂಡ್ ನಾರ್ಕೋಟಿಕ್ ಕ್ರೈಂ ಮತ್ತು ಸಿಸಿಬಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಹೇಳಿದ್ದಾರೆ.
ಸದ್ಯ ಇವರ ಜೊತೆ ಆಟ ಆಡಿದವರಿಗೂ ಪೊಲೀಸರು ಬಲೆ ಬೀಸುತ್ತಿದ್ದಾರೆ. ಇನ್ನು ಕಿಂಗ್ ಪಿನ್ಗಳ ಬಂಧನಕ್ಕೂ ಎರಡು ವಿಶೇಷ ತಂಡ ಹೊರರಾಜ್ಯಗಳಿಗೆ ತೆರಳಿದೆ. ಅದೇನೆ ಇದ್ದರು ಕ್ರಿಕೆಟ್ ಬೆಟ್ಟಿಂಗ್ನಂತಹ ಅಕ್ರಮ ಕೆಲಸಗಳಲ್ಲಿ ಹಣವನ್ನು ಸಂಪಾದನೆ ಮಾಡುವುದು ಕಾನೂನುಬಾಹಿರ ಕಾರ್ಯ ಎನ್ನುವುದನ್ನು ಎಂದಿಗೂ ಮರೆಯಬಾರದು.
ಇದನ್ನೂ ಓದಿ:
ಬೆಂಗಳೂರಿನಲ್ಲಿ ಬೆಟ್ಟಿಂಗ್ ದಂಧೆ ಮೇಲೆ ಸಿಸಿಬಿ ದಾಳಿ; ಐವರು ಬಂಧನ, 12 ಲಕ್ಷ ರೂಪಾಯಿ ವಶ
Published On - 9:11 am, Mon, 10 May 21