ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ 2 ವರ್ಷದ ಬಾಲಕ ಆದಿತ್ಯ: ಈತ ಮಾಡಿದ ಸಾಧನೆ ಬಗ್ಗೆ ಕೇಳಿದ್ರೆ ಅಚ್ಚರಿಯಾಗ್ತೀರಿ!
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಆದಿತ್ಯ ರಾಮ್.ಆರ್ ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದಾನೆ. ರಾಮಕೃಷ್ಣ ಹಾಗೂ ದೀಪಿಕಾ ದಂಪತಿ ಪುತ್ರ ಆದಿತ್ಯ ರಾಮ್, ಭಾರತದ 28 ರಾಜ್ಯಗಳ ರಾಜಧಾನಿ, ಕರ್ನಾಟಕದ 31 ಜಿಲ್ಲೆ, 12 ರಾಷ್ಟ್ರೀಯ ಚಿಹ್ನೆಗಳನ್ನು ನೆನಪಿಸಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ್ದಾನೆ.

ಮಂಗಳೂರು, ಅಕ್ಟೋಬರ್ 7: ಎರಡರಿಂದ ಮೂರು ವರ್ಷದ ಮಕ್ಕಳು ಮುದ್ದು ಮುದ್ದಾಗಿ ಮಾತನಾಡುತ್ತ, ಅಪ್ಪ ಅಮ್ಮ ಎಂದು ತೊದಲು ನುಡಿಯಲ್ಲಿಯೇ ಕರೆಯುತ್ತಿದ್ದರೆ ಕೇಳಲು ಖುಷಿಯಾಗುತ್ತದೆ. ಹೀಗಿರುವಾಗ ದಕ್ಷಿಣ ಕನ್ನಡ ಜಿಲ್ಲೆಯ ಎರಡೂ ವರೆ ವರ್ಷದ ಆದಿತ್ಯ ರಾಮ್.ಆರ್ ಎಂಬ ಬಾಲಕ ಊಹೆಗೂ ಮೀರಿದ ದಾಖಲೆ ಬರೆದಿದ್ದಾನೆ. ತನ್ನ ಸಾಟಿಯಿಲ್ಲದ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ (India Book of Record) ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.
ತೊದಲು ಮಾತಿನಲ್ಲೇ ಪಟಪಟನೇ ಉತ್ತರ ನೀಡುವ ಈ ಬಾಲಕ
ಎರಡೂವರೆ ವರ್ಷದ ಪುಟ್ಟ ಪೋರ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದಾನೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಆದಿತ್ಯ ರಾಮ್.ಆರ್ ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದಾನೆ. ಮೂಲತಃ ರಾಮನಗರ ನಿವಾಸಿ ರಾಮಕೃಷ್ಣ ಹಾಗೂ ದೀಪಿಕಾ ದಂಪತಿ ಪುತ್ರನೇ ಆದಿತ್ಯ ರಾಮ್.ಭಾರತದ 28 ರಾಜ್ಯಗಳ ರಾಜಧಾನಿಗಳ ಹೆಸರು, ಕರ್ನಾಟಕದ 31 ಜಿಲ್ಲೆಗಳ ಹೆಸರು ಮತ್ತು 12 ದೇಶಗಳ ರಾಷ್ಟ್ರೀಯ ಚಿಹ್ನೆಗಳನ್ನು ನೆನಪಿಸಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ್ದಾನೆ.
ಇಷ್ಟೇ ಅಲ್ಲದೇ 23 ರಾಷ್ಟ್ರೀಯ ನಾಯಕರು, 8 ಕನ್ನಡ ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರನ್ನೂ ಈ ಮಗು ಸುಲಲಿತವಾಗಿ ಹೇಳಬಲ್ಲ. 16 ಹಣ್ಣುಗಳು, 32 ಪ್ರಾಣಿಗಳು, 12 ಆಕಾರಗಳು, 8 ಗ್ರಹಗಳು, ಹಿಂದಿ ವರ್ಣಮಾಲೆಯ ಅಕ್ಷರಗಳು, 24 ದೇಶಗಳ ಧ್ವಜಗಳನ್ನು ಗುರುತಿಸುವ ಕಲೆಯನ್ನೂ ಹೊಂದಿದ್ದಾನೆ. ತನ್ನ ತೊದಲು ಮಾತಿನಲ್ಲೇ ಪಟಪಟನೇ ಉತ್ತರ ನೀಡುವ ಈ ಬಾಲಕ, ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾನೆ.
ಕರ್ನಾಟಕದಲ್ಲಿ ಹಲವು ಮಕ್ಕಳು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆ
2022 ರಲ್ಲಿಯೂ ಸಹ ಯತ್ವಿಕ್ ಡಿ ಗೌಡ ಎಂಬ ಹಾಸನದ ಬಾಲಕ ಎರಡೂವರೆ ವರ್ಷದವನಿದ್ದಾಗಲೇ ಕೇವಲ 34 ಸೆಕೆಂಡುಗಳಲ್ಲಿ ಭಾರತದ ಎಲ್ಲಾ ರಾಜ್ಯಗಳು ಮತ್ತು ರಾಜಧಾನಿಗಳನ್ನು ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದ. 2020 ರಲ್ಲಿ ತುಮಕೂರಿನ ಜಾನ್ವಿ ಜಗದೇವ್ ಎಂಬ ಎರಡು ವರ್ಷದ ಬಾಲಕಿ 21 ಬಣ್ಣಗಳನ್ನು ಗುರುತಿಸುವ ಮೂಲಕ ರೆಕರ್ಡ್ ಬರೆದಿದ್ದಳು. ಬೆಂಗಳೂರಿನಲ್ಲೂ ಎರಡದಿಂದ ಮೂರು ವರ್ಷದ ಮೂರು ಮಕ್ಕಳು 2020 ರಲ್ಲಿ ರೆಕಾರ್ಡ್ ಬರೆದಿದ್ದರು. ಬೆಂಗಳೂರಿನ ಕಿರಣ್ ಭಾರತದ 4 ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಮೂಲಕ, ನಕ್ಷ್ 5 ಭಾಷೆಗಳ ಪದ್ಯಗಳನ್ನು ಹಾಡುವ ಮೂಲಕ ಮತ್ತು ಅಹಾನ್ ಎಂಬ ಬಾಲಕ 56 ಸೆಕೆಂಡುಗಳಲ್ಲಿ 32 ಚೆಸ್ ಪೀಸ್ಗಳನ್ನು ಬೋರ್ಡ್ ಮೇಲಿಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸೇರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



