ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆ ಕಸರತ್ತು ಪೂರ್ಣಗೊಳಿಸಿದ್ದಾರೆ. ಈ ವೇಳೆ ಸಹಿಜವಾಗಿಯೇ ಸಚಿವ ಸ್ಥಾನ ಸಿಗದ ಕೆಲವರು ಯಡಿಯೂರಪ್ಪ ವಿರುದ್ಧ ರೆಬೆಲ್ ಆಗಿದ್ದಾರೆ. ಆದರೆ, ಸಚಿವ ಸ್ಥಾನ ಪಡೆದವರು ಕೂಡ ಈಗ ತಮಗೆ ಬೇಕಾದ ಖಾತೆ ಸಿಕ್ಕಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಈ ಮೊದಲು ಕಾಂಗ್ರೆಸ್ನಲ್ಲಿದ್ದು ನಂತರ ಬಿಜೆಪಿ ಸೇರಿದ್ದ ಎಂಟಿಬಿ ನಾಗರಾಜ್ ಈಗ ವಸತಿ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವೇಳೆ ಎಂಟಿಬಿಯನ್ನು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇಂದು ಮುಂಜಾನೆ ಎಂಟಿಬಿಗೆ ಅಬಕಾರಿ ಸಚಿವ ಸ್ಥಾನ ನೀಡಿದ್ದರು ಬಿಎಸ್ವೈ. ವಸತಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಎಂಟಿಬಿಗೆ ಇದು ತೀವ್ರ ಹಿನ್ನಡೆ ಉಂಟು ಮಾಡಿದೆ.
ಈ ಬಗ್ಗೆ ಮಾತನಾಡಿರುವ ಎಂಟಿಬಿ, ಅಬಕಾರಿ ಇಲಾಖೆಯಲ್ಲಿ ಮಾಡೋಕೆ ಏನಿದೆ? ಕಂಪನಿಗಳಿಂದ ಮದ್ಯ ಖರೀದಿಸಲಾಗುತ್ತದೆ. ಹೋಲ್ಸೇಲ್ ದರದಲ್ಲಿ ಡೀಲರ್ಸ್ಗೆ ಮದ್ಯ ಕೊಡಲಾಗುತ್ತದೆ. ಡೀಲರ್ಸ್ಗಳು ಇದನ್ನು ಅಂಗಡಿಗೆ ಮಾರಾಟ ಮಾಡುತ್ತಾರೆ. ಮಾರಾಟ ಮಾಡಿ ಬಂದ ಹಣವನ್ನು ಸರ್ಕಾರಕ್ಕೆ ತಲುಪಿಸುತ್ತಾರೆ. ಇಲ್ಲಿ ನಾನು ಮಾಡುವ ಕೆಲಸ ಏನೂ ಇಲ್ಲ ಎಂದು ಅಸಮಾಧಾನದ ಬುಗ್ಗೆ ಚಿಮ್ಮಿಸಿದ್ದಾರೆ.
ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಗ್ರೀನ್ಸಿಗ್ನಲ್.. ಯಾರಿಗೆ ಯಾವ ಖಾತೆ? ವಿವರ ಇಲ್ಲಿದೆ