ರೆಮ್​ಡೆಸಿವರ್ ಇಂಜೆಕ್ಷನ್ ಅಂತಾ ಪೋಲಿಯೋ ಇಂಜೆಕ್ಷನ್ ಕದ್ದ ಖದೀಮರು.. ಆಮೇಲೆ ಏನು ಮಾಡಿದರು!?

polio vaccine theft: ಇದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ. ಆದ್ರೆ ಆ ಖದೀಮರಿಗೆ ದಾರಿ ಮಧ್ಯೆಯೇ ಗೊತ್ತಾಗಿದ್ದೇನೆಂದ್ರೆ ತಾವು ಕದ್ದಿರುವುದು ಬ್ಲ್ಯಾಕ್ ಮಾರ್ಕೆಟ್​ನಲ್ಲಿ ಸಖತ್​ ಬೇಡಿಕೆಯಿರುವ ರೆಮ್​ಡೆಸಿವರ್ ಇಂಜೆಕ್ಷನ್ ಅಲ್ಲ; ಪೋಲಿಯೋ ಔಷಧಿ ಅಂತಾ ಗೊತ್ತಾಗಿದೆ.

ರೆಮ್​ಡೆಸಿವರ್ ಇಂಜೆಕ್ಷನ್ ಅಂತಾ ಪೋಲಿಯೋ ಇಂಜೆಕ್ಷನ್ ಕದ್ದ ಖದೀಮರು.. ಆಮೇಲೆ ಏನು ಮಾಡಿದರು!?
ರೆಮ್​ಡೆಸಿವರ್ ಇಂಜೆಕ್ಷನ್ ಅಂತಾ ಪೋಲಿಯೋ ಇಂಜೆಕ್ಷನ್ ಕದ್ದ ಖದೀಮರು.. ಆಮೇಲೆ ಏನು ಮಾಡಿದರು!?

Updated on: May 07, 2021 | 8:52 AM

ಬೆಳಗಾವಿ: ಕಳ್ಳಕಾಕರರಿಗೆ ಕೊರೊನಾ ಆದರೆ ಏನು, ಮತ್ತೊಂದಾದರೆ ಏನು? ತಾವುಂಟು ಮೂರು ಲೋಕವುಂಟು ಅಂತಾ ಕಳ್ಳತನ, ಖದೀಮತನ ಮಾಡೋದೆ ಆಗೋಗಿದೆ. ಕೊರೊನಾದಂತಹ ರಾಕ್ಷಸ ಉಗ್ರರೂಪ ತೋರುತ್ತೊದ್ದಾನೆ. ಸ್ವಲ್ಪನಾದರೂ ಮಾನವಂತರಾಗಿರೋಣ ಅನ್ನೋ ಬಾಬತ್ತೇ ಇಲ್ಲ ಅವರಲ್ಲಿ.

ಕಳೆದ ರಾತ್ರಿ ಒಂದಷ್ಟು ಶಾಣ್ಯಾ ಖದೀಮರು ಏನು ಮಾಡಿದ್ದಾರೆ ಅಂದ್ರೆ ಸೀದಾ ಅಥಣಿ ತಾಲೂಕು ಆಸ್ಪತ್ರೆಗೆ ಲಗ್ಗೆ ಹಾಕಿದ್ದಾರೆ. ಕೊರೊನಾ ಮಹಾಮಾರಿ ಅಬ್ಬರದ ನಡುವೆಯೇ ಔಷಧಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಅವರ ಗುರಿಯಿದ್ದಿದ್ದು ರೆಮ್​ಡೆಸಿವರ್ ಇಂಜೆಕ್ಷನ್​ನತ್ತ. ಅದಕ್ಕೆ ಬಹುಬೇಡಿಕೆಯಿದ್ದು, ಒಂದಷ್ಟು ಕಾಸು ಮಾಡಬಹುದು ಅಂತಾ ಆಸ್ಪತ್ರೆಯಲ್ಲಿಟ್ಟಿದ್ದ ರೆಮ್​ಡೆಸಿವರ್ ಇಂಜೆಕ್ಷನ್ ಕದ್ದಿದ್ದಾರೆ. ಆದರೆ ಯಾಮಾರಿ,
ರೆಮ್​ಡೆಸಿವರ್ ಇಂಜೆಕ್ಷನ್ ಅಂತಾ ಪೋಲಿಯೋ ವೈಸರ್​​ಗೆ ಕೊಡುವ ವ್ಯಾಕ್ಸಿನೇಶನ್​ ಇಂಜೆಕ್ಷನ್ (polio vaccine) ಕದ್ದುಬಿಟ್ಟಿದ್ದಾರೆ!

ಇದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ. ಆದ್ರೆ ಆ ಖದೀಮರಿಗೆ ದಾರಿ ಮಧ್ಯೆಯೇ ಗೊತ್ತಾಗಿದ್ದೇನೆಂದ್ರೆ ತಾವು ಕದ್ದಿರುವುದು ಬ್ಲ್ಯಾಕ್ ಮಾರ್ಕೆಟ್​ನಲ್ಲಿ ಸಖತ್​ ಬೇಡಿಕೆಯಿರುವ ರೆಮ್​ಡೆಸಿವರ್ ಇಂಜೆಕ್ಷನ್ ಅಲ್ಲ; ಪೋಲಿಯೋ ಔಷಧಿ ಅಂತಾ ಗೊತ್ತಾಗಿದೆ. ದುಷ್ಕರ್ಮಿಗಳು ತಕ್ಷಣವೇ ಅಲ್ಲೇ ರಸ್ತೆಯಲ್ಲೇ ಕದ್ದಿದ್ದನ್ನೆಲ್ಲಾ ಎಸೆದು ಹೋಗಿದ್ದಾರೆ. ಅಥಣಿ ಪಟ್ಟಣದ ಸಂಗಮೇಶ್ವರ್ ನಗರದ ಬಳಿಯ ರಸ್ತೆ ಮೇಲೆ ಔಷಧಿ ಎಸೆದು ಹೋಗಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

(miscreants stole polio injection thinking its valuable remdesivir injections in athani hospital)

ಕಲಬುರಗಿಯಲ್ಲಿ ರೆಮ್‌ಡೆಸಿವಿರ್ ಖಾಲಿ, ಇಂಜೆಕ್ಷನ್ ತರಲು ಸ್ವತ: ಬೆಂಗಳೂರಿಗೆ ಧಾವಿಸಿದ ಸಂಸದ ಉಮೇಶ್ ಜಾಧವ್

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us