ಹುಣಸೂರು: ಮದುವೆ ಮುಗಿಸಿ ಬರುತ್ತಿದ್ದ ಬೊಲೆರೋ ವಾಹನ ಮರಕ್ಕೆ ಡಿಕ್ಕಿ – 6 ಮಂದಿ ಸ್ಥಳದಲ್ಲೇ ಸಾವು

| Updated By: ಸಾಧು ಶ್ರೀನಾಥ್​

Updated on: Apr 20, 2022 | 6:29 PM

Hunsur Road Accident: ಹುಣಸೂರಿನಿಂದ ಮದುವೆ ಮುಗಿಸಿ ಹೋಗುತ್ತಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. 6 ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೂವರಿಗೆ ಗಂಭೀರ ಗಾಯಗಳಾಗಿವೆ.

ಹುಣಸೂರು: ಮದುವೆ ಮುಗಿಸಿ ಬರುತ್ತಿದ್ದ ಬೊಲೆರೋ ವಾಹನ ಮರಕ್ಕೆ ಡಿಕ್ಕಿ - 6 ಮಂದಿ ಸ್ಥಳದಲ್ಲೇ ಸಾವು
ಹುಣಸೂರು: ಮದುವೆ ಮುಗಿಸಿ ಬರುತ್ತಿದ್ದ ಬೊಲೆರೋ ವಾಹನ ಮರಕ್ಕೆ ಡಿಕ್ಕಿ - 6 ಮಂದಿ ಸ್ಥಳದಲ್ಲೇ ಸಾವು
Follow us on

ಮೈಸೂರು: ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಲ್‌ಬೆಟ್ಟ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೊಲೆರೋ ವಾಹನವೊಂದು ಮರಕ್ಕೆ ಡಿಕ್ಕಿಯಾಗಿ 6 ಮಂದಿ ಸಾವನ್ನಪ್ಪಿದ್ದಾರೆ. ಹುಣಸೂರಿನಿಂದ ಮದುವೆ ಮುಗಿಸಿ ಹೋಗುತ್ತಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. 6 ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೂವರಿಗೆ ಗಂಭೀರ ಗಾಯಗಳಾಗಿವೆ. ಮೂವರನ್ನು ಹುಣಸೂರು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹುಣಸೂರು ಪೊಲೀಸರು ದೌಡಾಯಿಸಿದ್ದಾರೆ (Hunsur Road Accident). ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದ ಅನಿಲ್, ಸಂತೋಷ್, ವಿನುತ್, ರಾಜೇಶ್, ದಯಾನಂದ, ಬಾಬು ಮೃತ ದುರ್ದೈವಿಗಳು.

ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಸಹೋದರಿಬ್ಬರು ನಾಪತ್ತೆ
ವಿಜಯಪುರ: ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಬಳಿ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಸಹೋದರಿಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಸಹೋದರರಾದ ಬಳೂತಿ ಗ್ರಾಮದ ಬಸಪ್ಪ ಮಳೆಪ್ಪ ದಳವಾಯಿ (29) ಮತ್ತು ಅಜೀತ್ ಮಳೆಪ್ಪ ದಳವಾಯಿ (25) ನಾಪತ್ತೆಯಾದವರು. ನಾಪತ್ತೆಯಾಗಿರುವ ಮೀನುಗಾರ ಸಹೋದರರಿಗಾಗಿ ಹುಡುಕಾಟ ನಡೆದಿದೆ. ಬಳೂತಿ, ರೊಳ್ಳಿ, ನದಿ ದಂಡೆಗಳಲ್ಲಿ ಅಗ್ನಿ ಶಾಮಕ ದಳದಿಂದ ತೀವ್ರ ಹುಡುಕಾಟ ನಡೆದಿದೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ವೃದ್ಧೆ ಬಲಿ; 8 ಸೋಂಕಿತರು ಪತ್ತೆ‌‌
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮಂಗನ ಕಾಯಿಲೆಗೆ 85 ವರ್ಷದ ವೃದ್ಧೆ ಜಾನಕಿ ಹೆಗಡೆ ಬಲಿಯಾಗಿದ್ದಾರೆ. ಒಂದು ವಾರದಲ್ಲಿ ಮಂಗನ ಕಾಯಿಲೆಯ 8 ಸೋಂಕಿತರು ಪತ್ತೆ‌‌ಯಾಗಿದ್ದಾರೆ. ‌ಸಿದ್ದಾಪುರ ತಾಲೂಕಿನ ಹಲಗೇರಿ, ಕೋಲ್ ಸಿರ್ಸಿ, ಕಾನಸೂರು, ಬೀಳಗಿ ಗ್ರಾಮದಲ್ಲಿ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಒಂದೇ ವಾರದಲ್ಲಿ 8 ಸೋಂಕಿತರು ಪತ್ತೆಯಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಂಗನ ಕಾಯಿಲೆ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದ್ದಾರೆ.

 

Also Read:
GAIL ಕಂಪನಿ ಅಧಿಕಾರಿಗಳಿಂದಲೂ ಲಂಚ ಪಡೆದ ಚಿಕ್ಕಜಾಲ ಇನ್ಸ್‌ಪೆಕ್ಟರ್‌ ಹಂಸವೇಣಿ, ಎಸಿಬಿ ಬಲೆಗೆ ಬಿದ್ದು ವಿಲವಿಲ

Also Read:
ಆರ್ಮಿಯಲ್ಲಿ ಹವಾಲ್ದಾರನಾಗಿರುವ ಬಾಗಲಕೋಟೆ ಯುವಕ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ

Published On - 5:33 pm, Wed, 20 April 22