AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSIL: ಅನಧಿಕೃತ ಚಿಟ್ ಕಂಪನಿಗಳಿಂದ ವಂಚನೆ ತಪ್ಪಿಸಲು ಎಂಎಸ್‌ಐಎಲ್‌ ಹೊಸ ಯೋಜನೆ -ಹರತಾಳು ಹಾಲಪ್ಪ ಘೋಷಣೆ

Harathalu Halappa: ಅನಧಿಕೃತ ಚಿಟ್ ಕಂಪನಿಗಳಿಂದ ಸಾರ್ವಜನಿಕರು ಮೋಸ ಹೋಗುವುದನ್ನು ತಪ್ಪಿಸಲು ಎಂಎಸ್‌ಐಎಲ್‌ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದೆ. 26 ಶಾಖೆಗಳನ್ನು ಹೊಂದಿದ್ದು 2 ಲಕ್ಷಕ್ಕೂ ಅಧಿಕ ಚಂದಾದಾರರು ಚಿಟ್ ಫಂಡ್ ಅನುಕೂಲ ಪಡೆದಿದ್ದಾರೆ. ಅನಧಿಕೃತ ಚಿಟ್ ಕಂಪನಿಗಳಿಂದ ವಂಚನೆ ತಪ್ಪಿಸಲು ಹೊಸ ಯೋಜನೆ ತರಲಾಗುವುದು- ಸಂಸ್ಥೆಯ ಅಧ್ಯಕ್ಷ ಹರತಾಳು ಹಾಲಪ್ಪ

MSIL: ಅನಧಿಕೃತ ಚಿಟ್ ಕಂಪನಿಗಳಿಂದ ವಂಚನೆ ತಪ್ಪಿಸಲು ಎಂಎಸ್‌ಐಎಲ್‌ ಹೊಸ ಯೋಜನೆ -ಹರತಾಳು ಹಾಲಪ್ಪ ಘೋಷಣೆ
MSIL: ಅನಧಿಕೃತ ಚಿಟ್ ಕಂಪನಿಗಳಿಂದ ವಂಚನೆ ತಪ್ಪಿಸಲು ಎಂಎಸ್‌ಐಎಲ್‌ ಹೊಸ ಯೋಜನೆ: ಹರತಾಳು ಹಾಲಪ್ಪ
TV9 Web
| Updated By: ಸಾಧು ಶ್ರೀನಾಥ್​|

Updated on:Jul 02, 2022 | 3:29 PM

Share

ಬೆಂಗಳೂರು: ಎಂಎಸ್ ಐಎಲ್ ಯಶಸ್ವಿಯಾಗಿ 56 ವರ್ಷಗಳನ್ನು ಪೂರೈಸಿದೆ. ರಾಜ್ಯ ಸರ್ಕಾರ ಸಾರಾಯಿ ನಿಷೇಧಿಸಿದ ನಂತರ ಅಕ್ರಮ ಮಧ್ಯ ಮಾರಾಟ ಹೆಚ್ಚಾದ ಸಂದರ್ಭದಲ್ಲಿ ಎಂಎಸ್‌ಐಎಲ್ ಸಂಸ್ಥೆಗೆ (MSIL) ಚಿಲ್ಲರೆ ಮದ್ಯ ಮಳಿಗೆಗಳನ್ನು ತೆರಯಲು ಅನುಮತಿ ನೀಡಲಾಗಿದೆ. ಪ್ರಸ್ತುತ 979 ಎಂಎಸ್‌ಐಎಲ್‌ ಸಿಎಲ್ (11ಸಿ) ಮದ್ಯ ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಪಾನೀಯ ವಿಭಾಗದಿಂದ 2021-22 ನೇ ಸಾಲಿಗೆ 2399 ಕೋಟಿ ರೂ. ವಹಿವಾಟು ನಡೆಸಲಾಗಿದೆ ಎಂದು ಸಾಗರ ಕ್ಷೇತ್ರದ ಬಿಜೆಪಿ ಶಾಸಕರೂ ಆದ MSIL (Mysore Sales International Ltd) ಅಧ್ಯಕ್ಷ ಹರತಾಳು ಹಾಲಪ್ಪ (Harathalu Halappa) ಸಂತಸ ವ್ಯಕ್ತಪಡಿಸಿದ್ದಾರೆ.

ಅನಧಿಕೃತ ಚಿಟ್ ಕಂಪನಿಗಳಿಂದ (Chit Fund) ಸಾರ್ವಜನಿಕರು ಮೋಸ ಹೋಗುವುದನ್ನು ತಪ್ಪಿಸಲು ಎಂಎಸ್‌ಐಎಲ್‌ ಸಂಸ್ಥೆಯು ಚಿಟ್ ಫಂಡ್ ವ್ಯವಹಾರವನ್ನು ನಡೆಸುತ್ತಿದೆ. ಪ್ರಸ್ತುತ 26 ಶಾಖೆಗಳನ್ನು ಹೊಂದಿದ್ದು 2 ಲಕ್ಷಕ್ಕೂ ಅಧಿಕ ಚಂದಾದಾರರು ಈವರೆಗೂ ಚಿಟ್ ಫಂಡ್ ಅನುಕೂಲ ಪಡೆದಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿಯೂ ಕೂಡ ಚಿಟ್ ಫಂಡ್ ಶಾಖೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಅನಧಿಕೃತ ಚಿಟ್ ಕಂಪನಿಗಳಿಂದ ವಂಚನೆ ತಪ್ಪಿಸಲು ಹೊಸ ಯೋಜನೆ ತರಲಾಗುವುದು ಎಂದು ಹರತಾಳು ಹಾಲಪ್ಪ ತಿಳಿಸಿದ್ದಾರೆ.

ಎಂಎಸ್ ಐಎಲ್ ಕಾಗದ ವಿಭಾಗದಿಂದ 2021-22 ನೇ ಸಾಲಿನಲ್ಲಿ 80 ಕೋಟಿ ರೂ. ವಹಿವಾಟು ನಡೆಸಲಾಗಿದೆ. ಎಂಎಸ್‌ಐಎಲ್‌ ಸಂಸ್ಥೆಯು ಸೋಲಾ‌ರ್ ಉತ್ಪನ್ನಗಳನ್ನು ಕೂಡಾ ಮಾರಾಟ ಮಾಡುತ್ತಿದ್ದು, 2021-22ನೇ ಸಾಲಿನಲ್ಲಿ 92 ಕೋಟಿ ರೂ. ವಹಿವಾಟು ನಡೆಸಲಾಗಿದೆ. 87 ಜನೌಷಧಿ ಮಳಿಗೆಗಳನ್ನು ವಿವಿಧ ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿ ಪ್ರಾರಂಭಿಸಿ ಕಾರ್ಯನಿರ್ವಹಿಸುತ್ತಿದೆ, ಫಾರ್ಮಾ ವಿಭಾಗದಲ್ಲಿ 2021-22 ನೇ ಸಾಲಿಗೆ 10.81 ಕೋಟಿ ರೂ. ವಹಿವಾಟು ನಡೆಸಲಾಗಿದೆ. ಫಾರ್ಮಾ ವಿಭಾಗ ಪ್ರಾರಂಭವಾದಾಗಿನಿಂದ ಪ್ರಥಮ ಬಾರಿಗೆ 1.47 ಕೋಟಿ ರೂ. ಲಾಭ ಗಳಿಸಲಾಗಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸ ಪ್ಯಾಕೇಜ್‌ಗಳನ್ನು ಎಲ್ಲಾ ವರ್ಗದ ಜನರಿಗೆ ಕೈಗೆಟುಕುವ ದರಗಳಲ್ಲಿ ನಡೆಸುತ್ತಿದೆ ಎಂದು ಹರತಾಳು ಹಾಲಪ್ಪ ಮಾಹಿತಿ ನೀಡಿದರು.

ಇದನ್ನೂ ಓದಿ:

ದೇವೇಗೌಡ ಫ್ಯಾಮಿಲಿ ಟಾರ್ಗೆಟ್ ಮಾಡಬೇಡಿ, ಅದರಿಂದ ಕಾಂಗ್ರೆಸ್ಸಿಗೆ ಆಗುವ ಲಾಭ ಏನೂ ಇಲ್ಲ: ರಾಹುಲ್ ಗಾಂಧಿ ಕಿವಿಮಾತು

ಇದನ್ನೂ ಓದಿ: ಪಾದ ಸಾಮುದ್ರಿಕ ಶಾಸ್ತ್ರ: ಪಾದದಲ್ಲಿ ಯಾವ ಸ್ವರೂಪದ ರೇಖೆಗಳಿದ್ದರೆ ನಿಮಗೆ ಎಂತಹ ಅದೃಷ್ಟ ಲಭಿಸುತ್ತದೆ ಎಂಬುದನ್ನು ತಿಳಿಯಿರಿ

Published On - 3:28 pm, Sat, 2 July 22

ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಬೊಮ್ಮಾಯಿ ಹೇಳಿದ್ದಿಷ್ಟು
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಬೊಮ್ಮಾಯಿ ಹೇಳಿದ್ದಿಷ್ಟು