ಯಡಿಯೂರಪ್ಪನವರೇ.. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನ ಸಿದ್ಧಲಿಂಗೇಶ್ವರನು ಕ್ಷಮಿಸೋಲ್ಲ: H.ವಿಶ್ವನಾಥ್
ಯಡಿಯೂರಪ್ಪನವರೇ ಸಿದ್ದಲಿಂಗೇಶ್ವರನು ನಿಮಗೆ ಒಳ್ಳೆದು ಮಾಡೋಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನ ಸಿದ್ಧಲಿಂಗೇಶ್ವರನು ಕ್ಷಮಿಸೋಲ್ಲ. ನೀವು ಎಂತ ಸರ್ಕಾರ ಮಾಡಿದ್ದೀರಿ ಯಡಿಯೂರಪ್ಪನವರೇ? ಮುನಿರತ್ನ ಬದಲು ಯೋಗೇಶ್ವರ್ ಯಾಕೇ ಸಚಿವ ಸ್ಥಾನ ಕೊಡ್ತೀರಾ ಹೇಳಿ?
ಮೈಸೂರು: ಇಂದು ಬಿಜೆಪಿ ಸರ್ಕಾರದಿಂದ 7 ಜನ ಚುನಾಯಿತ ಪ್ರತಿನಿಧಿಗಳು, ಸಚಿವರಾಗಿ ಆಯ್ಕೆಯಾಗಿದ್ದು, ಸಚಿವ ಸ್ಥಾನ ವಂಚಿತರಾದವರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದರಲ್ಲಿ ಬಿಜೆಪಿ MLC ಹೆಚ್.ವಿಶ್ವನಾಥ್ ಮೊದಲಿಗರಾಗಿದ್ದು, ತಮಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಾಲಿಗೆ ತಪ್ಪದ ನಾಯಕ ಅಂತ ಬಿರುದು ಕೊಟ್ಟಿದ್ದು ನಾನೇ.. ಯಡಿಯೂರಪ್ಪನವರೇ ನಿಮ್ಮಿಂದ ಏನಾದರೂ ನಿರೀಕ್ಷೆ ಮಾಡಿದ್ನಾ ನಾನು? ಸ್ನೇಹದಲ್ಲಿ ಇದ್ದುದ್ದಕ್ಕೆ ನಿಮಗೆ ಸಹಾಯ ಮಾಡಿದೆವು. ಆದರೆ ನೀವೇನು ಮಾಡಿದಿರಿ ಹೇಳಿ? ನೀವು ಏನು ಮಾತು ಕೊಟ್ಟಿದ್ದರಿ ಅಂತಾ ಹೇಳಿ? ಬನ್ನಿ ಬೇಕಾದರೆ ಯಡಿಯೂರಿಗೆ ಹೋಗೋಣ ಏನಾಯ್ತು ಅಂತ ಅಲ್ಲೆ ಮಾತನಾಡೋಣ. ನಾವು ಯಡಿಯೂರಪ್ಪರಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮನ್ನು ಸಿಎಂ ಮಾಡಿದ್ದೆ ಈ 17 ಜನ. ನಿಮ್ಮ ಸಂಪುಟದಲ್ಲಿ ಎಲ್ಲರು ಇರಬೇಕು ಮುಸ್ಲಿಂ ಕೂಡ ಇರಬೇಕು. ಎಲ್ಲ ಜಾತಿ ಜನಾಂಗ ಇರಬೇಕು. ಆದರೆ ಇಲ್ಲೆನಾಗಿದೆ? ನಾಡಿನಲ್ಲಿ ನಾಲಿಗೆ ತಪ್ಪದ ನಾಯಕ ಅಂತ ಬಿರುದು ಕೊಟ್ಟಿದ್ದು ನಾನೇ. ಆದರೆ ಅದೆಲ್ಲಾ ಈಗ ಏನಾಯ್ತು ಎಂದು ಬಿಎಸ್‌ವೈ ಮೇಲೆ ಎಂ.ಎಲ್.ಸಿ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನ ಸಿದ್ಧಲಿಂಗೇಶ್ವರನು ಕ್ಷಮಿಸೋಲ್ಲ.. ಜೊತೆಗೆ ಮುನಿರತ್ನ ಬದಲು ಯೋಗೇಶ್ವರ್ಗೆ ಮಂತ್ರಿಗಿರಿ ಕೊಟ್ಟಿದ್ದಕ್ಕೆ ಕೋಪಗೊಂಡಿರುವ ಹೆಚ್.ವಿಶ್ವನಾಥ್, ಯಡಿಯೂರಪ್ಪನವರೇ ಸಿದ್ದಲಿಂಗೇಶ್ವರನು ನಿಮಗೆ ಒಳ್ಳೆದು ಮಾಡೋಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನ ಸಿದ್ಧಲಿಂಗೇಶ್ವರನು ಕ್ಷಮಿಸೋಲ್ಲ. ನೀವು ಎಂತ ಸರ್ಕಾರ ಮಾಡಿದ್ದೀರಿ ಯಡಿಯೂರಪ್ಪನವರೇ? ಮುನಿರತ್ನ ಬದಲು ಯೋಗೇಶ್ವರ್ ಯಾಕೇ ಸಚಿವ ಸ್ಥಾನ ಕೊಡ್ತೀರಾ ಹೇಳಿ? ಕೋರ್ಟ್‌ಗೂ, ನನಗೆ ಮಂತ್ರಿ ಸ್ಥಾನ ಕೊಡೋದಕ್ಕು ಸಂಬಂಧ ಇಲ್ಲ. ಅವನೇನು (ಸಿ ಪಿ ಯೋಗೇಶ್ವರ್) ರಾಜೀನಾಮೆ ಕೊಟ್ನಿದ್ನಾ? ಅಥವಾ ನೀವೇ ಸೈನಿಕನ ಕೈಗೊಂಬೆ ಆಗಿದ್ದೀರಾ? ನಿಮ್ಮ ಮಾಜಿ ಪಿಎ ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದುಕೊಂಡ್ರಾ ಹೇಳಿ ಎಂದು ಸಿಎಂ ಬಿಎಸ್ವೈಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಯೋಗೇಶ್ವರ್‌ದು ಟೋಟಲಿ ಬ್ಲಾಕ್ ಮೇಲ್ ತಂತ್ರ.. ಬಿಎಸ್‌ವೈ ಕುಟುಂಬ ರಾಜಕಾರಣದ ಬಗ್ಗೆ ಮಾತಾನಾಡಿದ ಹಳ್ಳಿಹಕ್ಕಿ, ಬಿಎಸ್‌ವೈ ಕುಟುಂಬದವರ ಹಸ್ತಕ್ಷೇಪ ಹೆಚ್ಚಾಗಿ ನಡೀತಿದೆ. ಯೋಗೇಶ್ವರ್ ಮಂತ್ರಿ ಆಗುವುದಕ್ಕೆ ವಿಜಯೇಂದ್ರ ಕಾರಣ. ಅದೆ ರೀತಿ ಯಡಿಯೂರಪ್ಪ ಪ್ರತಿಷ್ಠೆ ಡೆಮಾಲಿಷ್ ಆಗಲು ವಿಜಯೇಂದ್ರ ಕಾರಣ. ಇಡೀ ವಿಧಾನಸೌಧದಲ್ಲಿ ಅವರ ಅಣ್ಣ ತಮ್ಮಂದಿರೇ ಕುಳಿತಿದ್ದಾರೆ. ಯಡಿಯೂರಪ್ಪ ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ. ಎಲ್ಲದಕ್ಕೂ ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ. ಕರ್ನಾಟಕಕ್ಕೆ ಯಡಿಯೂರಪ್ಪನವರೇ ಹೈಕಮಾಂಡ್.
ಯೋಗೇಶ್ವರ್‌ದು ಟೋಟಲಿ ಬ್ಲಾಕ್ ಮೇಲ್ ತಂತ್ರ. ಅವರ ಬ್ಲಾಕ್ ಮೇಲ್ ಏನಂತ ಯಾವತ್ತಾದರೂ ಒಂದು ದಿನ ಹೊರಗೆ ಬರುತ್ತೆ. ರಾಜ್ಯದಲ್ಲಿ ಸಚಿವರಾಗೋಕೆ ಬ್ಯಾಗ್ ಹಿಡಿದಕೊಳ್ಳೋದೆ ಮಾನದಂಡವೇ? ಯೋಗೇಶ್ವರ್ ಬಾಂಬೆಯಲ್ಲಿ ನಮ್ಮ ಬ್ಯಾಗ್ ಹಿಡಿದ್ದಿದ್ದು ಬಿಟ್ಟರೆ ಮತ್ತೇನು ಮಾಡಿಲ್ಲ. ಈ ಎಲ್ಲಾ ಬೆಳವಣಿಗೆಯಿಂದ ನೋವಾಗಿದೆ. ನಾವು ಮನುಷ್ಯರು, ನಮಗೂ ಹೃದಯ ಇದೆ ನಮಗೂ ನೋವಾಗುತ್ತೆ ಎಂದು ಹಳ್ಳಿಹಕ್ಕಿ ತಮ್ಮ ಅಳಲು ತೊಡಿಕೊಂಡಿದ್ದಾರೆ.
ಬೇಸರವಾಗಿದೆ, ಆದರೆ ಯಾರ ಹತ್ತಿರ ಹೇಳಬೇಕು? ಸಂದರ್ಭ ಬಂದಾಗ ಸೂಕ್ತ ತೀರ್ಮಾನ ತೆಗೆದುಕೊಳ್ಳುವೆ: ರೇಣುಕಾಚಾರ್ಯ
Published On - 12:29 pm, Wed, 13 January 21