AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಗಂಡನನ್ನು ಬಿಟ್ಟು ಬೇರೊಬ್ಬನ ಜೊತೆ ಬಂದ್ಳು: ಈಗ ಮತ್ತೊಬ್ಬನ ಹಿಂದೆ ಓಡಿ ಹೋದ್ಳು, ಬಾಳು ಕೊಟ್ಟ ಪತಿ, 3 ಮಕ್ಕಳು ಅನಾಥ

ಮೊದಲನೇ ಗಂಡನನ್ನು ಬಿಟ್ಟು ಬಂದವಳಿಗೆ ಮತ್ತೋರ್ವ ಬಾಳು ನೀಡಿದ್ದ. 11 ವರ್ಷದ ದಾಂಪತ್ಯಕ್ಕೆ ಮುದ್ದಾದ ಮೂರು ಮಕ್ಕಳು ಸಹ ಇದ್ದವು. ಎಲ್ಲವೂ ಚೆನ್ನಾಗಿತ್ತು ಎನ್ನುವ ಹೊತ್ತಿನಲ್ಲಿ ಮೂರು ಮಕ್ಕಳ ತಾಯಿ ಲವ್​​ ಆಗಿದ್ದು, ಇದೀಗ ಬಾಳುಕೊಟ್ಟ ಗಂಡ ಹಾಗೂ ಮೂರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿದ್ದಾಳೆ. ಇದರಿಂದ ತಾಯಿಗಾಗಿ ಮಕ್ಕಳು, ಮಡದಿಗಾಗಿ ಪತಿ ಕಣ್ಣೀರಿಡುತ್ತಿದ್ದಾರೆ.

ಆ ಗಂಡನನ್ನು ಬಿಟ್ಟು ಬೇರೊಬ್ಬನ ಜೊತೆ ಬಂದ್ಳು: ಈಗ ಮತ್ತೊಬ್ಬನ ಹಿಂದೆ ಓಡಿ ಹೋದ್ಳು, ಬಾಳು ಕೊಟ್ಟ ಪತಿ, 3 ಮಕ್ಕಳು ಅನಾಥ
Leelavathi And Santu
ರಾಮು, ಆನೇಕಲ್​
| Updated By: ರಮೇಶ್ ಬಿ. ಜವಳಗೇರಾ|

Updated on:Sep 05, 2025 | 6:49 PM

Share

ಆನೇಕಲ್, (ಸೆಪ್ಟೆಂಬರ್ 05): 11 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನ ಬಿಟ್ಟು ಮೂರು ಮಕ್ಕಳ ತಾಯಿ ಪ್ರಿಯಕರನೊಂದಿಗೆ (Lover) ಎಸ್ಕೇಪ್‌ ಆಗಿರುವ ಘಟನೆ ಬೆಂಗಳೂರಿನ (Bengaluru) ಬನ್ನೇರುಘಟ್ಟ (Bannerghatta) ಸಮೀಪದ ಬಸವನಪುರ (Basavanapura)  ಗ್ರಾಮದಲ್ಲಿ ನಡೆದಿದೆ. 11 ವರ್ಷಗಳ ಹಿಂದೆ ಪ್ರೀತಿಸಿ ಮಂಜುನಾಥ್​ ಎನ್ನುವಾತನನ್ನು ಲೀಲಾವತಿ ಎನ್ನುವಾಕೆ ಮದುವೆಯಾಗಿದ್ದಳು. ಮೂರು ಮಕ್ಕಳು ಸಹ ಇದ್ದವು. ಆದರೂ ಮೂರು ಮಕ್ಕಳ ತಾಯಿ ಲೀಲಾವತಿ ಮತ್ತೋರ್ವನ ಜೊತೆ ಓಡಿಹೋಗಿದ್ದಾಳೆ. ಪತಿ ಮಂಜುನಾಥ್‌ ಹಾಗೂ ಮೂರು ಮಕ್ಕಳು ಕಣ್ಣೀರಿಡುತ್ತಿದ್ದಾರೆ. ಮೂವರು ಮಕ್ಕಳು, ಗಂಡನನ್ನು ಬಿಟ್ಟು ಪ್ರಿಯಕರ ಸಂತೋಷ್​​ ನೊಂದಿಗೆ ಮನೆ ಬಿಟ್ಟು ಓಡಿಹೋದ ಲೀಲಾವತಿ ಆಂಟಿ ಕಥೆ ಒಂದೊಂದಲ್ಲ. ಈ ಲೀಲಾವತಿಗೆ ಈಗ ಇರುವ ಗಂಡನಿಗಿಂತಲೂ ಮೊದಲೇ ಮತ್ತೊಬ್ಬನೊಂದಿಗೆ ಮದುವೆಯಾಗಿತ್ತು ಎಂದು ಗಂಡ ಆರೋಪಿಸಿದ್ದಾನೆ. ಈಗ ನನ್ನನ್ನು ಬಿಟ್ಟು ಮತ್ತೊಬ್ಬನ ಹಿಂದೆ ಹೋಗಿದ್ದಾಳೆ ಎಂದು ಗೋಳಾಡಿದ್ದಾನೆ.

ಬಸವನಪುರದಲ್ಲಿ ವಾಸವಿದ್ದ ಲೀಲಾವತಿ, ಮಂಜುನಾಥ್ ದಂಪತಿ 11 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದರು. ಮಂಜುನಾಥ್‌ ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ. ಕಳೆದ 2 ವರ್ಷಗಳ ಹಿಂದೆ ಲೀಲಾವತಿಗೆ ಪ್ರಿಯಕರ ಸಂತೋಷ್‌ನ ಪರಿಚಯವಾಗಿತ್ತು. ಇಬ್ಬರ ನಡುವೆ ಸಲುಗೆ ಹೆಚ್ಚಾಗಿ ಅಕ್ರಮ ಸಂಬಂಧ ಬೆಳೆದಿತ್ತು. ಸಾಕಷ್ಟು ಬಾರಿ ಮಂಜುನಾಥ್‌ ಇದನ್ನ ಪ್ರಶ್ನೆ ಮಾಡಿದ್ದ. ಆದರೂ ಬುದ್ಧಿ ಕಲಿಯದ ಲೀಲಾವತಿ ಭಾನುವಾರ ಮನೆಯಿಂದ ಎಸ್ಕೇಪ್‌ ಆಗಿದ್ದಾಳೆ. ಈ ಕುರಿತು ಪತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಬಳಿಕ ಠಾಣೆಗೆ ಹಾಜರಾದ ಲೀಲಾವತಿ ತನಗೆ ಪ್ರಿಯಕರನೇ ಬೇಕೆಂದು ತಾಳಿ ಕಿತ್ತು ಗಂಡನ ಕೈಗೆ ಕೊಟ್ಟು ಹೋಗಿದ್ದಾಳೆ.

ಇದನ್ನೂ ಓದಿ: ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ

ಮತ್ತೊಬ್ಬನನ್ನು ಮದ್ವೆಯಾಗಿದ್ದ ಲೀಲಾವತಿ

11 ವರ್ಷಗಳ ಪ್ರೀತಿ-ಮದ್ವೆ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಬಸವನಪುರ ಗ್ರಾಮದ ಬ್ಯೂಟಿಯ ಬಗ್ಗೆ ಇನ್ನಷ್ಟು ರಹಸ್ಯಗಳು ಬಯಲಾಗಿವೆ. ಮೂರು ಮಕ್ಕಳ ತಾಯಿಯಾಗಿದ್ದ ಈಕೆ ಒಂದಲ್ಲ ಎರಡಲ್ಲ ಮೂವರೊಟ್ಟಿಗೆ ಸಂಪರ್ಕದಲ್ಲಿದ್ದಳು ಅನ್ನೋದು ತಿಳಿದುಬಂದಿದೆ. ಪ್ರಿಯಕರನೊಂದಿಗೆ ಓಡಿಹೋಗಿರುವ ಪತ್ನಿ ಲೀಲಾವತಿ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಗಂಡ ರಿವೀಲ್​ ಮಾಡಿದ್ದು, ನನ್ನನ್ನು ಮದುವೆಯಾಗುವುದಕ್ಕೂ ಮೊದಲೇ ಮತ್ತೊಬ್ಬನನ್ನು ಮದುವೆಯಾಗಿದ್ದಳು ಎಂದು ಗಂಡ ಆರೋಪಿಸಿದ್ದಾನೆ. ಅಲ್ಲದೇ 2 ವರ್ಷಗಳಿಂದ ಸತೋಷ್‌ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದ ಆಂಟಿ ಲೀಲಾವತಿ ಇನ್ನೊಬ್ಬಾತನೊಂದಿಗೂ ಸಂಪರ್ಕದಲ್ಲಿದ್ದಳು ಎನ್ನುವುದಕ್ಕೆ ಫೋಟೋ ಸಾಕ್ಷ್ಯ ಸಿಕ್ಕಿದೆ.

ಪತ್ನಿಯನ್ನು ರೆಡ್​ ಹ್ಯಾಂಡ್ ಆಗಿ ಹಿಡಿದ ಪತಿ

ಬಸವನಪುರದಲ್ಲಿ ವಾಸವಿದ್ದ ಲೀಲಾವತಿ, ಮಂಜುನಾಥ್ ದಂಪತಿ 11 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದರು (Marriage). ಮಂಜುನಾಥ್‌ ಕ್ಯಾಬ್‌ ಡ್ರೈವರ್‌ ಆಗಿದ್ದ. ರಾತ್ರಿ ಕ್ಯಾಬ್‌ ಡ್ರೈವಿಂಗ್‌ ಕೆಲಸಕ್ಕೆ ಹೋಗುತ್ತಿದ್ದರೆ, ಇತ್ತ ಲೀಲಾವತಿ ಪ್ರಿಯಕರ ಸಂತೋಷ್‌ ನನ್ನು ಮನೆಗೆ ಕರೆಯಿಸಿಕೊಂಡು ಚಕ್ಕಂದವಾಡುತ್ತಿದ್ದಳು. ಕೆಲ ದಿನಗಳ ಬಳಿಕ ಲೀಲಾವತಿ ನಡವಳಿಕೆಯಿಂದ ಪತಿ ಮಂಜುನಾಥ್‌ ಅನುಮಾನಗೊಂಡಿದ್ದ. ಈಕೆ ಕಾಮದಾಟವನ್ನು ಬಯಲಿಗೆಳೆಯಬೇಕು ಎಂದು ಭಾನುವಾರ ಕೆಲಸಕ್ಕೆ ಹೋಗುವುದಾಗಿ ಹೇಳಿ, ಮನೆಯ ಸಮೀಪವೇ ಕಾರಿನಲ್ಲಿ ಕುಳಿತಿದ್ದ.

ರಾತ್ರಿ ಲೀಲಾವತಿ ಫೋನ್‌ ಮಾಡಿ ಎಲ್ಲಿದ್ದೀಯಾ ಅಂತ ಕೇಳಿದಾಗ ಹೆಚ್‌ಎಎಲ್‌ ಬಳಿ ಇದ್ದೀನಿ ಎಂದು ಮಂಜುನಾಥ್‌ ಹೇಳಿದ್ದ. ಆಗ ಲೀಲಾವತಿ, ಸಂತೋಷ್‌ಗೆ ಫೋನ್‌ ಮಾಡಿ ಮನೆಗೆ ಕರೆಸಿಕೊಂಡು ತಮ್ಮ ಆಟ ಶುರು ಮಾಡಿಕೊಂಡಿದ್ದರು. ಅಷ್ಟರಲ್ಲಿ ಮನೆಗೆ ಎಂಟ್ರಿ ಕೊಟ್ಟ ಪತಿ, ರೆಡ್‌ಹ್ಯಾಂಡಾಗಿ ಇಬ್ಬರನ್ನು ಹಿಡಿದಿದ್ದ. ಈ ವೇಳೆ ಜೋರು ಗಲಾಟೆಯೂ ನಡೆದಿತ್ತು. ಬಳಿಕ ಈ ಪ್ರಕರಣ ಬನ್ನೇರುಘಟ್ಟ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಠಾಣೆಯಲ್ಲಿ ಪತಿ ಮನವೊಲಿಸಲು ಪ್ರಯತ್ನಿಸಿದ ಹೊರತಾಗಿಯೂ ವಿಫಲವಾಯಿತು. ತಾಳಿಯನ್ನ ಕಿತ್ತು ಮಂಜುನಾಥ್ ಕೈಗೆ ಕೊಟ್ಟವಳೇ ಪೊಲೀಸ್ ಠಾಣೆಯಿಂದ ನೇರವಾಗಿ ಸಂತೋಷ್ ಜೊತೆ ಹೋಗಿದ್ದಾಳೆ.

ಕರ್ನಾಟಕದ ಮತ್ತಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 6:41 pm, Fri, 5 September 25