ಕೊರೊನಾದಿಂದ ಗುಣಮುಖ ಆದವರಿಗೆ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ: ಆರೋಗ್ಯ ಇಲಾಖೆ ಮಹತ್ವದ ತೀರ್ಮಾನ

ಕೊರೊನಾ ಸೋಂಕು ಕ್ಷಯರೋಗ ಕಾರ್ಯಕ್ರಮದ ಪ್ರಮುಖ ಕಾರ್ಯತಂತ್ರಗಳ ಮೇಲೆ ಪರಿಣಾಮ ಬೀರಿದೆ, ಈ ಹಿನ್ನೆಲೆಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ನಡೆಸುವ ಬಗ್ಗೆ ಇಲಾಖೆ ಕ್ರಮ ಕೈಗೊಂಡಿದೆ.

ಕೊರೊನಾದಿಂದ ಗುಣಮುಖ ಆದವರಿಗೆ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ: ಆರೋಗ್ಯ ಇಲಾಖೆ ಮಹತ್ವದ ತೀರ್ಮಾನ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊವಿಡ್-19 ರಿಂದ ಗುಣಮುಖ ಹೊಂದಿದ ವ್ಯಕ್ತಿಗಳ ಹಾಗೂ ಅವರ ಮನೆಯಲ್ಲಿರುವ ಕುಟುಂಬ ಸದಸ್ಯರಿಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮ ನಡೆಸುವ ಬಗ್ಗೆ ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಕೊರೊನಾ ಸೋಂಕು ಕ್ಷಯರೋಗ ಕಾರ್ಯಕ್ರಮದ ಪ್ರಮುಖ ಕಾರ್ಯತಂತ್ರಗಳ ಮೇಲೆ ಪರಿಣಾಮ ಬೀರಿದೆ, ಈ ಹಿನ್ನೆಲೆಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ನಡೆಸುವ ಬಗ್ಗೆ ಇಲಾಖೆ ಕ್ರಮ ಕೈಗೊಂಡಿದೆ.

ಕೊರೊನಾ ಸಾಂಕ್ರಾಮಿಕವು ಕ್ಷಯರೋಗ ಕಾರ್ಯಕ್ರಮದ ಪ್ರಮುಖ ಕಾರ್ಯತಂತ್ರಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಅಧಿಸೂಚನೆಗಳು 2019ಕ್ಕೆ ಹೋಲಿಸಿದಲ್ಲಿ 2020ರಲ್ಲಿ ಕ್ಷಯರೋಗದ ಪ್ರಕರಣಗಳು ಸುಮಾರು ಶೇಕಡಾ 28ರಷ್ಟು ಕಡಿಮೆ ವರದಿಯಾಗಿದೆ. ಕೊವಿಡ್-19 ಸೋಂಕಿನ ಎರಡನೇ ಅಲೆಯೂ ಸಹ 2021ರಲ್ಲಿ ಕ್ಷಯರೋಗದ ಅಧಿಸೂಚನೆಯನ್ನು ಕಡಿಮೆ ಮಾಡುತ್ತಿದೆ.

ಜಾಗತಿಕವಾಗಿ ಕೊವಿಡ್ ಸೋಂಕಿನಿಂದ ಚೇತರಿಸಿಕೊಂಡ ಪ್ರಕರಣಗಳಲ್ಲಿ ಕ್ಷಯರೋಗದ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗುತ್ತಿದೆ ಎಂಬ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿದೆ. ಕೊವಿಡ್19 ಸೋಂಕಿನಿಂದ ಗುಣಮುಖ ಆದ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಸಾಧ್ಯತೆ ಮತ್ತು ಶ್ವಾಸಕೋಶ ಹಾನಿ ಉಂಟಾಗಿರುವ ಕಾರಣ ಕ್ಷಯರೋಗ ಉಂಟಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ.

ಕೆಲವು ಜಿಲ್ಲೆಗಳಲ್ಲಿ ನಡೆಸಿದ ಪ್ರಾಥಮಿಕ ವಿಶ್ಲೇಷಣೆಯಲ್ಲಿ ಕರ್ನಾಟಕದಲ್ಲಿ ಕೊವಿಡ್19ರಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಕನಿಷ್ಠ 24 ಕ್ಷಯರೋಗದ ಪ್ರಕರಣಗಳು ವರದಿಯಾಗಿರುವುದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಗಳನ್ನು ಕೊವಿಡ್ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಗಳ ಮತ್ತು ಅವರ ಮನೆಯಲ್ಲಿನ ಸಂಪರ್ಕಿತರ ಸಮೀಕ್ಷೆಯ ಚಟುವಟಿಕೆಯನ್ನು ದಿನಾಂಕ ಆಗಸ್ಟ್ 16 ರಿಂದ ಆಗಸ್ಟ್ 31ರ ವರೆಗೆ ನಡೆಸಲು ಕರ್ನಾಟಕ ಆರೋಗ್ಯ ಇಲಾಖೆ ಪ್ರಸ್ತಾಪಿಸಿದೆ.

ಇದನ್ನೂ ಓದಿ: Corona Vaccine: 9, 10ನೇ ತರಗತಿ ವಿದ್ಯಾರ್ಥಿಗಳ ತಂದೆ, ತಾಯಿಗೆ ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,186 ಕೊರೊನಾ ಕೇಸ್ ಪತ್ತೆ; 24 ಮಂದಿ ಸಾವು

(Karnataka Health Department on Corona Covid19 cured Patients Movement to find TB Patients)

Published On - 9:40 pm, Mon, 9 August 21

Click on your DTH Provider to Add TV9 Kannada