ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ, ₹100 ಕೋಟಿ ಖರ್ಚು ಮಾಡಿದ್ರೂ ಇಲ್ಲ ಉಪಯೋಗ

ಕರ್ನಾಟಕದ ಕಾಶ್ಮೀರ ಅಂತಲೇ ಕರೆಯಬಹುದಾದ ಕೊಡಗಿನಲ್ಲಿ ಹಾದು ಹೋಗಿರೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಭೂಕುಸಿತಗಳು ಉಂಟಾಗಿವೆ. ಇದರ ಪರಿಣಾಮ ತಡೆಗೋಡೆ ನಿರ್ಮಿಸಲಾಗ್ತಿದೆ. ಆದ್ರೆ, ಇಷ್ಟೆಲ್ಲಾ ಆದ್ರೂ.. ಹೆದ್ದಾರಿಗೆ ಆಗ್ತಿರೋ ಹಾನಿ ತಡೆಯಲಾಗ್ತಿಲ್ಲ.

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ, ₹100 ಕೋಟಿ ಖರ್ಚು ಮಾಡಿದ್ರೂ ಇಲ್ಲ ಉಪಯೋಗ
ಮಡಿಕೇರಿ-ಮಂಗಳೂರು ಹೆದ್ದಾರಿ
TV9kannada Web Team

| Edited By: Ayesha Banu

Jul 20, 2021 | 8:00 AM

ಮಡಿಕೇರಿ: ಇದು ರಾಷ್ಟ್ರೀಯ ಹೆದ್ದಾರಿ 275. ಮೈಸೂರಿನಿಂದ ಮಡಿಕೇರಿ ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸೋ ರಸ್ತೆ ಸುಮಾರು 8 ವರ್ಷದ ಹಿಂದೆ ನಿರ್ಮಾಣವಾಗಿರೋ ರಸ್ತೆಯಲ್ಲಿ ದಟ್ಟ ಮಂಜು.. ಮಳೆ.. ಹಚ್ಚ ಹಸಿರಿನ ರಾಶಿ.. ಅಂಕು ಡೊಂಕಿನ ದಾರಿಯಲ್ಲಿ ಪ್ರಯಾಣ ಮಾಡೋದು ಅಂದ್ರೆ ಯಾರಿಗೆ ತಾನೆ ಖುಷಿ ಇಲ್ಲ ಹೇಳಿ. ಆದ್ರೆ ಈ ರಸ್ತೆಯ ಗೋಳಿನ ಕಥೆ ಯಾರಿಗೂ ಬೇಡ. ಕಳೆದ ಮೂರು ವರ್ಷಗಳಿಂದ ಮಳೆಯಿಂದಾಗಿ ಭೂ ಕುಸಿತಗಳಿಂದಾಗಿ ರಸ್ತೆ ಹಾಳಾಗಿದೆ.

ಜೆಸಿಬಿಗಳು, ಹಿಟಾಚಿಗಳು ರಸ್ತೆ ಕುಸಿಯದಂತೆ ತಡೆಗೋಡೆ ನಿರ್ಮಿಸ್ತಿವೆ. ಮೂರು ವರ್ಷಗಳಿಂದ ನೂರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಆದ್ರೂ ಹಾನಿ ಮಾತ್ರ ತಡೆಯಲಾಗ್ತಾ ಇಲ್ಲ. ಮಡಿಕೇರಿಯಿಂದ ಕೊಯನಾಡಿನವರೆಗೆ 20 ಕಿಲೋ ಮೀಟರ್ ರಸ್ತೆಯಲ್ಲಿ ಏನಿಲ್ಲಾ ಅಂದ್ರೂ 15ಕ್ಕೂ ಹೆಚ್ಚು ಕಡೆ ರಸ್ತೆ ಡ್ಯಾಮೇಜ್ ಆಗಿದೆ. ಹೀಗಾಗಿ ವಾಹನ ಸವಾರರು ಆತಂಕದಲ್ಲಿ ಪ್ರಯಾಣಿಸುವಂತಾಗಿದೆ.

ಕಳೆದ ಮೂರು ವರ್ಷದಲ್ಲಿ ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಹಣ ವೆಚ್ಚವಾಗಿದೆ. ರಸ್ತೆ ದುರಸ್ತಿಗೆ ನೂರಾರು ಕೋಟಿ ರೂಪಾಯಿ ಅಗತ್ಯವಿದೆ. ಇದೇ ಕಾರಣಕ್ಕೆ ಸಂಸದ ಪ್ರತಾಪ್ ಸಿಂಹ ಎಷ್ಟೇ ಹಣ ಖರ್ಚಾದ್ರೂ ತಡೆಗೋಡೆ ನಿರ್ಮಾಣ ಮಾಡ್ತೀವಿ ಅಂತಾರೆ.

ಜನಪ್ರತಿನಿಧಿಗಳು ಹೇಳಿದಷ್ಟೇ ವೇಗವಾಗಿ ದುರಸ್ತಿಯಾಗ್ತಿಲ್ಲ. ಮಳೆಗಾಲದಲ್ಲಿ ಪದೇಪದೆ ಮಣ್ಣು ಕುಸಿದು ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾಗ್ತಿದೆ. ಈ ಬಾರಿ ಮತ್ತೆ ಜೋರು ಮಳೆಯಾದ್ರೆ, ಕಳೆದ ವರ್ಷದಂತೆ ಈ ಬಾರಿಯೂ ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾಗೋ ಸಾಧ್ಯತೆ ಎದುರಾಗಿದೆ.

madikeri and mangalore national highway

ಮಡಿಕೇರಿ-ಮಂಗಳೂರು ಹೆದ್ದಾರಿ

ಇದನ್ನೂ ಓದಿ: ಲಾಕ್​ಡೌನ್ ಉಲ್ಲಂಘಿಸಿದ ಪ್ರವಾಸಿಗರ ಮೇಲೆ ಮಡಿಕೇರಿ‌ಯಲ್ಲಿ ಎಫ್ಐಆರ್ ದಾಖಲು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada