ರಸ್ತೆಯಲ್ಲಿ ಓಡಾಡುವ ವಿಚಾರಕ್ಕೆ ಕ್ಯಾತೆ ತೆಗೆದು ಹಲ್ಲೆ; ಯುವಕ ಆಸ್ಪತ್ರೆಗೆ ದಾಖಲು
ಗ್ರಾಮದಲ್ಲಿ 2 ಸಮುದಾಯಗಳ ಮಧ್ಯೆ ಅಸಮಾಧಾನ ಭುಗಿಲೆದ್ದಿದೆ. ಘಟನೆಯಲ್ಲಿ ಗ್ರಾಮದ ಯೋಗೇಶ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸೈಕಲ್ ಚೈನ್‌ನಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.
ಮೈಸೂರು: ರಸ್ತೆಯಲ್ಲಿ ಓಡಾಡುವ ವಿಚಾರಕ್ಕೆ ಕ್ಯಾತೆ ತೆಗೆದು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಹೊಸಳ್ಳಿಯಲ್ಲಿ ರಸ್ತೆಯಲ್ಲಿ ಓಡಾಡುವ ವಿಚಾರಕ್ಕೆ ಕ್ಯಾತೆ ತೆಗೆದು ಯೋಗೇಶ್ ಎಂಬುವವರ ಮೇಲೆ ಒಂದು ಗುಂಪು ಹಲ್ಲೆ ಮಾಡಿದೆ.
ಗ್ರಾಮದಲ್ಲಿ 2 ಸಮುದಾಯಗಳ ಮಧ್ಯೆ ಅಸಮಾಧಾನ ಭುಗಿಲೆದ್ದಿದೆ. ಘಟನೆಯಲ್ಲಿ ಗ್ರಾಮದ ಯೋಗೇಶ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸೈಕಲ್ ಚೈನ್‌ನಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಗ್ರಾಮಕ್ಕೆ ಮೈಸೂರು ಎಸ್‌ಪಿ ಆರ್.ಚೇತನ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ಪ್ರಕರಣ ಸಂಬಂಧ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶ್ರೀಗಂಧದ ಮರ ಸ್ಮಗ್ಲಿಂಗ್ ಮಾಡುತ್ತಿದ್ದ ಇಬ್ಬರ ಬಂಧನ ಇನನು ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮೈಸೂರಿನಲ್ಲಿ ಗಂಧದ ಮರ ಸ್ಮಗ್ಲಿಂಗ್ ಮಾಡುತ್ತಿದ್ದ ಗ್ಯಾಂಗ್ ಪತ್ತೆ ಮಾಡಿದ್ದಾರೆ. ಆರೋಪಿಗಳಿಂದ 1 ಕೋಟಿ ರೂ. ಮೌಲ್ಯದ 700 ಕೆ.ಜಿ. ಶ್ರೀಗಂಧದ ತುಂಡು, 15 ಸಾವಿರ ರೂ., ಗೂಡ್ಸ್ ಆಟೋ, 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಹಾಗೂ ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.
ಇದನ್ನೂ ಓದಿ: ಖಬರಸ್ತಾನ್ ಜಾಗದಲ್ಲಿ ಸರ್ವೆ ವೇಳೆ ಆಂಜನೇಯ ದೇಗುಲದ ಕೊಂಡ ಪತ್ತೆ: ಎರಡು ಧರ್ಮೀಯರ ಮಧ್ಯೆ ವಾಕ್ಸಮರ