ಮೈಸೂರು: ಮೈಸೂರಿನ (Mysore) ಮಹಿಳಾ ಠಾಣೆ ಪೊಲೀಸರು (Police) ವಿಕೃತ ಬ್ಲ್ಯಾಕ್ ಮೇಲರ್ನೊಬ್ಬನನ್ನು ಬಂಧಿಸಿದ್ದಾರೆ. ಶಿವಪ್ರಕಾಶ್ ಬಿ.ಜಿ. ಬಂಧಿತ ಆರೋಪಿಯಾಗಿದ್ದು, ಈತನು ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದ ನಿವಾಸಿಯಾಗಿದ್ದಾನೆ. ಆರೋಪಿ ಗೂಗಲ್ ಮೀಟ್ ಮತ್ತು ಫೇಸ್ ಬುಕ್ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಯುವತಿಯರನ್ನು ಪರಿಚಯಿಸಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು. ಆರೋಪಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ವಿಡಿಯೋ ಮಾಡಿಟ್ಟುಕೊಂಡು ಯುತಿಯರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು.
ಮೈಸೂರು ಮೂಲದ ಯುವತಿಯ ವಿಡಿಯೋ ಮಾಡಿಕೊಂಡು ಯುವತಿಗೆ ಹಣ ಕೊಡು, ಇಲ್ಲವಾದಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು. ಹೀಗೆ ಯುವತಿಯಿಂದ ಸುಮಾರ 20 ಲಕ್ಷದ ವರೆಗೆ ಹಣ ಪಡೆದಿದ್ದನು. ಇದರಿಂದ ರೋಸಿ ಹೋಗಿದ್ದ ಯುವತಿ ಮೈಸೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಯುವತಿಯ ದೂರಿನ ಆಧಾರದ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನು ಓದಿ: ಬಾಡಿ ಶೇಮಿಂಗ್ನಿಂದ ಬೇಸತ್ತು ಸಹಪಾಠಿಯನ್ನೇ ಇರಿದು ಕೊಂದ ಪಿಯುಸಿ ವಿದ್ಯಾರ್ಥಿ
ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಭಕ್ತರಿಗೆ ಗಾಯ
ಬಾಗಲಕೋಟೆ: ಬಾದಾಮಿ (Badami) ತಾಲೂಕಿನ ಮಹಾಕೂಟದ ನಿನ್ನೆ (ಮೇ 17) ರಂದು ಸಾಯಂಕಾಲ ನಡೆದ ಮಹಾರಥೋತ್ಸವದಲ್ಲಿ ಅವಘಡ ಸಂಭವಿಸಿದೆ. ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಭಕ್ತರು ಗಾಯಗೊಂಡಿದ್ದರು. ಗಾಯಗೊಂಡಿದ್ದ ಇಬ್ಬರಲ್ಲಿ ಓರ್ವ ಯಂಕಂಚಿ ಗ್ರಾಮದ ಮಹಾಗುಂಡಪ್ಪ ಗಾಳಿ(34) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇನ್ನು ಮತ್ತೊಬ್ಬ ನಂದಿಕೇಶ್ವರ ಗ್ರಾಮದ ಮಲ್ಲಪ್ಪ ಶಿರೂರ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ದಾವಣಗೆರೆ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಆರನೇಕಲ್ಲು ಗ್ರಾಮದಲ್ಲಿ ನಡೆದಿದೆ. ಜ್ಯೋತಿ(35) ಆತ್ಮಹತ್ಯೆಗೆ ಶರಣಾದ ಮಹಿಳೆ. ಜ್ಯೋತಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಇದರಿಂದ ಮನನೊಂದು ಬೆಳಿಗ್ಗೆ ಗ್ರಾಮದ ಜಮೀನೊಂದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ, ಮಹಿಳೆಯ ಶವ ಹೊರತೆಗೆದಿದ್ದಾರೆ. ಸ್ಥಳಕ್ಕೆ ಹದಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆ ಗೆ ಶವ ಸಾಗಿಸಿದ್ದಾರೆ.
ಇದನ್ನು ಓದಿ: ಸೈಕಲ್ಗೆ ಅಂಟಿಸಿದ್ದ ‘ಜೈ ಭೀಮ್’ ಸ್ಟಿಕ್ಕರ್ ವಿಚಾರಕ್ಕೆ 2 ಸಮುದಾಯದ ಯುವಕರ ನಡುವೆ ಗಲಾಟೆ, 6 ಯುವಕರಿಗೆ ಗಾಯ
ಕ್ಷುಲ್ಲಕ ಕಾರಣಕ್ಕಾಗಿ ಚಾಕುವಿನಿಂದ ಇರಿದು ಯುವಕನ ಹತ್ಯೆ
ಬೀದರ: ಕ್ಷುಲ್ಲಕ ಕಾರಣಕ್ಕಾಗಿ ಚಾಕುವಿನಿಂದ ಇರಿದು ಯುವಕನನ್ನು ಹತ್ಯೆ ಮಾಡಿರುವ ಘಟನೆ ಬೀದರನ ಓಲ್ಡ್ ಸಿಟಿಯಲ್ಲಿ ನಡೆದಿದೆ. ಅಮೀರ್ ಖಾನ್(22) ಮೃತ ದುರ್ದೈವಿ. ನಿನ್ನೆ (ಮೇ 17) ರಂದು ಘಟನೆ ನಡೆದಿದೆ. ಜಸನ್ ಕೊಲೆ ಮಾಡಿದ ಆರೋಪಿಯಾಗಿದ್ದು, ಈತನು ಎಂಟರ್ಪ್ರೈಸ್ ನಲ್ಲಿ ಹಾಡು ಹಗಲೆ ಚಾಕುವಿನಿಂದ ಇರಿದು ಅಮೀರ್ ಖಾನ್ನ್ನು ಕೊಲೆ ಮಾಡಿದ್ದಾನೆ. ಕೊಲೆಯ ದೃಶ್ಯ ವಿಡಿಯೋ ಸಿಸಿಟಿಯಲ್ಲಿ ಸೆರೆಯಾಗಿದೆ. ಆರೋಪಿ ಜಸನ್ನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೌಬಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.