ಆದಿವಾಸಿ ಮಕ್ಕಳ ಕಲಿಕೆಗಾಗಿ ಮೈಸೂರಿನ 6 ಹಾಡಿಗಳಲ್ಲಿ ಚಿಗುರು ಶಾಲೆ ಆರಂಭ
ಮೈಸೂರು ಎಚ್.ಡಿ.ಕೋಟೆ ತಾಲೂಕಿನ ಮಾಸ್ತಿಗುಡಿ ಹಾಡಿ, ಚಿಕ್ಕೆರೆ ಹಾಡಿ, ಕುಂಟೇರಿ ಹಾಡಿ ಸೇರಿ 6 ಕಡೆ ಚಿಗುರು ಶಾಲೆ ಆರಂಭಗೊಂಡಿದೆ. ಆನ್ಲೈನ್ ತರಗತಿಗಳಿಗೆ ಆದಿವಾಸಿಗರ ಹಾಡಿಗಳಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲ.
ಮೈಸೂರು: ಮಹಾಮಾರಿ ಕೊರೊನಾದಿಂದಾದ (Coronavirus) ಸಮಸ್ಯೆಗಳು ಒಂದೆರಡಲ್ಲ. ಮಕ್ಕಳ ಶಿಕ್ಷಣದಿಂದ ಹಿಡಿದು ಉದ್ಯಮದವರೆಗೂ ಬಹು ದೊಡ್ಡ ಮಟ್ಟಿಗೆ ನಷ್ಟವಾಗಿದೆ. ಶಿಕ್ಷಣ ವಿಚಾರಕ್ಕೆ ಬಂದಾಗ ಆದಿವಾಸಿ ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದಾರೆ. ಕೊರೊನಾ ಹಿನ್ನೆಲೆ ಆದಿವಾಸಿ ಮಕ್ಕಳು ಶಿಕ್ಷಣದಿಂದ ಹೊರ ಉಳಿದಿದ್ದಾರೆ. ಹೀಗಾಗಿ ಆದಿವಾಸಿ ಬುಡಕಟ್ಟು ಕೃಷಿಕರ ಸಂಘ ಮತ್ತು ನಿಸರ್ಗ ಸಂಸ್ಥೆ ಸಹಯೋಗದಲ್ಲಿ ಜಿಲ್ಲೆಯ ಹಾಡಿ ಮಕ್ಕಳಿಗೆ ಚಿಗುರು ಶಾಲೆ ಆರಂಭವಾಗಿದೆ. ಹಾಡಿಯ ಪಂಚಾಯಿತಿ ಕಟ್ಟೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.
ಮೈಸೂರು ಎಚ್.ಡಿ.ಕೋಟೆ ತಾಲೂಕಿನ ಮಾಸ್ತಿಗುಡಿ ಹಾಡಿ, ಚಿಕ್ಕೆರೆ ಹಾಡಿ, ಕುಂಟೇರಿ ಹಾಡಿ ಸೇರಿ 6 ಕಡೆ ಚಿಗುರು ಶಾಲೆ ಆರಂಭಗೊಂಡಿದೆ. ಆನ್ಲೈನ್ ತರಗತಿಗಳಿಗೆ ಆದಿವಾಸಿಗರ ಹಾಡಿಗಳಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲ. ಮೊಬೈಲ್ ಖರೀದಿಸುವಷ್ಟು ಶಕ್ತಿಯೂ ಇಲ್ಲ. ಇದರಿಂದ ಆದಿವಾಸಿ ಮಕ್ಕಳಿಗೆ ಶಿಕ್ಷಣ ಸಿಗುತ್ತಿರಲಿಲ್ಲ. ಹೀಗಾಗಿ ಆದಿವಾಸಿ ಬುಡಕಟ್ಟು ಕೃಷಿಕರ ಸಂಘ ಮತ್ತು ನಿಸರ್ಗ ಸಂಸ್ಥೆ ಸೇರಿ ಚಿಗುರು ಶಾಲೆಗಳನ್ನು ಆರಂಭಿಸಿವೆ. ಶಿಕ್ಷಣದ ಜೊತೆಗೆ ಶಾಲೆಯಲ್ಲಿ ಸಾಂಸ್ಕೃತಿಕ ಕಲೆ, ಆದಿವಾಸಿ ಸಂಪ್ರದಾಯ ನೃತ್ಯ, ಕರಕುಶಲ ಕಲೆಗೆ ನಿಸರ್ಗ ಸಂಸ್ಥೆ ಒತ್ತು ನೀಡಿದೆ.
ದಕ್ಷಿಣ ಕನ್ನಡದಲ್ಲಿ ಶಾಲಾ- ಕಾಲೇಜು ಆರಂಭ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆ ಶಾಲಾ- ಕಾಲೇಜು ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲೆಯಲ್ಲಿ 8, 9 ಮತ್ತು 10ನೇ ತರಗತಿ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಸೆ.17ರ ಶುಕ್ರವಾರದಿಂದ ಈ ಮೂರು ತರಗತಿಗಳು ಆರಂಭವಾಗಲಿದೆ. 6 ಮತ್ತು 7ನೇ ತರಗತಿಗಳು ಸೆ.20ರ ಸೋಮವಾರದಿಂದ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ
ದಕ್ಷಿಣ ಕನ್ನಡದಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್; ಆನ್ಲೈನ್ ತರಗತಿಯೂ ನಡೆಯುತ್ತೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಅಪಘಾತ ಪ್ರಕರಣ: ಮೃತ ಯುವಕ-ಯುವತಿ ತಮಿಳುನಾಡಿನ ಟೆಕ್ಕಿಗಳು, ವಿವರ ಇಲ್ಲಿದೆ
(Chiguru schools have been started to educate Tribal children in mysuru)