Flood relief fund: ಅತಿವೃಷ್ಟಿ; ಕರ್ನಾಟಕಕ್ಕೆ 629 ಕೋಟಿ, ಮಹಾರಾಷ್ಟ್ರಕ್ಕೆ 701 ಕೋಟಿ ಕೇಂದ್ರದಿಂದ ನೆರವು

| Updated By: guruganesh bhat

Updated on: Jul 27, 2021 | 5:47 PM

Flood relief fund: ಎಸ್​ಡಿಆರ್​ಎಫ್ ಮಾನದಂಡಗಳ ಅಡಿಯಲ್ಲಿ ಅತಿವೃಷ್ಟಿ ಪರಿಹಾರ ನೀಡಲಾಗಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ.

Flood relief fund: ಅತಿವೃಷ್ಟಿ; ಕರ್ನಾಟಕಕ್ಕೆ 629 ಕೋಟಿ, ಮಹಾರಾಷ್ಟ್ರಕ್ಕೆ 701 ಕೋಟಿ ಕೇಂದ್ರದಿಂದ ನೆರವು
ಶೋಭಾ ಕರಂದ್ಲಾಜೆ
Follow us on

ದೆಹಲಿ: ಕಳೆದ ಬಾರಿಯ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 629.03 ಕೋಟಿ ಪರಿಹಾರ ಘೋಷಿಸಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje)  ತಿಳಿಸಿದ್ದಾರೆ. ಜತೆಗೆ ಮಹಾರಾಷ್ಟ್ರಕ್ಕೆ 701 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಎಸ್​ಡಿಆರ್​ಎಫ್ ಮಾನದಂಡಗಳ ಅಡಿಯಲ್ಲಿ ಅತಿವೃಷ್ಟಿ ಪರಿಹಾರ (Flood relief fund) ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವರ್ಷವೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿದಿದೆ. ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ಕೆಲವು ಜಿಲ್ಲೆಗಳು ಮಳೆಯ ಆರ್ಭಟಕ್ಕೆ ಸಂಪೂರ್ಣ ತತ್ತರಿಸಿವೆ. ಜತೆಗೆ ಅಲ್ಲಲ್ಲಿ ಭೂಕುಸಿತವೂ ಸಂಭವಿಸಿದೆ.

ಕರ್ನಾಟಕದಲ್ಲಿ ಸುಮಾರು ಎರಡು ವಾರಕ್ಕೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿದ ಮಳೆ (Heavy Rain) ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿ ಇದೀಗ ಕೊಂಚ ಶಾಂತವಾದಂತೆ ಕಾಣುತ್ತಿದೆ. ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದ ಜನರ ನಿದ್ದೆಗೆಡಿಸುವಂತೆ ಸುರಿದ ಮಳೆಯು ಪ್ರವಾಹ, ಭೂ ಕುಸಿತ, ಬೆಳೆ ನಾಶಕ್ಕೆ ಕಾರಣವಾಗಿ ಜನಜೀವನವನ್ನೇ ಅಸ್ತವ್ಯಸ್ತ ಮಾಡಿದೆ. ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿದ ಕಾರಣ ಹಲವೆಡೆ ವಸತಿ ಪ್ರದೇಶಕ್ಕೆ ನೀರುನುಗ್ಗಿ ಮನೆಗಳು ಜಲಾವೃತಗೊಂಡು (Flood) ಜನರು ಸಾಕಷ್ಟು ಸಮಸ್ಯೆ ಅನುಭವಿಸಿದ್ದಾರೆ. ಆದರೆ, ಇದೀಗ ಮಳೆಯ ಆರ್ಭಟ ತಗ್ಗಿದಂತೆ ಕಂಡುಬಂದರೂ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಹವಾಮಾನ ವರದಿಗಳು (Weather Report) ಎಚ್ಚರಿಸಿವೆ.

ಇದನ್ನೂ ಓದಿ: 

ಕರ್ನಾಟಕದಲ್ಲಿ ಅತಿವೃಷ್ಟಿ ಹಿನ್ನೆಲೆ; ತಕ್ಷಣಕ್ಕೆ ಬೇಕಾದ ಪರಿಹಾರವನ್ನು ಕೇಂದ್ರ ಸರ್ಕಾರ ಕೊಡಲಿದೆ: ಪ್ರಲ್ಹಾದ್ ಜೋಶಿ 

ಉತ್ತರ ಕರ್ನಾಟಕ ಸೇರಿದಂತೆ ಅತಿವೃಷ್ಟಿಯಿಂದ ಹಾನಿಗೀಡಾದ ಅಷ್ಟೂ ರಸ್ತೆಗಳ ನಿರ್ಮಾಣ ಪೂರ್ಣ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ
(Monsoon 2021 flood relief fund 629 crore for Karnataka and Rs 701 crore for Maharashtra from Central Government)

Published On - 4:18 pm, Tue, 27 July 21