Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಕನ್ನಡ: ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯುತ್ತಿದ್ದ 4 ಅದ್ದೂರಿ ಮದುವೆಗೆ ತಡೆ, ಇಲಿ ಪಾಶಾಣ ತಿಂದು ಮಗು ಸಾವು, ನಾಳೆಯಿಂದಲೂ ಬಸ್ ಇಲ್ಲ

Mangaluru: ನಾಳೆಯಿಂದ ಮೈಸೂರಿನ ಜೊತೆಗೆ ದಕ್ಷಿಣ ಕನ್ನಡದಲ್ಲೂ ಬಸ್ ಸೇವೆ ಲಭ್ಯವಿಲ್ಲ ಎಂದು ಕೆಎಸ್​ಆರ್​ಟಿಸಿ ಸ್ಪಷ್ಟಪಡಿಸಿದೆ. ಈ ಹಿಂದೆ ಮೈಸೂರು ಜಿಲ್ಲೆಯಲ್ಲಿ ಮಾತ್ರ ಬಸ್ ಸಂಚಾರವಿರುವುದಿಲ್ಲವೆಂದು ತಿಳಿಸಿದ್ದ ನಿಗಮ ಈಗ ದಕ್ಷಿಣ ಕನ್ನಡದಲ್ಲೂ ಬಸ್ ಸಂಚಾರಕ್ಕೆ ಅವಕಾಶ ನಿರ್ಬಂಧಿಸಿದೆ.

ದಕ್ಷಿಣ ಕನ್ನಡ: ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯುತ್ತಿದ್ದ 4 ಅದ್ದೂರಿ ಮದುವೆಗೆ ತಡೆ, ಇಲಿ ಪಾಶಾಣ ತಿಂದು ಮಗು ಸಾವು, ನಾಳೆಯಿಂದಲೂ ಬಸ್ ಇಲ್ಲ
ಮಂಗಳಾದೇವಿ ದೇವಾಲಯ
Follow us
TV9 Web
| Updated By: guruganesh bhat

Updated on: Jun 20, 2021 | 11:09 PM

ಮಂಗಳೂರು: ಮಂಗಳೂರಿನ ಮಂಗಳಾದೇವಿ ದೇಗುಲದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಡೆಯುತ್ತಿದ್ದ ಅದ್ದೂರಿ ಮದುವೆಯನ್ನು ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ತಡೆದಿದ್ದಾರೆ. ಮಂಗಳಾದೇವಿ ದೇವಸ್ಥಾನದ ಆಡಳಿತ ಮಂಡಳಿಯನ್ನು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಒಂದೇ ಮುಹೂರ್ತದಲ್ಲಿ 4 ಮದುವೆ ಅಂತಾ ಸಮಜಾಯಿಷಿ ಕೊಟ್ಟ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಅರ್ಧ ಗಂಟೆಯಲ್ಲಿ 4 ಮದುವೆಯನ್ನು ಹೇಗೆ ಮಾಡುತ್ತೀರಾ? ಅಧಿಕಾರಿಗಳ ಕಿವಿ ಮೇಲೆ ಲಾಲ್​ ಬಾಗ್ ಇಡಲು ಬರಬೇಡಿ? ನಗರದಲ್ಲಿ ಈ 4 ಮದುವೆಗೆ ಅನುಮತಿ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ್ದಾರೆ. ಆಡಳಿತ ಮಂಡಳಿ ಸೇರಿ ಮದುವೆ ಮನೆಯವರ ಮೇಲೆ ದೂರು ದಾಖಲಿಸಲು ಸೂಚಿಸಿದ್ದಾರೆ. ಅನುಮತಿ ಇರುವ ವಾಹನ ಬಿಟ್ಟು ಉಳಿದ ವಾಹನ ಸೀಜ್ ಮಾಡಲಾಗಿದೆ.

ಇಲಿ ಪಾಷಾಣ ತಿಂದು ಮೃತಪಟ್ಟ ಮಗು ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕೆಮ್ಮಾರಿನಲ್ಲಿ ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ ನಡೆದಿದೆ. ನಿವೃತ್ತ ಸೈನಿಕ ಸೈಜು ಹಾಗೂ ದೀಪ್ತಿ ದಂಪತಿಗಳ ಪುತ್ರಿ ಶ್ರೇಯಾ ಮೃತ ದುರ್ದೈವಿ. ಆಟವಾಡುತ್ತಾ ಮನೆಯಲ್ಲಿದ್ದ ಇಲಿ ಪಾಷಾಣ ತಿಂದಿದ್ದ ಮಗು ಶ್ರೇಯಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡದಲ್ಲೂ ನಾಳೆಯಿಂದ ಬಸ್ ಇಲ್ಲ ನಾಳೆಯಿಂದ ಮೈಸೂರಿನ ಜೊತೆಗೆ ದಕ್ಷಿಣ ಕನ್ನಡದಲ್ಲೂ ಬಸ್ ಸೇವೆ ಲಭ್ಯವಿಲ್ಲ ಎಂದು ಕೆಎಸ್​ಆರ್​ಟಿಸಿ ಸ್ಪಷ್ಟಪಡಿಸಿದೆ. ಈ ಹಿಂದೆ ಮೈಸೂರು ಜಿಲ್ಲೆಯಲ್ಲಿ ಮಾತ್ರ ಬಸ್ ಸಂಚಾರವಿರುವುದಿಲ್ಲವೆಂದು ತಿಳಿಸಿದ್ದ ನಿಗಮ ಈಗ ದಕ್ಷಿಣ ಕನ್ನಡದಲ್ಲೂ ಬಸ್ ಸಂಚಾರಕ್ಕೆ ಅವಕಾಶ ನಿರ್ಬಂಧಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಅನ್​ಲಾಕ್​ 1.0 ಆರಂಬವಾಗಲಿದ್ದು, ಅಗತ್ಯ ವಸ್ತುಗಳ ಖರೀದಿಗೆ ಸಮಯ ವಿಸ್ತರಿಸಿ ಡಿಸಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ. ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಸಮಯ ನಿಗದಿಪಡಿಸಲಾಗಿದೆ.

ಜುಲೈ 5ರವರೆಗೆ ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅನುಮತಿಯಿಲ್ಲ. ಆಹಾರ, ದಿನಸಿ, ಹಣ್ಣು ತರಕಾರಿ, ಮಾಂಸ, ಮೀನು ಖರೀದಿ, ಮೊಟ್ಟೆ, ಬೀದಿ ಬದಿ ವ್ಯಾಪಾರ, ಮದ್ಯದಂಗಡಿಗಳಿಗೆ ಅವಕಾಶವಿದೆ. ಜಿಲ್ಲೆಯಲ್ಲಿ ಪಾರ್ಕ್, ಸಾರ್ವಜನಿಕ ಉದ್ಯಾನ ತೆರೆಯುವಂತಿಲ್ಲ. ನಿರ್ಮಾಣ ಚಟುವಟಿಕೆ, ಸ್ಟೀಲ್, ಸಿಮೆಂಟ್​ ಅಂಗಡಿಗೆ ಅನುಮತಿಯಿದೆ. ಆಟೋ, ಟ್ಯಾಕ್ಸಿಯಲ್ಲಿ ಇಬ್ಬರು ಪ್ರಯಾಣಿಕರಿಗೆ ಅನುಮತಿಯಿದೆ. ಹೊರಜಿಲ್ಲೆಯಿದಂದ ಬಸ್​ಗಳು ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ.

ಇದನ್ನೂ ಓದಿ:  Karnataka Covid Update: ಕರ್ನಾಟಕದಲ್ಲಿ ಇಂದು 4,517 ಜನರಿಗೆ ಕೊವಿಡ್ ದೃಢ, 120 ಜನರು ನಿಧನ; ಪಾಸಿಟಿವಿಟಿ ದರ ಶೇ 2.58

Covishield: ವಿದೇಶಗಳಿಗೆ ತೆರಳುವವರಿಗೆ 28 ದಿನಕ್ಕೆ 2ನೇ ಡೋಸ್ ಕೊವಿಡ್ ಲಸಿಕೆ; ಜುಲೈ 22ರಿಂದಲೇ ಆರಂಭ

(Mangaluru Mangaladevi temple raided for 4 marriage held on Karnataka Lockdown)

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ