ಬೆಳಗಾವಿ ಕಿತ್ತೂರು ಉತ್ಸವಕ್ಕೆ ಮುಹೂರ್ತ ಫಿಕ್ಸ್: ಶಾಸಕ ಬಾಬಾಸಾಹೇಬ್ ಪಾಟೀಲ್ ಘೋಷಣೆ

ಅಕ್ಟೋಬರ್ 23, 24 ಹಾಗೂ 25ರಂದು ಬೆಳಗಾವಿಯಲ್ಲಿ ಕಿತ್ತೂರು ಉತ್ಸವ ಆಯೋಜಿಸಲಾಗಿದೆ ಎಂದು ಶಾಸಕ ಬಾಬಾಸಾಹೇಬ್ ಪಾಟೀಲ್ ಹೇಳಿದ್ದಾರೆ. ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಆಹ್ವಾನ ನೀಡಿದ್ದೇವೆ. ಅ.25ರಂದು ಸಮಾರೋಪ ಸಮಾರಂಭಕ್ಕೆ ಬರುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಕಿತ್ತೂರು ಉತ್ಸವಕ್ಕೆ ಮುಹೂರ್ತ ಫಿಕ್ಸ್: ಶಾಸಕ ಬಾಬಾಸಾಹೇಬ್ ಪಾಟೀಲ್ ಘೋಷಣೆ
ಬೆಳಗಾವಿ ಕಿತ್ತೂರು ಉತ್ಸವಕ್ಕೆ ಮುಹೂರ್ತ ಫಿಕ್ಸ್: ಶಾಸಕ ಬಾಬಾಸಾಹೇಬ್ ಪಾಟೀಲ್ ಘೋಷಣೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 19, 2024 | 3:06 PM

ಬೆಳಗಾವಿ, ಅಕ್ಟೋಬರ್​ 19: ಅಕ್ಟೋಬರ್​​ 23ರಿಂದ ಮೂರು ದಿನ ಕಿತ್ತೂರು ಉತ್ಸವ (Kittur Utsav) ನಡೆಯಲಿದ್ದು, ಕಿತ್ತೂರು ಪಟ್ಟಣದ ಕೋಟೆ ಆವರಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಶಾಸಕ ಬಾಬಾಸಾಹೇಬ್ ಪಾಟೀಲ್ ಹೇಳಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ ಅನುದಾನ ನೀಡಿದೆ. ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮರ 200ನೇ ವಿಜಯೋತ್ಸವ ಕಾರ್ಯಕ್ರಮ ಕೂಡ ಮಾಡುತ್ತೇವೆ. ಅ.25ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ, ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತು: ಸ್ಪೀಕರ್

ಉತ್ಸವದ ವೇಳೆ ಮಹಿಳೆಯರಿಗೆ ವಿಶೇಷ ಕ್ರೀಡೆಗಳನ್ನು ಆಯೋಜಿಸಿದ್ದೇವೆ. ಅ.22ರ ಸಂಜೆ ಬೆಳಗಾವಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಿತ್ಸೂರು ಉತ್ಸವ ಜ್ಯೋತಿಗೆ ಸಿಎಂ ಸಿದ್ದರಾಮಯ್ಯ ಚಾಲನೆ 

ಕಿತ್ಸೂರು ಉತ್ಸವ ವಿಜಯ ಜ್ಯೋತಿಗೆ ಇತ್ತೀಚೆಗೆ ಹೊಸಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಹೊಸಕೋಟೆ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮೂಲಕ ಇತ್ತೀಚೆಗೆ ಶಿವಮೊಗ್ಗಕ್ಕೆ ತಲುಪಿತ್ತು. ಬಳಿಕ ಶಾಸಕ ಚೆನ್ನಬಸಪ್ಪ ಜ್ಯೋತಿಗೆ ಪೂಜೆ ಸಲ್ಲಿಸಿ ಮುಂದಿನ ನಗರಕ್ಕೆ ಬೀಳ್ಕೊಟ್ಟಿದ್ದರು.

ನಂತರ ಚಿಕ್ಕಮಗಳೂರು, ತುಮಕೂರಿಗೆ ಹೋಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸಾಗಿ ಜ್ಯೋತಿಯು ಕಿತ್ತೂರು ತಲುಪಲಿದೆ. ಅ.22 ರಂದು ಕಿತ್ತೂರಿನ ಸೈನಿಕ ಶಾಲೆಗೆ ವಿಜಯ ಜ್ಯೋತಿ ತಲುಪಲಿದೆ. ಅ.23,24,25 ರಂದು ಮೂರು ದಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಿತ್ತೂರಿನಲ್ಲಿ ಕಿತ್ತೂರು ಉತ್ಸವ-2024 ನಡೆಯಲಿದೆ.

ಇದನ್ನೂ ಓದಿ: ಸವದತ್ತಿ ಕ್ಷೇತ್ರದ ಅಭಿವೃದ್ಧಿಗೆ ನಾವು ರೆಡಿ, ರೋಪ್ ವೇ ಬಗ್ಗೆ ಪರಿಶೀಲಿಸಲಾಗುವುದು: ಸಿಎಂ ಸಿದ್ದರಾಮಯ್ಯ

ಬ್ರಿಟಿಷ್​ರ ವಿರುದ್ಧ ದಂಗೆ ಎದ್ದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದ ಕಿತ್ತೂರಿನ ರಾಣಿ ಚೆನ್ನಮ್ಮ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ 1824 ನೇ ಇಸವಿಯಲ್ಲಿ ದಂಗೆ ಎದ್ದು ಮೊದಲ ಯುದ್ಧ ಗೆದ್ದಿದ್ದರು. ದಂಗೆ ಎದ್ದು ಮೊದಲ ವಿಜಯ ಸಾಧಿಸಿದಕ್ಕೆ 200 ವರ್ಷ ಕಳೆದಿದೆ. 200 ವರ್ಷ ಕಳೆದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್
ವಿರಾಟ್ ಕೊಹ್ಲಿ ಔಟಾದಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ
ವಿರಾಟ್ ಕೊಹ್ಲಿ ಔಟಾದಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ
‘ಸುದೀಪ್ ಸರಿಯಾದ ನಿರ್ಧಾರವೇ ತೆಗೆದುಕೊಂಡಿರ್ತಾರೆ’; ಮಿತ್ರ
‘ಸುದೀಪ್ ಸರಿಯಾದ ನಿರ್ಧಾರವೇ ತೆಗೆದುಕೊಂಡಿರ್ತಾರೆ’; ಮಿತ್ರ
Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?
Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?