ಶಾಲೆಯ ಬಿಸಿಯೂಟ ಸೇವಿಸಿ 35ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಜಿಲ್ಲೆಯ ಮುಂಡರಗಿ ತಾಲೂಕಿನ ಮುಡವಾಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 35ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
ಗದಗ: ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಜಿಲ್ಲೆಯ ಮುಂಡರಗಿ (Mundargi) ತಾಲೂಕಿನ ಮುಡವಾಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ (Government Primary School) 35ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಮಕ್ಕಳಿಗೆ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಇಬ್ಬರು ಮಕ್ಕಳು ತೀವ್ರ ಅಸ್ವಸ್ಥ ಇದ್ದಾರೆ. ತೀವ್ರ ನಿಗಾ ವಹಿಸಲಾಗಿದೆ. ಇನ್ನೂ ಸ್ವಲ್ಪ ಸಮಯ ನೋಡಿ ಗದಗ ಜಿಮ್ಸ್ ಗೆ ರೆಫರ್ ಮಾಡಲಾಗುತ್ತೆ. 35 ಕ್ಕೂ ಹೆಚ್ಚು ಮಕ್ಕಳಿಗೆ ವಾಂತಿ ಭೇದಿ ಕೆಲ ಮಕ್ಕಳಿಗೆ ಜ್ವರ ಇದೆ.ಈಗಾಗಲೇ ಆಸ್ಪತ್ರೆಯಲ್ಲಿ 36 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂದು TV9 ಗೆ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ ಕೀರ್ತಿಹಾಸ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ರಾಯಚೂರು: ಕಲುಷಿತ ನೀರು ಕುಡಿದು ಐದು ಜನರ ಸಾವು; ನಗರಸಭೆ ವಿರುದ್ಧ ಹಿಡಿ ಶಾಪ ಹಾಕುತ್ತಿರುವ ಜನರು
ಇಂದು 180 ಮಕ್ಕಳು ಶಾಲೆ ಆಗಮಿಸಿದ್ದರು. ಮುಂಡವಾಡ ಗ್ರಾಮಕ್ಕೂ ವೈದ್ಯರ ತಂಡ ಕಳುಹಿಸಲಾಗಿದೆ. ಗ್ರಾಮದಲ್ಲಿ ಇನ್ನೂ ಕೆಲ ಮಕ್ಕಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಹಕರ ಸೋಗಿನಲ್ಲಿ ಬಂದು ಬಟ್ಟೆ ಅಂಗಡಿಯಲ್ಲಿ ಕಳ್ಳತನ
ನೆಲಮಂಗಲ: ಹೆಸರಘಟ್ಟ ರಸ್ತೆಯ ಹಾವನೂರು ಬಡಾವಣೆಯಲ್ಲಿರುವ ಕ್ರಿಯೇಟಿವ್ ಕಲೆಕ್ಷನ್ ಬಟ್ಟೆ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಖದೀಮರು ದುಬಾರಿ ಸೀರೆಗಳನ್ನ ಕದ್ದಿದ್ದಾರೆ. ಐವರು ಖದೀಮರು ಮನೆಯಲ್ಲಿ ಮದುವೆ ಇದೆ ಸೀರೆಗಳನ್ನ ತೋರಿಸಿ ಎಂದು ಬಟ್ಟೆ ಅಂಗಡಿಗೆ ಬಂದಿದ್ದರು. ಆಗ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 80 ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಸೀರೆ ಕದ್ದು ಪರಾರಿಯಾಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡ್ಡಿ ಹಣ ನೀಡದ ಹಿನ್ನೆಲೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
ಬೆಳಗಾವಿ: ಬಡ್ಡಿ ಹಣ ನೀಡದ ಹಿನ್ನೆಲೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ನಡೆದಿದೆ. ವಿಠ್ಠಲ ಜಾಧವ್ ಹಲ್ಲೆಗೆ ಒಳಗಾದ ವ್ಯಕ್ತಿ. ಧರ್ಮಣ್ಣ ಪಾರಶೆಟ್ಟಿ ಮತ್ತು ಮಾದು ಪಾರಶೆಟ್ಟಿ ಹಲ್ಲೆ ಮಾಡಿದ ಆರೋಪಿಗಳು. ವಿಠ್ಠಲ ಜಾಧವ್, ಅವರಿಂದ ಧರ್ಮಣ್ಣ ಪಾರಶೆಟ್ಟಿ ಮತ್ತು ಮಾದು ಪಾರಶೆಟ್ಟಿಯಿಂದ 6 ತಿಂಗಳ ಹಿಂದೆ ಒಂದೂವರೆ ಲಕ್ಷ ರೂಪಾಯಿ ವಾರದ ಬಡ್ಡಿಯಂತೆ ಪಡೆದಿದ್ದನು. ಕಾಗವಾಡ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:32 pm, Fri, 10 June 22