AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋನ್ ಬಳಕೆಯಿಂದ ಮಕ್ಕಳಲ್ಲಿ ಮಯೋಪಿಯಾ ಡಿಸೀಜ್ ಪತ್ತೆ: ಮೊಬೈಲ್​ ಗೀಳು ನಿಮ್ಮ ಮಕ್ಕಳಿಗೆ ಮಾರಕವಾಗಬಹದು

ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‌ಗೆ ದಾಸರಾಗುತ್ತಿದ್ದಾರೆ. ಹಾಗಾಗಿ ನಾನಾ ಸಮಸ್ಯೆಗಳಿಂದ ಕೂಡ ಬಳಲುತ್ತಿದ್ದಾರೆ. ಸ್ಮಾರ್ಟ್ ಫೋನ್ ಜನರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಮೊಬೈಲ್ ಫೋನ್ ಇಲ್ಲದೇ ಯಾರಿಗೂ ಜೀವನವನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ಅದರಲ್ಲೂ ಮಕ್ಕಳಂತ್ತು ಮೊಬೈಲ್​ ಬಿಟ್ಟಿರುವುದಿಲ್ಲ. ಮಕ್ಕಳ ಈ ಮೊಬೈಲ್ ಸ್ಕೀನಿಂಗ್ ಬಳಕೆಯಿಂದ ಹೊಸ ಡಿಸೀಜ್ ಶುರುವಾಗಿದೆ.

ಫೋನ್ ಬಳಕೆಯಿಂದ ಮಕ್ಕಳಲ್ಲಿ ಮಯೋಪಿಯಾ ಡಿಸೀಜ್ ಪತ್ತೆ: ಮೊಬೈಲ್​ ಗೀಳು ನಿಮ್ಮ ಮಕ್ಕಳಿಗೆ ಮಾರಕವಾಗಬಹದು
ಫೋನ್ ಬಳಕೆಯಿಂದ ಮಕ್ಕಳಲ್ಲಿ ಮಯೋಪಿಯಾ ಡಿಸೀಜ್ ಪತ್ತೆ, ಮೊಬೈಲ್​ ಗೀಳು ನಿಮ್ಮ ಮಕ್ಕಳಿಗೆ ಮಾರಕವಾಗಬಹದು
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 18, 2024 | 10:35 PM

Share

ಬೆಂಗಳೂರು, ಜುಲೈ 18: ಹೊರಗಡೆ ಹೋಗಿ ಕ್ರಿಕೆಟ್, ಪುಟ್‌ಬಾಲ್ ಇನ್ನಿತರ ಆಟವಾಡಿ ದೈಹಿಕವಾಗಿ ಸದೃಢವಾಗುವ ವಯಸ್ಸು, ಅದರೆ ಇಂತಹ ದೈಹಿಕ ಶಕ್ತಿ ಹೆಚ್ಚಿಸುವ ಆಟಗಳನ್ನು ಆಡುವ ಬದಲಿಗೆ ಸ್ಮಾರ್ಟ್ ಫೋನ್ ಹಿಡಿದುಕೊಂಡು ಮಕ್ಕಳು (children) ಆಟ ಆಡುತ್ತಿದ್ದಾರೆ. ಊಟಾ ಬಿಟ್ಟರು ಮೊಬೈಲ್ ಬಿಡಲ್ಲ ಅಂತಿದ್ದಾರೆ. ಮಕ್ಕಳ ಮೊಬೈಲ ಸ್ಕೀನಿಂಗ್ ಟೈಮ್ ಏರಿಕೆಯಿಂದ ಅತಿಯಾದ ಮೊಬೈಲ್ ಗೀಳಿನಿಂದ ಮಕ್ಕಳಿಗೆ ಮಯೋಪಿಯಾ ಡಿಸೀಜ್ (Myopia disease) ಶುರುವಾಗಿದ್ದು ವೈದ್ಯರು ಅಚ್ಚರಿಯ ಅಂಶ ಹೊರ ಹಾಕಿದ್ದಾರೆ.

ಮಯೋಪಿಯಾ ಡಿಸೀಸ್​ಗೆ ವೈದ್ಯರೇ ಶಾಕ್

ಕೊವಿಡ್ ನಂತರ ಮಕ್ಕಳ ಆರೋಗ್ಯ ಬಗ್ಗೆ ನೀವೆಷ್ಟು ಕಾಳಜಿ ವಹಿಸಿದ್ದೀರಿ? ನಿಮ್ಮ ಮಕ್ಕಳ ಆರೋಗ್ಯ ಬೆಳವಣಿಗೆ ಬಗ್ಗೆ ಅದೆಷ್ಟು ಫಾಲೋ ಮಾಡ್ತಾ ಇದ್ದೀರಿ? ಹೀಗ್ಯಾಕೆ ಕೇಳ್ತಾ ಇದ್ದೀವಿ ಅಂದ್ರೆ, ಇತ್ತೀಚಿಗೆ ಮಕ್ಕಳಲ್ಲಿ ನಿರಂತರ ಮೊಬೈಲ್ ಬಳಕೆ ನಾನಾ ಅವಾಂತರಕ್ಕೆ ಕಾಣವಾಗುತ್ತಿದೆ. ಸದ್ಯ ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಮಯೋಪಿಯಾ ಡಿಸೀಸ್ ಶುರುವಾಗಿದೆ ಮಯೋಪಿಯಾ ಡಿಸೀಸ್ ಏರಿಕೆಗೆ ವೈದ್ಯರೇ ಶಾಕ್ ಆಗಿದ್ದು ಬೆಂಗಳೂರಿನ ಖ್ಯಾತ ನೇತ್ರ ತಜ್ಞರ ಸಂಶೋಧನೆಯಲ್ಲಿ ಆತಂಕಕಾರಿ ಅಂಶ ಬಯಲಾಗಿದೆ.

ಇದನ್ನೂ ಓದಿ: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಮುಂದಾದ ಸರ್ಕಾರ: ಮಾಹಿತಿ ನೀಡಲು ಜು 31 ಕೊನೆ ದಿನ

ಮಯೋಪಿಯಾ ಡಿಸೀಜ್​ನಿಂದ ಮುಂದಿನ ದಿನಗಳಲ್ಲಿ ಶೇ 50% ರಿಂದ 60 ರಷ್ಟು ಮಕ್ಕಳಿಗೆ ದೃಷ್ಟಿ ದೋಷ ಸಮಸ್ಯೆ ಕಾಡಲಿದೆಯಂತೆ. ಈ ಅಚ್ಚರಿಯ ಅಂಶ ಹೊರ ಹಾಕಿರುವ ಖ್ಯಾತ ನೇತ್ರ ತಜ್ಞರು ನಿಮ್ಮ ಮಕ್ಕಳ ಕಣ್ಣಿನ ರಕ್ಷಣೆ ನಿಮ್ಮ ಕೈಯಲ್ಲಿದೆ ಅಂತಾ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.

ಕಣ್ಣಿನ ಸಮಸ್ಯೆ

ಕೊವಿಡ್ ಬಳಿಕ ಮಕ್ಕಳ ಮೊಬೈಲ್ ಸ್ಕ್ರೀನಿಂಗ್ ಟೈಮ್ ಹೆಚ್ಚಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಮಯೋಪಿಯಾ ಡಿಸೀಸ್ ಕಂಡು ಬರ್ತಿದೆ. ಈ ಡಿಸೀಸ್​ನಿಂದ ಕಣ್ಣಿನ ಸಮಸ್ಯೆ ಕಂಡು ಬರ್ತಿದೆ. ಶಾಶ್ವಾತ ದೃಷ್ಠಿದೋಷದಂತ ಸಮಸ್ಯೆ ಮಕ್ಕಳಿಗೆ ಬರ್ತಿವೆ. ಹೀಗಾಗಿ ಮೊಬೈಲ್ ಸ್ಕ್ರೀನಿಂಗ್ ಕಡಿಮೆ ಮಾಡುವಂತೆ ವೈದ್ಯರಿಂದ ಟೈಂ ಟೇಬಲ್ ನೀಡುವಂತೆ ಯಾವ ಯಾವ ಟೈಂನಲ್ಲಿ ಮಕ್ಕಳಿಗೆ ಮೊಬೈಲ್ ಕೊಡಬೇಕು ಎಂದು ರಿಸರ್ಚ್ ಮಾಡಿದ್ದು, ದಿನೇ ದಿನೇ ಹೆಚ್ಚುತ್ತಿರು ಮೊಬೈಲ್ ಸ್ಕ್ರೀನಿಂಗ್ ಸಮಸ್ಯೆಗೆ ಸೂಕ್ತ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.

ಚಿಕ್ಕ ಮಕ್ಕಳಲ್ಲೇ ಈ ಡಿಸೀಸ್ ಹೆಚ್ಚಳವಾಗಿರುವುದರಿಂದ ದೃಷ್ಟಿ ದೋಷದಿಂದ ಬಳಲುತ್ತಿರುವ ಮಕ್ಕಳು – ಮೊಬೈಲ್​ನಿಂದ ದೂರ ಇಡಲು ಶಾಶ್ವತ ದೃಷ್ಟಿದೋಷದಿಂದ ದೂರ ಇಡುವಂತೆ. ಬೆಂಗಳೂರಿನ ಖ್ಯಾತ ಕಣ್ಣಿನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮಳೆ ಅಬ್ಬರ: ಈ ಜಿಲ್ಲೆಗಳಲ್ಲಿ ನಾಳೆ ಶಾಲೆ ಕಾಲೇಜಿಗಳಿಗೆ ರಜೆ ಮುಂದುವರಿಕೆ

ಇನ್ನು ಬೆಂಗಳೂರಿನ ನಾರಾಯಣ ನೇತ್ರಾಲಯ ವೈದ್ಯರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಜುಲೈ 28 ರಂದು ಮಯೋಪಿಯ ಜಾಗೃತಿ ಓಟ ಹಮ್ಮಿಕೊಂಡಿದ್ದು ಈ ಖಾಯಿಲೆ ಹೇಗೆ ತಡೆಗಟ್ಟ ಬೇಕು? ಏನೆಲ್ಲ ಮುನ್ನೆಚ್ಚರಿಕೆ ಅವಶ್ಯಕತೆ ಇದೆ ಎಂಬ ಅರಿವು ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ.

ಮಕ್ಕಳು ಮೊಬೈಲ್​ಗೆ ದಾಸರಾಗಿರುವುದು ಸುಳ್ಳಲ್ಲ. ಮೀತಿ ಮಿರಿದ ಮೊಬೈಲ್ ಬಳಕೆ ಮಕ್ಕಳ ಕಣ್ಣಿನ ಸಮಸ್ಯೆ ದೃಷ್ಠಿ ದೋಷಕ್ಕೆ ಕಾಣವಾಗುತ್ತಿದೆ. ಹೀಗಾಗಿ ಮಕ್ಕಳಲ್ಲಿ ಮೈಯೋಪಿಯ ಎಂಬ ಮಾರಕ ಕಾಯಿಲೆಗೆ ವಿದ್ಯಾರ್ಥಿಗಳನ್ನ ಕಾಡುತ್ತಿದೆ. ಇನ್ನಾದ್ರೂ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಕೊಂಚ ಗಮನಹರಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ