ಚಾಮರಾಜಪೇಟೆ ಅಂಚೆ ಕಚೇರಿಯಲ್ಲಿ ಡ್ರಗ್ಸ್​​ ಬಾಕ್ಸ್​ ಪತ್ತೆ ಕೇಸ್​: ಸಿಸಿಬಿ ತನಿಖೆಯಲ್ಲಿ ಸ್ಫೋಟಕ ಅಂಶಗಳು ಬಹಿರಂಗ

ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಯಲ್ಲಿ ಪತ್ತೆಯಾದ ಮಾದಕ ವಸ್ತು ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಹಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ವಿದೇಶದಿಂದ ಬಂದ ಕೊರಿಯರ್‌ಗಳ ಮೇಲೆ ನಕಲಿ ವಿಳಾಸವಿದ್ದು, ಈ ಮೂಲಕ ಮಾದಕ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಪೆಡ್ಲರ್‌ಗಳು ಆನ್‌ಲೈನ್‌ನಲ್ಲಿ ಡ್ರಗ್ಸ್ ಅನ್ನು ಬುಕ್ ಮಾಡಿ, ತಪ್ಪು ವಿಳಾಸ ನೀಡಿ ತಲುಪಿಸಿಕೊಳ್ಳುತ್ತಿದ್ದರು.

ಚಾಮರಾಜಪೇಟೆ ಅಂಚೆ ಕಚೇರಿಯಲ್ಲಿ ಡ್ರಗ್ಸ್​​ ಬಾಕ್ಸ್​ ಪತ್ತೆ ಕೇಸ್​: ಸಿಸಿಬಿ ತನಿಖೆಯಲ್ಲಿ ಸ್ಫೋಟಕ ಅಂಶಗಳು ಬಹಿರಂಗ
ಡ್ರಗ್ಸ್, ಸಿಸಿಬಿ
Follow us
Jagadisha B
| Updated By: ವಿವೇಕ ಬಿರಾದಾರ

Updated on:Dec 08, 2024 | 1:05 PM

ಬೆಂಗಳೂರು, ಡಿಸೆಂಬರ್​ 08: ಚಾಮರಾಜಪೇಟೆ ವಿದೇಶಿ ಅಂಚೆ ಕಚೇರಿಗೆ (Chamrajpet Post Office) ಕೋರಿಯರ್​ ಬಾಕ್ಸ್​ನಲ್ಲಿ ಡ್ರಗ್ಸ್​ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರ ತನಿಖೆಯಲ್ಲಿ ಹಲವು ವಿಚಾರಗಳು ಬಹಿರಂಗಗೊಂಡಿವೆ. ವಿದೇಶದಿಂದ ಬಂದ ಡ್ರಗ್ಸ್​​ (Durg) ಕೊರಿಯರ್​​ ಬಾಕ್ಸ್​ಗಳ ಮೇಲಿನ ವಿಳಾಸ ನಕಲಿಯಾಗಿವೆ. ತಪ್ಪಾದ ವಿಳಾಸ ನೀಡಿದರೂ ಕೊರಿಯರ್​ನಲ್ಲಿದ್ದ ಡ್ರಗ್ ಪ್ಯಾಕೇಟ್​ಗಳನ್ನು ಡೀಲರ್​ಗಳು ಹಲವು ಮಾರ್ಗದಲ್ಲಿ ಪಡೆಯುತಿದ್ದರು.

ಪೆಡ್ಲರ್ಸ್​​ಗಳು ಮನೆಯಲ್ಲೇ ಕುಳಿತು ತಪ್ಪಾದ ವಿಳಾಸ ನೀಡಿ ಆನ್​ಲೈನ್​ನಲ್ಲಿ ಡ್ರಗ್ಸ್​ ಬುಕ್ ಮಾಡಿ ಅಂಚೆ ಮೂಲಕ ತರಿಸಿಕೊಳ್ಳುತ್ತಿದ್ದರು. ವಿದೇಶದಿಂದ ಬಂದ ಪ್ಯಾಕೇಟ್​ಗಳು ಕೊರಿಯರ್ ಏಜೆನ್ಸಿಗೆ ತಲುಪುತಿದ್ದವು. ಏಜೆನ್ಸಿಗೆ ತಲುಪಿದ ಕೂಡಲೇ ಪೆಡ್ಲರ್​​ಗೆ ಡೆಲವರಿ ಟ್ರ್ಯಾಕಿಂಗ್​ ಮಾಹಿತಿ ರವಾನಿಸಲಾಗುತ್ತಿತ್ತು. ತಪ್ಪಾದ ವಿಳಾಸಕ್ಕೆ ಡ್ರಗ್ಸ್​ ಡೆಲವರಿಯಾಗುವ ಮುನ್ನ ಟ್ರಾಕಿಂಗ್ ಮಾಹಿತಿ ಆಧರಿಸಿ ಡ್ರಗ್ಸ್​ ಬಾಕ್ಸ್​ ಅನ್ನು ಪಡೆಯುತ್ತಿದ್ದರು.

ಮತ್ತೊಂದು ಸಂದರ್ಭದಲ್ಲಿ ತಪ್ಪಾದ ವಿಳಾಸಕ್ಕೆ ತೆರಳುತಿದ್ದ ಡೆಲವರಿ ಸಿಬ್ಬಂದಿಗಳು, ವಿಳಾಸ ಸಿಗದೆ ವಾಪಾಸ್ ಕೊರಿಯರ್ ಏಜೆನ್ಸಿಗೆ ಬಾಕ್ಸ್​ ಅನ್ನು ತೆಗೆದುಕೊಂಡು ಹೊಗುತಿದ್ದರು. ಆ ಬಳಿಕ ಪೆಡ್ಲರ್​ಗಳು ಏಜೆನ್ಸಿಗೆ ಬಂದು ಕೊರಿಯರ್ ತೆಗೆದುಕೊಳ್ಳುತ್ತಿದ್ದರು. ಪೆಡ್ಲರ್ಸ್​​ಗಳು ಲೀಗಲ್ ಆಗಿಯೇ ಬೆಂಗಳೂರಿಗೆ ಡ್ರಗ್ ತರಿಸುತ್ತಿದ್ದರು.

ಸಿಸಿಬಿ ಪೊಲೀಸರು ಸೆಪ್ಟೆಂಬರ್ 9ರಂದು ಚಾಮರಾಜಪೇಟೆ ವಿದೇಶಿ ಅಂಚೆ ಕಚೇರಿ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ‌ 606 ಮಾದಕ ವಸ್ತು ಇರುವ ಪಾರ್ಸಲ್ ಪ್ಯಾಕೇಟ್​​ಗಳು ಪತ್ತೆಯಾಗಿದ್ದವು. ಥೈಲ್ಯಾಂಡ್, ಯುಎಸ್​, ಯುಕೆಯಿಂದ ಡ್ರಗ್ಸ್ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 12 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲ ಪೆಡ್ಲರ್ಸ್​ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಂಚೆ ಇಲಾಖೆ ಮೂಲಕ ಬೆಂಗಳೂರಿಗೆ ಬರ್ತಾಯಿದೆ ವಿದೇಶಿ ಡ್ರಗ್ಸ್​: 21 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ 

ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಬಸವನಗೌಡನ ಬಂಧಿತ ಆರೋಪಿ. 218ಗ್ರಾಂ ಗಾಂಜಾ, ಬೈಕ್ ಜಪ್ತಿ ಮಾಡಲಾಗಿದೆ. ಅಬಕಾರಿ ಇನ್ಸ್​ಪೆಕ್ಟರ್ ವಿಠ್ಠಲ ಪೀರಣ್ಣನವರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಅಬಕಾರಿ ಪೊಲೀಸರು ಎನ್​ಡಿಪಿಎಸ್​​ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ.

ಹಳೇ ಡ್ರಗ್ ಪೆಡ್ಲರ್​ಗಳ ತಪಾಸಣೆ: ದಯಾನಂದ

ಹೊಸ ವರ್ಷ‌ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆ ಆಗದಂತೆ ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು. ನಗರದಲ್ಲಿ ಅಹಿತಕರ ಘಟನೆ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸಿಸಿಬಿ ಸೇರಿದಂತೆ ಎಲ್ಲಾ ವಿಭಾಗದವರು ಡ್ರಗ್ಸ್ ವಿರುದ್ದ ಕಾರ್ಯಾಚರಣೆ ನಡೆಸಿದ್ದಾರೆ. ಹಳೇ ಡ್ರಗ್ ಪೆಡ್ಲರ್​ಗಳು, ರೌಡಿ ಹಿನ್ನೆಲೆಯುಳ್ಳವರ ತಪಾಸಣೆ ನಡೆಯುತ್ತಿದೆ ಎಂದರು.

ಹೊಸ ವರ್ಷ ಆಯೋಜಕರನ್ನು ಕರೆಸಿ ಸಲಹೆ ಸೂಚನೆ ನೀಡಲಾಗುತ್ತಿದೆ. ಬೇರೆ ಬೇರೆ ಇಲಾಖೆ ಜೊತೆಯೂ ಹೊಸ ವರ್ಷ ಆಚರಣೆ ಬಗ್ಗೆ ಚರ್ಚೆ ಆಗುತ್ತಿದೆ. ಎಲ್ಲೆಲ್ಲಿ ಲೈಟಿಂಗ್, ಬೇರೆ ವ್ಯವಸ್ಥೆ ಆಗಬೇಕು ಅಂತ ಚರ್ಚೆ ಆಗುತ್ತಿದೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:58 am, Sun, 8 December 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ