ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ: ಡಿಸಿ ನಿವಾಸ ನವೀಕರಣ, ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಹೊಸ ತಿರುವು

ರೋಹಿಣಿ ಸಿಂಧೂರಿ ಸ್ವಂತ ಆಸ್ತಿ ಮುಟ್ಟುಗೋಲು ಹಾಕಬೇಕು. ಆಸ್ತಿ ಮಾರಿ ಮೃತರ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂದು ಮೈಸೂರಿನಲ್ಲಿ ದೂರು ನೀಡಿದ ನಂತರ ಮಲ್ಲೇಶ್​ ವಾಗ್ದಾಳಿ ನಡೆಸಿದ್ದಾರೆ.

ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ: ಡಿಸಿ ನಿವಾಸ ನವೀಕರಣ, ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಹೊಸ ತಿರುವು
ರೋಹಿಣಿ ಸಿಂಧೂರಿ
Follow us
TV9 Web
| Updated By: ganapathi bhat

Updated on: Jun 21, 2021 | 5:32 PM

ಮೈಸೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚಾಮರಾಜನಗರ ಜಿಲ್ಲಾ ರೈತ ಮುಖಂಡ ಮಲ್ಲೇಶ್ ಎಂಬವರು ನ್ಯಾ. ಬಿ.ಎ. ಪಾಟೀಲ್​ ಸಮಿತಿಗೆ ದೂರು ನೀಡಿದ್ದಾರೆ. ಆಕ್ಸಿಜನ್ ದುರಂತದ ಬಗ್ಗೆ ತನಿಖೆಗಾಗಿ ನೇಮಿಸಿರುವ ಸಮಿತಿಗೆ ದೂರು ಸಲ್ಲಿಸಿದ್ದಾರೆ.

ಹೈಕೋರ್ಟ್​ಗೆ ಮಧ್ಯಂತರ ವರದಿಯನ್ನು ಸಲ್ಲಿಸಿದ್ದ ಆಯೋಗ, ವರದಿಯಲ್ಲಿ ರೋಹಿಣಿ ಸಿಂಧೂರಿ ತಪ್ಪಿಲ್ಲವೆಂದು ಉಲ್ಲೇಖಿಸಿತ್ತು. ಆದರೆ, ಸಮಿತಿ ಚಾಮರಾಜನಗರಕ್ಕೆ ಬಂದು ತನಿಖೆ ನಡೆಸಿಲ್ಲ. ಪ್ರತಿವಾದಿಗಳ ಹೇಳಿಕೆ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿ ದೂರು ಸಲ್ಲಿಸಿದ್ದಾರೆ.

ಸರ್ಕಾರ ನೇಮಿಸಿರುವ ನ್ಯಾ.ಬಿ.ಎ. ಪಾಟೀಲ್​ ನೇತೃತ್ವದ ಸಮಿತಿ ಹಾಗೂ ಶಿವಯೋಗಿ ಕಳಸದ್​ ಸಮಿತಿ ಕೂಡ ತನಿಖೆ ಪೂರ್ಣಗೊಳಿಸಿಲ್ಲ. ಘಟನೆಯಲ್ಲಿ ಆಮ್ಲಜನಕ​ ಖಾಲಿಯಾಗಿ 24 ರೋಗಿಗಳು ಮೃತಪಟ್ಟಿದ್ದರು. ಆದರೆ, 24 ರೋಗಿಗಳು ಸತ್ತಿಲ್ಲ, ಅದು ರೋಹಿಣಿ ಸಿಂಧೂರಿ ಮಾಡಿದ ಕೊಲೆ. ರೋಹಿಣಿ ಸಿಂಧೂರಿ ವಿರುದ್ಧ ಐಪಿಸಿ ಸೆಕ್ಷನ್​ 302ರಡಿ ಕೇಸ್ ಹಾಕಬೇಕು. ರೋಹಿಣಿ ಸಿಂಧೂರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ದೂರುದಾರ ಹೇಳಿದ್ದಾರೆ.

ರೋಹಿಣಿ ಸಿಂಧೂರಿ ಸ್ವಂತ ಆಸ್ತಿ ಮುಟ್ಟುಗೋಲು ಹಾಕಬೇಕು. ಆಸ್ತಿ ಮಾರಿ ಮೃತರ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂದು ಮೈಸೂರಿನಲ್ಲಿ ದೂರು ನೀಡಿದ ನಂತರ ಮಲ್ಲೇಶ್​ ವಾಗ್ದಾಳಿ ನಡೆಸಿದ್ದಾರೆ.

ಡಿಸಿ ಅಧಿಕೃತ ನಿವಾಸ ನವೀಕರಣದ ಬಗ್ಗೆ ತನಿಖೆಗೆ ಆದೇಶ ಮೈಸೂರು ಡಿಸಿಯಾಗಿದ್ದ ರೋಹಿಣಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಡಿಸಿ ಅಧಿಕೃತ ನಿವಾಸ ನವೀಕರಣದ ಬಗ್ಗೆ ತನಿಖೆಗೆ ಆದೇಶ ಹೊರಡಿಸಲಾಗಿದೆ. ತನಿಖೆ ಮಾಡುವಂತೆ ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ಆದೇಶ ನೀಡಲಾಗಿದೆ.

ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿ ಪಡೆಯದೆ, ಕಟ್ಟಡ ನವೀಕರಣ, ನೆಲ ಹಾಸಿಗೆ ನವೀಕರಣ ಬಗ್ಗೆ ದೂರು ನೀಡಲಾಗಿದೆ. ಮಾಜಿ ಸಚಿವ, ಶಾಸಕ ಸಾ.ರಾ. ಮಹೇಶ್ ದೂರು ನೀಡಿದ್ದರು. ಸಾ.ರಾ. ಮಹೇಶ್ ದೂರು ಹಿನ್ನೆಲೆ ತನಿಖೆ ಮಾಡಲು ಆದೇಶ ಹೊರಡಿಸಲಾಗಿದೆ. ತನಿಖೆ ನಡೆಸಿ 7 ದಿನಗಳಲ್ಲಿ ವರದಿ ನೀಡುವಂತೆಯೂ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ; ಪಾರಂಪರಿಕ ಕಟ್ಟಡ ನವೀಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟ

ಮೈಸೂರು: ಮಗಳ ಆತ್ಮಹತ್ಯೆಯಿಂದ ಮನನೊಂದ ತಂದೆ ಹೃದಯಾಘಾತದಿಂದ ಸಾವು