ಮಂಗಳೂರು: ಹೊಸ ವರ್ಷಕ್ಕೆಂದು ತರಿಸಿದ್ದ 9 ಲಕ್ಷ ರೂ ಮೌಲ್ಯದ ಡ್ರಗ್ಸ್ ವಶಕ್ಕೆ, ಮೂವರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 18, 2024 | 9:22 PM

2025ರ ಹೊಸ ವರ್ಷ ಸ್ವಾಗತಿಸಲು ದಿನಗಣನೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ಎಲ್ಲೆಡೆ ಹೊಸವರ್ಷಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಯುವ ಸಮೂಹವಂತೂ ನ್ಯೂ ಇಯರ್ ಸೆಲೆಬ್ರೆಷನ್​​ಗೆ ಭರ್ಜರಿ ಪ್ಲಾನಿಂಗ್​ ನಡೆಸಿದ್ದಾರೆ. ಈ ಮಧ್ಯೆ ಡ್ರಗ್ಸ್ ಮತ್ತು ಮಾದಕವಸ್ತುಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 24 ಕೋಟಿ ರೂ ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿದೆ. ಇದೀಗ ಬೆನ್ನಲ್ಲೇ ಮಂಗಳೂರಿನಲ್ಲಿ 9 ಲಕ್ಷ ರೂ ಮೌಲ್ಯದ ಮಾದಕವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು: ಹೊಸ ವರ್ಷಕ್ಕೆಂದು ತರಿಸಿದ್ದ 9 ಲಕ್ಷ ರೂ ಮೌಲ್ಯದ ಡ್ರಗ್ಸ್ ವಶಕ್ಕೆ, ಮೂವರ ಬಂಧನ
ಮಂಗಳೂರು: ಹೊಸ ವರ್ಷಕ್ಕೆಂದು ತರಿಸಿದ್ದ 9 ಲಕ್ಷ ರೂ ಮೌಲ್ಯದ ಡ್ರಗ್ಸ್ ವಶಕ್ಕೆ, ಮೂವರ ಬಂಧನ
Follow us on

ಮಂಗಳೂರು, ಡಿಸೆಂಬರ್​ 18: ನಗರದಲ್ಲಿ ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ ಮೌಲ್ಯದ ಮಾದಕ ವಸ್ತುವನ್ನು (Drugs)​​ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕುಳೂರು ನದಿ ದಂಡೆಯಲ್ಲಿ ಡ್ರಗ್ಸ್ ಸ್ಕ್ವಾಡ್ ಹಾಗೂ ಕಾವೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ದೇವರಾಜ್, ಮೊಹಮ್ಮದ್ ಫರ್ವೆಜ್ ಉಮರ್, ಶೇಖ್ ತಹೀಮ್ ಬಂಧಿತ ಆರೋಪಿಗಳು.

5 ಕೆಜಿ ಗಾಂಜಾ, 100 ಗ್ರಾಂ ಎಂಡಿಎಂಎ, 7 ಗ್ರಾಂ ಕೋಕೆನ್, 17 ಗ್ರಾಂ ಎಂಡಿಎಂಎ ಪಿಲ್ಸ್, 100 ಗ್ರಾಂ ಚರಸ್, 8 ಗ್ರಾಂ ಹೈಡ್ರೋವಿಡ್ ಗಾಂಜಾ ಮತ್ತು 3 ಎಲ್​​ಎಸ್​ಡಿ ಸ್ಟ್ರಿಪ್ಸ್ ಸೇರಿದಂತೆ ಹರಿತವಾದ ಚಾಕು, ಮಾದಕ ವಸ್ತು ಸಾಗಾಟ ಮಾಡಲು ಉಪಯೋಗಿಸಿದ ಕಾರು ಮತ್ತು ಸ್ಕೂಟರ್ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಲ್ಲಿ 24 ಕೋಟಿ ರೂ ಮೌಲ್ಯದ ಡ್ರಗ್ಸ್ ಸೀಜ್

ಹೊಸ ವರ್ಷದ ಹೊತ್ತಲ್ಲೇ ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಡ್ರಗ್ಸ್ ಬೇಟೆ ಆಡಿದ್ದಾರೆ. ಚಿಕ್ಕ ಪ್ರಾವಿಷನ್ ಸ್ಟೋರ್ ಇಟ್ಕೊಂಡಿದ್ದ ನೈಜಿರಿಯಾ ಮೂಲದ ಮಹಿಳೆ ಡ್ರಗ್ಸ್ ದಂಧೆ ನಡೆಸುತ್ತಿದ್ದರು. ಸಿಸಿಬಿ ಕಣ್ಣಿಗೆ ಬಿದ್ದಿದ್ದೇ ಬರೋಬ್ಬರು 24 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ಚಾಮರಾಜಪೇಟೆ ಅಂಚೆ ಕಚೇರಿಯಲ್ಲಿ ಡ್ರಗ್ಸ್​​ ಬಾಕ್ಸ್​ ಪತ್ತೆ ಕೇಸ್​: ಸಿಸಿಬಿ ತನಿಖೆಯಲ್ಲಿ ಸ್ಫೋಟಕ ಅಂಶಗಳು ಬಹಿರಂಗ

ಕೆ.ಆರ್ ಪುರಂನ ಟಿಸಿ ಪಾಳ್ಯದಲ್ಲಿ ಕಳೆದ ಐದು ವರ್ಷದಿಂದ ವಾಸವಿದ್ದ ರೋಜ್ಲೈಮ್, ಪ್ರಾವಿಷನ್ ಸ್ಟೋರ್ ನಡಿಸುತ್ತಿದ್ದರು. ಆದರೆ ಈ ಅಂಗಡಿಯಲ್ಲಿ ಮುಂಬೈನಿಂದ ಪ್ರಾವಿಷನ್ ಐಟಂಗಳ ಮೂಲಕ ಬರ್ತಿದ್ದ ಡ್ರಗ್ಸ್ ಇಟ್ಕೊಂಡು ಸ್ಥಳೀಯ ನಿವಾಸಿಗಳು, ನೈಜಿರಿಯನ್ ಪ್ರಜೆಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಆಕೆಯನ್ನ ರೆಡ್ ಹ್ಯಾಂಡಗಿ ಹಿಡಿದು ಬರೋಬ್ಬರಿ 24 ಕೋಟಿ ಮೌಲ್ಯದ 12 kg ತೂಕದ ಬಿಳಿ, ಹಸಿರು ಬಣ್ಣದ ಎಂಡಿಎಂಎ ಡ್ರಗ್ಸ್ ಸೀಜ್ ಮಾಡಿದ್ದಾರೆ.

ಕಳೆದ ಶುಕ್ರವಾರ ಮುಂಬೈನಿಂದ ರೋಜ್ಲೈಮ್ ಅಂಗಡಿಗೆ ಜುಲಿಯೆಟ್ ಎಂಬ ಮತ್ತೊಬ್ಬ ವಿದೇಶಿ ಮಹಿಳೆ ಈ ಸರಕು ತಂದಿದ್ದರು. ಡೆಟಲ್ ಸೋಪ್, ಮುಂಗ್ ದಾಲ್ ಸೇರಿದಂತೆ ಇನ್ನಿತರ ಪ್ರಾವಿಷನ್ ಐಟಂಗಳಲ್ಲಿ ಡ್ರಗ್ಸ್ ತುಂಬಿ ಅಂಗಡಿಗೆ ಬಳಿ ಬರ್ತಿದ್ದಂತೆ ರೇಡ್ ಮಾಡಿದ ಸಿಸಿಬಿ ಪೊಲೀಸರು ಎಲ್ಲಾ ವಸ್ತುಗಳನ್ನು ಸೀಜ್ ಮಾಡಿ ಅಂಗಡಿ ಮಾಲೀಕೆ ರೋಜ್ಲೈಮ್ ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:19 pm, Wed, 18 December 24