MIS-C Cases: ನಿರ್ಲಕ್ಷಿಸಿದರೆ ಮಕ್ಕಳ ಅಂಗಾಂಗಕ್ಕೆ ಮಾರಕ ಮಿಸ್​ ಸಿ; ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ಈ ಲಕ್ಷಣಗಳಿದ್ದರೆ ನಿಗಾ ವಹಿಸಿ

Multisystem Inflammatory Syndrome in Children: ಕೊರೊನಾ ಸೋಂಕು ತಗುಲಿದಾಗ ದೇಹದಲ್ಲಿ ಸಹಜವಾಗಿ ಪ್ರತಿಕಾಯಗಳು ಅಧಿಕ ಸಂಖ್ಯೆಯಲ್ಲಿ ಉತ್ಪಾದನೆಯಾಗಿರುತ್ತವೆ. ಆದರೆ, ಮಿಸ್​ ಸಿ ಆ ಪ್ರತಿಕಾಯಗಳ ಮೇಲೆ ಅಡ್ಡಪರಿಣಾಮ ಬೀರಿ ಅವು ಮಕ್ಕಳ ದೇಹದಲ್ಲಿನ ಅಂಗಾಂಗಳಲ್ಲಿರುವ ಜೀವಕೋಶಗಳ ವಿರುದ್ಧವೇ ಹೋರಾಡುವಂತೆ ಮಾಡಲಿವೆ. ಇದು ಜೀವಕೋಶಗಳಿಗೆ ಮಾರಕವಾಗಿ ಅಂಗಾಂಗ ವೈಫಲ್ಯಕ್ಕೆ ಕಾರಣವಾಗುತ್ತದೆ.

MIS-C Cases: ನಿರ್ಲಕ್ಷಿಸಿದರೆ ಮಕ್ಕಳ ಅಂಗಾಂಗಕ್ಕೆ ಮಾರಕ ಮಿಸ್​ ಸಿ; ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ಈ ಲಕ್ಷಣಗಳಿದ್ದರೆ ನಿಗಾ ವಹಿಸಿ
ಸಾಂಕೇತಿಕ ಚಿತ್ರ
Follow us
| Updated By: Skanda

Updated on: Jul 03, 2021 | 11:34 AM

ಬೆಂಗಳೂರು: ಕೊರೊನಾ ಎರಡನೇ ಅಲೆ ತೀವ್ರತೆ ಕಡಿಮೆಯಾಗುತ್ತಿದ್ದರೂ ಡೆಲ್ಟಾ ರೂಪಾಂತರಿ ಹಾಗೂ ಸಂಭವನೀಯ ಮೂರನೇ ಅಲೆ ಕಾರಣದಿಂದಾಗಿ ಆತಂಕ ಕಡಿಮೆಯಾಗಿಲ್ಲ. ಮಕ್ಕಳಿಗೆ ಮೂರನೇ ಅಲೆ ಅಪಾಯಕಾರಿ ಎಂದು ಅನೇಕ ಸಲ ತಜ್ಞರು ಹೇಳಿರುವುದರಿಂದ ಪೋಷಕರು ಆ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಏತನ್ಮಧ್ಯೆ, ಕೊರೊನಾ ಬಂದು ಹೋದ ಮೇಲೆ ಕಾಣುವ ಮಿಸ್​ ಸಿ ಸೋಂಕು ಈಗಾಗಲೇ ಕೊವಿಡ್​ 19ರಿಂದ ಚೇತರಿಸಿಕೊಂಡ ಮಕ್ಕಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದು, ಮೂರನೇ ಅಲೆಗೂ ಮುನ್ನವೇ ಮತ್ತೊಂದು ಆಘಾತ ಎದುರಾದಂತಾಗಿದೆ.

ಮಿಸ್​ ಸಿ ಎನ್ನುವುದರ ಅರ್ಥ Multisystem Inflammatory Syndrome in Children ಎಂದಾಗಿದ್ದು, ಇದು ಮಕ್ಕಳಿಗೆ ಕೊರೊನಾ ಸೋಂಕು ಬಂದು ಹೋದ 2 ವಾರಗಳ ನಂತರ ಕಾಣಿಸಿಕೊಳ್ಳಲಿದೆ ಅಥವಾ ಕೊರೊನಾ ತಗುಲಿದ ಕೆಲ ದಿನಗಳಲ್ಲೇ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. MIS-C ಮಕ್ಕಳಿಗೆ ಅಪಾಯಕಾರಿ ಎನ್ನಲು ಕಾರಣ ಅದರ ವರ್ತನೆ. ಏಕೆಂದರೆ ಇದು ಮಕ್ಕಳ ದೇಹದಲ್ಲಿ ಉತ್ಪತ್ಪಿಯಾಗುವ ಪ್ರತಿಕಾಯಗಳ ಕೆಲಸವನ್ನೇ ಅದಲುಬದಲು ಮಾಡಲಿದ್ದು, ಪ್ರತಿಕಾಯಗಳಿಂದಲೇ ಜೀವಕ್ಕೆ ಹಾನಿಯುಂಟಾಗುವಂತೆ ಮಾಡುತ್ತವೆ.

ಕೊರೊನಾ ಸೋಂಕು ತಗುಲಿದಾಗ ದೇಹದಲ್ಲಿ ಸಹಜವಾಗಿ ಪ್ರತಿಕಾಯಗಳು ಅಧಿಕ ಸಂಖ್ಯೆಯಲ್ಲಿ ಉತ್ಪಾದನೆಯಾಗಿರುತ್ತವೆ. ಆದರೆ, ಮಿಸ್​ ಸಿ ಆ ಪ್ರತಿಕಾಯಗಳ ಮೇಲೆ ಅಡ್ಡಪರಿಣಾಮ ಬೀರಿ ಅವು ಮಕ್ಕಳ ದೇಹದಲ್ಲಿನ ಅಂಗಾಂಗಳಲ್ಲಿರುವ ಜೀವಕೋಶಗಳ ವಿರುದ್ಧವೇ ಹೋರಾಡುವಂತೆ ಮಾಡಲಿವೆ. ಇದು ಜೀವಕೋಶಗಳಿಗೆ ಮಾರಕವಾಗಿ ಅಂಗಾಂಗ ವೈಫಲ್ಯಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಮಕ್ಕಳು ಹೃದಯ, ಕಣ್ಣು, ಕಿಡ್ನಿ ಸೇರಿದಂತೆ ಬಹು ಅಂಗಾಂಗ ಸಮಸ್ಯೆಗೆ ತುತ್ತಾಗುವಂತೆ ಆಗಲಿದೆ.

ರಾಜ್ಯದಲ್ಲಿ ಮಿಸ್​ ಸಿ ಸೋಂಕಿನ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಬೆಂಗಳೂರಿನ ಇಂದಿರಾಗಾಂಧಿ‌ ಮಕ್ಕಳ ಆಸ್ಪತ್ರೆ ಒಂದರಲ್ಲೇ ಕೊರೊನಾ ಆರಂಭದಿಂದ ಇಲ್ಲಿಯ ತನಕ ಸುಮಾರು 50 ಮಿಸ್​ ಸಿ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಒಟ್ಟು 300ಕ್ಕೂ ಹೆಚ್ಚು ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಈ ತನಕ 500 ಕ್ಕೂ ಹೆಚ್ಚು ಮಕ್ಕಳಿಗೆ ಮಿಸ್​ ಸಿ ಸೋಂಕು ದೃಢಪಟ್ಟಿದೆ. ಮೈಸೂರಿನಲ್ಲಿ ಪತ್ತೆಯಾದ 50ಕ್ಕೂ ಹೆಚ್ಚು ಮಿಸ್​ ಸಿ ಪ್ರಕರಣಗಳ ಪೈಕಿ 7 ಮಕ್ಕಳು ಸಾವಿಗೀಡಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲೂ ಈವರೆಗೆ 35 ಮಕ್ಕಳಿಗೆ ಮಿಸ್​ ಸಿ ದೃಢಪಟ್ಟಿದ್ದು, ಕೊವಿಡ್​ನಿಂದ ಗುಣಮುಖರಾದ ಮಕ್ಕಳಲ್ಲಿ ಈ ಸೋಂಕು ಹೆಚ್ಚಳವಾಗುತ್ತಿದೆ. ಸದ್ಯ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮಿಸ್​ ಸಿ ಸೋಂಕಿಗೆ ತುತ್ತಾದ ಮಕ್ಕಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ.

ದೆಹಲಿಯಲ್ಲಿ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಅತಿ ಹೆಚ್ಚು ಮಿಸ್​ ಸಿ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಕರ್ನಾಟಕದಲ್ಲಿ ಎರಡನೇ ಅಲೆ ಇಳಿಮುಖವಾಗುತ್ತಿರುವ ಹೊತ್ತಿನಲ್ಲಿ ಮಿಸ್​ ಸಿ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದು ವೇಳೆ ಮಕ್ಕಳಿಗೆ ಕಂಟಕಪ್ರಾಯ ಎನ್ನಲಾದ ಕೊರೊನಾ ಮೂರನೇ ಅಲೆಯಲ್ಲೂ ಮಿಸ್​ ಸಿ ಸೋಂಕು ಹೆಚ್ಚಳವಾದರೆ ಏನು ಮಾಡಬೇಕು, ಹೇಗೆ ನಿಯಂತ್ರಿಸಬೇಕು ಎನ್ನುವುದರ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಚಿಂತನೆ ನಡೆಸುತ್ತಿದ್ದಾರೆ.

ಮಿಸ್​ ಸಿ ಸೋಂಕಿನ ಇತ್ತೀಚಿನ ರೋಗಲಕ್ಷಣಗಳೇನು? ಮೈಯಲ್ಲಿ ವಿಪರೀತ ತುರಿಕೆ ಅನುಭವ ಆಗುವುದು ಮೈಯಲ್ಲಿ ಊತ ಕಾಣಿಸಿಕೊಳ್ಳುವುದು ಕಣ್ಣಿನ ಸುತ್ತ ಕೆಂಪಾಗುವುದು ಜ್ವರ ಜಾಸ್ತಿಯಾಗುವುದು ಹೊಟ್ಟೆನೋವು ಸಮಸ್ಯೆ ವಾಂತಿ ಆಗುವುದು

ಪ್ರಸ್ತುತ ಭಾರತದಲ್ಲಿ ಮಿಸ್​ ಸಿ ಸೋಂಕಿನಿಂದ ಶೇ.2 ರಿಂದ ಶೇ.3 ರಷ್ಟು ಸಾವು ಸಂಭವಿಸುತ್ತಿದೆ. ಸೋಂಕು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದಾಖಲಾದರೆ ಗುಣಪಡಿಸುವ ಸಾಧ್ಯತೆ ಇದ್ದು, ಸಾವಿನ ಪ್ರಮಾಣ ತಗ್ಗಲಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳ ಅಂಗಾಂಗದ ಮೇಲೆ ದುಷ್ಪರಿಣಾಮ ಬೀರುವ ಶಕ್ತಿ ಮಿಸ್​ ಸಿ ಸೋಂಕಿಗೆ ಇರುವ ಕಾರಣ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಅತ್ಯವಶ್ಯಕವಾಗಿದೆ.

ಇದನ್ನೂ ಓದಿ: ಕೊರೊನಾ 3ನೇ ಅಲೆ; ಸ್ಥೂಲಕಾಯ, ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳ ಬಗ್ಗೆ ಇರಲಿ ಹೆಚ್ಚಿನ ಎಚ್ಚರ

 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ