ಭಾರತದ ಮುಸ್ಲಿಮರು ಕೂಡ ಹಿಂದೂಗಳೇ: ವಚನಾನಂದ ಶ್ರೀ

ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹರಿಹರಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಭಾರತದಲ್ಲಿ ಮುಸ್ಲಿಮರು ಕೂಡ ಹಿಂದೂಗಳೇ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಶ್ರೀಲಂಕಾ, ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವವರು ಸಹ ಹಿಂದೂಗಳೇ. ಬೇರೆ ಧರ್ಮಗಳು ಹುಟ್ಟುವ ಮೊದಲೇ ಇದ್ದಿದ್ದೇ ಹಿಂದೂ ಧರ್ಮ ಎಂದು ಹೇಳಿದ್ದಾರೆ.

ಭಾರತದ ಮುಸ್ಲಿಮರು ಕೂಡ ಹಿಂದೂಗಳೇ: ವಚನಾನಂದ ಶ್ರೀ
ಭಾರತದ ಮುಸ್ಲಿಮರು ಕೂಡ ಹಿಂದೂಗಳೇ: ವಚನಾನಂದ ಶ್ರೀ

Updated on: Aug 16, 2024 | 1:20 PM

ಹಾವೇರಿ, ಆಗಸ್ಟ್​ 16: ಭಾರತದಲ್ಲಿ ಮುಸ್ಲಿಮರು ಕೂಡ ಹಿಂದೂಗಳೇ (Hindus) ಎಂದು ಪಂಚಮಸಾಲಿ ಪೀಠಾಧಿಪತಿ ವಚನಾನಂದ ಶ್ರೀ (Vachanananda Shri) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿರುವ ಪ್ರತಿಯೊಬ್ಬರು ಕೂಡ ಹಿಂದೂಗಳೇ. ದೇಶ ಹಾಗೂ ಸಮುದಾಯ ಅಂತಾ ಬಂದಾಗ ನಾವೆಲ್ಲಾ ಹಿಂದೂಗಳು. ಬೇರೆ ಧರ್ಮಗಳು ಹುಟ್ಟುವ ಮೊದಲೇ ಇದ್ದಿದ್ದೇ ಹಿಂದೂ ಧರ್ಮ. ಜಗತ್ತಿನ ಸಿದ್ಧಾಂತ ತತ್ವಗಳಿಗೆ ಮೂಲವೇ ಹಿಂದೂ ಧರ್ಮವಾಗಿದೆ ಎಂದು ಹೇಳಿದ್ದಾರೆ.

ಶ್ರೀಲಂಕಾ, ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವವರು ಸಹ ಹಿಂದೂಗಳೇ. ಹಿಂದೂ ಅಂದರೆ ಶುದ್ಧವಾದ ಜೀವನ ಪದ್ಧತಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಹಿಂದೂ ಅಂದರೆ ಸತ್ಯ ಹಾಗೂ ಸನಾತನ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಳೆದ ಹತ್ತು ವರ್ಷದಲ್ಲಿ ಕನಿಷ್ಟ ಮಟ್ಟಕ್ಕಿಳಿದ‌ ತುಂಗಭದ್ರಾ ಜಲಾಶಯ ನೀರಿನ ಪ್ರಮಾಣ

ಲಿಂಗಾಯತ ಇರಲಿ ವೀರಶೈವ ಇರಲಿ ಎಲ್ಲರೂ ಒಂದಾಗಿ ಹೋಗಬೇಕು. ಕೆಲವರ ಜಾತಿ ಪ್ರಮಾಣಪತ್ರದಲ್ಲಿ ಹಿಂದೂ ಬೌದ್ಧ ಅಂತಾ ಇದೆ. ಹಿಂದೂ ಜೈನ ಅಂತ ಇದೆ, ಅದೇ ರೀತಿ ಹಿಂದೂ ಲಿಂಗಾಯತವೂ ಇದೆ. ವೀರಶೈವ ಹಾಗೂ ಲಿಂಗಾಯತರು ಎಲ್ಲರೂ ಮೊದಲು ಒಗ್ಗಟ್ಟಾಗಬೇಕು ಎಂದಿದ್ದಾರೆ.

ಇದನ್ನೂ ಓದಿ: ಎಲ್ಲಾ ವೀರಶೈವ ಲಿಂಗಾಯತರು ಹಿಂದೂಗಳು, ಒಂದೇ ಮೀಸಲಾತಿ‌ ಇರಬೇಕು: ವಚನಾನಂದಶ್ರೀ

ನಾವು ಒಂದಾಗದೇ ಪ್ರತ್ಯೇಕ ಧರ್ಮ ಮಾಡಲು ಹೇಗೆ ಸಾಧ್ಯವಿದೆ? ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಯಾಕೆ ಸಿಕ್ಕಿಲ್ಲ? ಕೆಲವು ಸ್ವಾಮೀಜಿಗಳು ನಾವು ಹಿಂದೂಗಳಲ್ಲ ಅಂತ ಹೇಳ್ತಾರಲ್ವಾ? ಹಾಗೇ ಹೇಳುವ ಸ್ವಾಮೀಜಿಗಳಿಗೆ ಸರ್ಟಿಫಿಕೇಟ್ ತೋರಿಸಲು ಹೇಳಿ. ಬಸವಣ್ಣ ಬ್ರಾಹ್ಮಣ, ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿ ಇರಬೇಕು. ನಮ್ಮನ್ನು ಉದ್ಧಾರ ಮಾಡೋಕೂ ಬ್ರಾಹ್ಮಣರು ಬರಬೇಕಾಯಿತು. ಇಲ್ಲದಿದ್ದರೆ ಶೂದ್ರರಾಗಿ ಇರಬೇಕಾಗುತಿತ್ತು ಎಂದಿದ್ದಾರೆ.

ಪರೋಕ್ಷವಾಗಿ ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಟಾಂಗ್

ಕಲ್ಲು ನಾಗರಕ್ಕೆ ಹಾಲೆರೆಯಬೇಡಿ, ಅನಾಥ ಮಕ್ಕಳಿಗೆ ಕೊಡಿ ಅಂತಾರೆ. ಬೇಕಾದರೆ ಮಾಡಿಕೊಂಡು ಹೋಗಿ, ನಿಮ್ಮನ್ನು ಬೇಡ ಅಂದವರು ಯಾರು ಎಂದು ಪರೋಕ್ಷವಾಗಿ ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಟಾಂಗ್ ನೀಡಿದ್ದಾರೆ. ಹಾಲು ಕೊಡುವ ಗೋವುಗಳನ್ನೇ ಹತ್ಯೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟು ಜನ ಸ್ವಾಮೀಜಿಗಳು ಗೋಹತ್ಯೆ ವಿರೋಧಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us