ಕೊರೊನಾ ಆತಂಕ: ಬೆಂಗಳೂರಿನ ಎಲ್ಲಾ ಕ್ಷೇತ್ರದಲ್ಲೂ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧಾರ: ಆರ್. ಅಶೋಕ್

Corona Third Wave: ಬೆಂಗಳೂರಿನ ಎಲ್ಲಾ ಕ್ಷೇತ್ರದಲ್ಲೂ ಮಕ್ಕಳ ಆಸ್ಪತ್ರೆಯ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲೂ ಮಕ್ಕಳ ಆಸ್ಪತ್ರೆ ಸ್ಥಾಪನೆಗೆ ಸೂಚನೆ ಕೊಟ್ಟಿದ್ದೇನೆ. ಪ್ರವಾಹ ಹಿನ್ನೆಲೆಯಲ್ಲೂ ಸಭೆ ಪರಿಶೀಲನೆ ನಡೆಸಿದ್ದೇವೆ ಎಂದು ಆರ್. ಅಶೋಕ್ ಹೇಳಿದ್ದಾರೆ.

ಕೊರೊನಾ ಆತಂಕ: ಬೆಂಗಳೂರಿನ ಎಲ್ಲಾ ಕ್ಷೇತ್ರದಲ್ಲೂ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧಾರ: ಆರ್. ಅಶೋಕ್
ಆರ್. ಅಶೋಕ್
Follow us
TV9 Web
| Updated By: ganapathi bhat

Updated on: Aug 10, 2021 | 3:48 PM

ಬೆಂಗಳೂರು: ಕೊರೊನಾ 3ನೇ ಅಲೆ ತಡೆಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಕೊವಿಡ್19 ಸೋಂಕಿನ 2ನೇ ಅಲೆಯಲ್ಲಿ ಸಾಕಷ್ಟು ಅನುಭವವಾಗಿದೆ. ನಾವು ಏನು ತಪ್ಪು ಮಾಡಿದ್ದೆವು ಎಂದು ಅರಿವಾಗಿದೆ. ಹೀಗಾಗಿ 3ನೇ ಅಲೆ ತಡೆಯಲು ಸಿದ್ಧತೆ ಮಾಡಿಕೊಳ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಇಂದು (ಆಗಸ್ಟ್ 10) ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಯಿಂದ ಬೆಡ್ ಪಡೆಯುತ್ತೇವೆ. ಮತ್ತೆ ಬೆಡ್ ಪಡೆಯುವುದಾಗಿ ಖಾಸಗಿ ಆಸ್ಪತ್ರೆಗೆ ನೀಡಲಾಗಿದ್ದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜನಪ್ರತಿನಿಧಿಗಳು ಕೂಡ ಕೊವಿಡ್ ನಿಯಮ ಪಾಲಿಸಬೇಕು. ಕೊರೊನಾ ನಿಯಂತ್ರಣಕ್ಕೆ ಸರ್ಕಾರದಿಂದ ಕಠಿಣ ಕ್ರಮ ಜಾರಿಗೊಳಿಸಲು ಸರ್ಕಾರ ಹಿಂದೇಟು ಹಾಕಲ್ಲ. ಆಗಸ್ಟ್ 15ರ ಬಳಿಕ ಮತ್ತೊಂದು ಸುತ್ತಿನ ಸಭೆ ಮಾಡ್ತೇವೆ. ಗಡಿಗಳಲ್ಲಿ ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚಿಸುತ್ತೇವೆ. ಕೊರೊನಾ ನಿಯಮ ಪಾಲಿಸಿ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಗುತ್ತದೆ ಎಂದು ನಗರದಲ್ಲಿ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.

ಶ್ರಾವಣದಲ್ಲಿ ಹಬ್ಬಗಳು ಬರ್ತವೆ, ಈ ಸಂದರ್ಭದಲ್ಲಿ ಜನರು ಮೈಮರೆಯಬಾರದು. ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ಕೊಡುವ ಬಗ್ಗೆ ಮಾಹಿತಿ ಬಂದಿದೆ. ಕೊರೊನಾ 3 ನೇ ಅಲೆ ಬರ್ತಿದೆ, ಮುಂಜಾಗೃತ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ನಡೆಸಿದ್ದೇವೆ. ಕರ್ನಾಟಕ ವಿಪತ್ತು ನಿರ್ವಹಣೆಯಡಿ ಹಣ ಬಿಡಗಡೆ ಮಾಡ್ತೇವೆ ಎಂದು ಅಶೋಕ್ ಹೇಳಿದ್ದಾರೆ.

ಬೆಂಗಳೂರಿನ ಎಲ್ಲಾ ಕ್ಷೇತ್ರದಲ್ಲೂ ಮಕ್ಕಳ ಆಸ್ಪತ್ರೆಯ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲೂ ಮಕ್ಕಳ ಆಸ್ಪತ್ರೆ ಸ್ಥಾಪನೆಗೆ ಸೂಚನೆ ಕೊಟ್ಟಿದ್ದೇನೆ. ಪ್ರವಾಹ ಹಿನ್ನೆಲೆಯಲ್ಲೂ ಸಭೆ ಪರಿಶೀಲನೆ ನಡೆಸಿದ್ದೇವೆ. ವಿಪತ್ತು ನಿರ್ವಹಣೆಯ ಹಣ ಬಳಕೆಗೆ ಸೂಚಿಸಿದ್ದೇನೆ. ನಾಳೆ, ಅಥವಾ ನಾಡಿದ್ದು ಸಿಎಂ ಗಡಿ ಜಿಲ್ಲೆಗಳಿಗೆ ಭೇಟಿ ನೀಡ್ತಾರೆ. ಕೊರೊನಾ ತಡೆಗೆ ಎಲ್ಲ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ಮಾಡ್ತಿದ್ದೇವೆ. ಖಾಸಗಿ ಆಸ್ಪತ್ರೆಗೆ ತಾತ್ಕಾಲಿಕವಾಗಿ ಬೆಡ್ ಬಳಸಲು ಅವಕಾಶ ನೀಡಿದ್ದೇವೆ. ಪ್ರಕರಣ ಹೆಚ್ಚಾದ್ರೆ ಮತ್ತೆ ಹಾಸಿಗೆ ವಾಪಸ್ ಪಡೆಯುತ್ತೇವೆ. ಈ ಬಗ್ಗೆ ಷರತ್ತು ವಿಧಿಸಿಯೇ ಹಾಸಿಗೆ ಬಳಸಲು ಅವಕಾಶ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯೇ ಆಗಿಲ್ಲ ಸಾವರ್ಕರ್ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ. ದೀನದಯಾಳ್, ವಾಯಪೇಯಿ ಬಗ್ಗೆ ಮಾತಾಡಬಾರದು. ಅವರ ಬಗ್ಗೆ ಮಾತಾಡುವ ನೈತಿಕತೆ, ಯೋಗ್ಯತೆ ಕಾಂಗ್ರೆಸ್‌ಗಿಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ‘ಇಂದಿರಾ ಕ್ಯಾಂಟೀನ್’ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ನಿರ್ಧಾರ ಮಾಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಹೆಸರು ಬದಲಾವಣೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿಲ್ಲ. ಈ ಕುರಿತು, ಈವರೆಗೂ ಸರ್ಕಾರದ ಮಟ್ಟದಲ್ಲಿ ಚರ್ಚೆಯೇ ಮಾಡಿಲ್ಲ ಎಂದು ಅಶೋಕ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಗುಣಮುಖ ಆದವರಿಗೆ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ: ಆರೋಗ್ಯ ಇಲಾಖೆ ಮಹತ್ವದ ತೀರ್ಮಾನ

Corona Vaccine: 9, 10ನೇ ತರಗತಿ ವಿದ್ಯಾರ್ಥಿಗಳ ತಂದೆ, ತಾಯಿಗೆ ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ

(Minister R Ashok on Coronavirus Covid19 Third Wave Children Hospital in Bengaluru Areas)