ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟಪ್​ಗಳಿಗೆ ಅಮೆರಿಕ ಕಂಪನಿಗಳ ಹೂಡಿಕೆ ಸೆಳೆಯಲಿದೆ ಕರ್ನಾಟಕ

ಎಂಬಿ ಪಾಟೀಲ್ ನೇತೃತ್ವದ ನಿಯೋಗವು ಎಲೆಕ್ಟ್ರಿಕಲ್ ವೆಹಿಕಲ್ಸ್ (ಇವಿ) ತಯಾರಕರಿಂದ ಫಿನ್‌ಟೆಕ್‌ವರೆಗೆ, ಏರೋಸ್ಪೇಸ್‌ನಿಂದ ಆರೋಗ್ಯ ಮತ್ತು ಇಎಸ್‌ಡಿಎಂವರೆಗೆ ಅಮೆರಿಕದಾದ್ಯಂತ ಮುಂದಿನ ಎರಡು ವಾರಗಳ ಅವಧಿಯಲ್ಲಿ ಸುಮಾರು 30 ಕಂಪನಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟಪ್​ಗಳಿಗೆ ಅಮೆರಿಕ ಕಂಪನಿಗಳ ಹೂಡಿಕೆ ಸೆಳೆಯಲಿದೆ ಕರ್ನಾಟಕ
ಸಚಿವ ಎಂಬಿ ಪಾಟೀಲ್

Updated on: Sep 26, 2023 | 10:46 PM

ಬೆಂಗಳೂರು, ಸೆಪ್ಟೆಂಬರ್ 26: ದೊಡ್ಡ ಹೂಡಿಕೆದಾರರನ್ನು ಕರ್ನಾಟಕಕ್ಕೆ ಸೆಳೆಯಲು ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil) ನೇತೃತ್ವದ ಕರ್ನಾಟಕ ಸರ್ಕಾರದ ನಿಯೋಗ ಅಮೆರಿಕಕ್ಕೆ ಎರಡು ವಾರಗಳ ಪ್ರವಾಸ ಕೈಗೊಂಡಿದೆ. ನಿಯೋಗವು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ESDM) ಕ್ಷೇತ್ರಗಳಲ್ಲಿ ಅಮೆರಿಕದ ದೊಡ್ಡ ಕಂಪನಿಗಳ ಹೂಡಿಕೆ ಸೆಳೆಯಲು ಪ್ರಯತ್ನಿಸಲಿದೆ. ಆಪಲ್‌ನಂತಹ ಮೊಬೈಲ್ ಫೋನ್ ತಯಾರಕರು ಮತ್ತು ಇಂಟೆಲ್‌ಸ್ಟಾಟ್ ಮತ್ತು ಆರ್‌ಟಿಎಕ್ಸ್‌ನಂತಹ ಏರೋಸ್ಪೇಸ್ ಕಂಪನಿಗಳಿಗೆ ವಿಶೇಷ ಒತ್ತು ನೀಡಲಿದೆ.

ನಿಯೋಗವು ಎಲೆಕ್ಟ್ರಿಕಲ್ ವೆಹಿಕಲ್ಸ್ (ಇವಿ) ತಯಾರಕರಿಂದ ಫಿನ್‌ಟೆಕ್‌ವರೆಗೆ, ಏರೋಸ್ಪೇಸ್‌ನಿಂದ ಆರೋಗ್ಯ ಮತ್ತು ಇಎಸ್‌ಡಿಎಂವರೆಗೆ ಅಮೆರಿಕದಾದ್ಯಂತ ಮುಂದಿನ ಎರಡು ವಾರಗಳ ಅವಧಿಯಲ್ಲಿ ಸುಮಾರು 30 ಕಂಪನಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ತಂಡವು ತಮ್ಮ ಭೇಟಿಯ ಅವಧಿಯಲ್ಲಿ ವಾಷಿಂಗ್ಟನ್, ಬೋಸ್ಟನ್, ಆಸ್ಟಿನ್, ಡಲ್ಲಾಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣಿಸಲಿದೆ.

ಪಾಟೀಲ್ ಮತ್ತು ಕೈಗಾರಿಕಾ ಇಲಾಖೆಯು ವಾಷಿಂಗ್ಟನ್‌ನಲ್ಲಿ ಸೋಮವಾರ ಆರ್‌ಟಿಎಕ್ಸ್‌ನೊಂದಿಗೆ ಮಾತುಕತೆ ನಡೆಸಿದೆ. ಕಂಪನಿಯು ಈಗಾಗಲೇ ಬೆಂಗಳೂರಿನಲ್ಲಿ ಆರ್ ಆ್ಯಂಡ್ ಡಿ ಕೇಂದ್ರವನ್ನು ಹೊಂದಿದೆ. ಪೂರೈಕೆ ಸರಪಳಿ ಸಂಪರ್ಕಗಳನ್ನು ಹೆಚ್ಚಿಸುವಲ್ಲಿ ಮತ್ತು ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಪರಿಗಣಿಸುವಲ್ಲಿ ವಿಸ್ತರಣಾ ಯೋಜನೆಗಳ ಬಗ್ಗೆ ಚರ್ಚಿಸಲು ನಿಯೋಗವು ಕಂಪನಿಯ ಜತೆ ಮಾತುಕತೆ ನಡೆಸಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಇದನ್ನೂ ಓದಿ: ಆಹಾರ ಉದ್ಯಮದಲ್ಲಿ ಸಮಾನ ಅವಕಾಶಕ್ಕೆ ಎಫ್​ಎಸ್​ಎಸ್​ಎಐ ತಂತ್ರ; ಮಹಿಳೆಯರು, ತೃತೀಯ ಲಿಂಗಿಗಳಿಗೆ ವಿಶೇಷ ವ್ಯವಸ್ಥೆ

ತಂತ್ರಜ್ಞಾನದ ಸಹಯೋಗಕ್ಕಾಗಿ ಬಾಹ್ಯಾಕಾಶ ಉದ್ಯಮದ ಸ್ಟಾರ್ಟ್‌ಅಪ್‌ಗಳೊಂದಿಗೆ ಸಂಭವನೀಯ ಪಾಲುದಾರಿಕೆಯನ್ನು ಅನ್ವೇಷಿಸಲು ಎರಡೂ ಕಡೆಯವರು ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಪ್ರತಿಭಾನ್ವೇಷಣೆಯನ್ನು ಬೆಳೆಸಲು ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಸಹಭಾಗಿತ್ವಕ್ಕೆ ಸಚಿವರು ಮಾತುಕತೆ ವೇಳೆ ಒತ್ತು ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us