ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮಧು ಜಿ.ಮಾದೇಗೌಡಗೆ 12,205 ಮತಗಳ ಅಂತರದಿಂದ ಜಯ

ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಅಭ್ಯರ್ಥಿ ಸೋಲೋಪ್ಪಿಕೊಂಡಿದ್ದಾರೆ. ಇನ್ನೆರಡು ಸುತ್ತು ಮಾತ್ರ ಬಾಕಿಯಿದ್ದು, ಗೆಲುವು ಕಷ್ಟವಿದೆ. ಮತ‌ಎಣಿಕೆ ಕೇಂದ್ರ ಮುಂಭಾಗ ಮೈವಿ ರವಿಶಂಕರ್ ಬೇಸರದ ಮಾತುಗಳನ್ನಾಡಿದರು.

ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮಧು ಜಿ.ಮಾದೇಗೌಡಗೆ 12,205 ಮತಗಳ ಅಂತರದಿಂದ ಜಯ
ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 16, 2022 | 2:16 PM

ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಮಧು ಜಿ.ಮಾದೇಗೌಡಗೆ ಒಟ್ಟು 45,275 ಮತಗಳು ಪಡೆದುಕೊಂಡಿದ್ದು, 12,205 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಗೆಲುವಿಗೆ ನಿಗದಿತ 46,083 ಮತಗಳ ನಿಗದಿತ ಕೋಟ ತಲುಪಲು 808 ಮತಗಳ ಕೊರತೆ ಎದುರಾಗಿತ್ತು. ಪ್ರತಿಸ್ಪರ್ಧಿ ಬಿಜೆಪಿಯ ರವಿಶಂಕರ್​ ಎಲಿಮಿನೇಟ್​ ಮಾಡಿ ಅಲ್ಲಿಂದ 808 ಮತ ಪಡೆದಿದ್ದು, ಆ ಮೂಲಕ ನಿಗದಿತ ಕೋಟ ತಲುಪಿದ ಮಧು ಜಿ.ಮಾದೇಗೌಡ, ಪರಾಜಿತ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್​ಗೆ 33,878 ಮತಗಳು ಮತ್ತು ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮುಗೆ ಕೇವಲ 19,630 ಮತಗಳನ್ನು ಪಡೆದುಕೊಂಡಿದ್ದಾರೆ. ಪರಿಷತ್​ನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಮತ ಎಣಿಕೆ ಇಂದು ಬೆಳಿಗ್ಗೆ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಗೆಲುವು ಬಹುತೇಕ ಪಕ್ಕಾ ಆಗಿತ್ತು. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿಯಿತ್ತು. ಎಲ್ಲ ಹಂತದಲ್ಲೂ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್ (Congress) ಅಭ್ಯರ್ಥಿ, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ದಕ್ಷಿಣ ಪದವೀಧರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಗೆಲುವು ಇದಾಗಿದ್ದು, 2ನೇ ಬಾರಿ ಬಿಜೆಪಿ ಅಭ್ಯರ್ಥಿ ರವಿಶಂಕರ್ ಸೋಲಿನ ಹಾದಿಯಲ್ಲಿದ್ದಾರೆ.

ಜೆಡಿಎಸ್ ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಜೆಡಿಎಸ್ ಬಿಜೆಪಿಗೆ ಬಂಡಾಯ ಮುಳುವಾಗಿದ್ದು, ಜೆಡಿಎಸ್ ಬಿಜೆಪಿ ಒಳ ಜಗಳದ ಲಾಭವನ್ನ ಕಾಂಗ್ರೆಸ್ ಪಡೆದುಕೊಂಡಿದೆ. ಹಳೇ ಮೈಸೂರು ಭಾಗದಲ್ಲಿ ಮತ್ತೆ ಕೈ ಕನಸು ಚಿಗುರಿದೆ. ಮಂಡ್ಯ ಹಾಸನದಲ್ಲಿ ಶಾಸಕರಿಲ್ಲದಿದ್ದರು ಮುನ್ನಡೆ ಸಾಧಿಸಿದೆ. ಮೈಸೂರು ಚಾಮರಾಜನಗರದಲ್ಲೂ ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಿದ್ದು, ಜೆಡಿಎಸ್ ಬಿಜೆಪಿಗೆ ಮುಖಭಂಗವಾಗಿದ್ದು, ಹಳೆ ಮೈಸೂರು ಭಾಗದ ಭದ್ರಕೋಟೆ ಛಿದ್ರವಾಗಿದೆ. ಬಿಜೆಪಿಯಿಂದ ಸಿಎಂ ಸೇರಿ ಹಲವು ಸಚಿವರಿಂದ ಪ್ರಚಾರ ಮಾಡಲಾಗಿದೆ. ಜೆಡಿಎಸ್​ನಿಂದಲೂ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಯಿಂದ ಕೂಡ ಪ್ರಚಾರ ಮಾಡಿದ್ದು ಸದ್ಯ ಎರಡು ಪಕ್ಷಗಳಿಗೆ ಸೋಲಿನ ಭಯ ಉಂಟಾಗಿದೆ.

ತಂದೆ ಜಿ ಮಾದೇಗೌಡರನ್ನು ನೆನೆದು ಭಾವುಕರಾದ ಮಧು ಜಿ ಮಾದೇಗೌಡ

ಈ ಸಂದರ್ಭದಲ್ಲಿ ನಮ್ಮ ತಂದೆ ಇರಬೇಕಾಗಿತ್ತು. ಅವರಿಲ್ಲದ ಶೂನ್ಯತೆ ಕಾಡುತ್ತಿದೆ ಎಂದು ತಂದೆ ಜಿ. ಮಾದೇಗೌಡರನ್ನು ನೆನೆದು ಮಧು ಜಿ ಮಾದೇಗೌಡ ಭಾವುಕರಾದರು. ಜೆಡಿಎಸ್ ಶ್ರೀಕಂಠೇಗೌಡರೇ ಜೆಡಿಎಸ್ ಅಭ್ಯರ್ಥಿ ಸೋಲಲು ಕಾರಣವಾಗಿದ್ದು, ಶ್ರೀಕಂಠೇಗೌಡರು ತಮ್ಮ ಪಕ್ಷದವನ್ನು ಸೋಲಿಸುವುದರಲ್ಲಿ ಎಕ್ಸಫರ್ಟ್. ನಿಖಿಲ್ ಕುಮಾರಸ್ವಾಮಿ ಸೋಲಿಸಿ ಸುಮಲತಾ ಗೆಲ್ಲಿಸಿದ್ದು ಕೆ ಟಿ ಶ್ರೀಕಂಠೇಗೌಡ. ಅವರಿಗೆ ಸೋಲುವುದು ಗೊತ್ತಿದ್ದೇ ಚುನಾವಣೆಗೆ ನಿಲ್ಲಲಿಲ್ಲ. ಬಿಜೆಪಿಯ ದುರಾಡಳಿತ, ಹಗರಣಗಳು ಬಿಜೆಪಿ ಸೋಲಿಗೆ ಕಾರಣ. ಇದು ಮುಂದಿನ ವಿಧಾನಸಭಾ ಚುನಾವಣೆಯ ಮೊದಲ‌ ಮೆಟ್ಟಿಲು ಎಂದು ಮೈಸೂರಿನಲ್ಲಿ ಮಧು ಜಿ ಮಾದೇಗೌಡ ಹೇಳಿಕೆ ನೀಡಿದರು.

ಫಲಿತಾಂಶಕ್ಕೂ ಮುನ್ನ ಸೋಲೋಪ್ಪಿಕೊಂಡ ಬಿಜೆಪಿ ಅಭ್ಯರ್ಥಿ

ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಅಭ್ಯರ್ಥಿ ಸೋಲೋಪ್ಪಿಕೊಂಡಿದ್ದಾರೆ. ಇನ್ನೆರಡು ಸುತ್ತು ಮಾತ್ರ ಬಾಕಿಯಿದ್ದು, ಗೆಲುವು ಕಷ್ಟವಿದೆ. ಮತ‌ಎಣಿಕೆ ಕೇಂದ್ರ ಮುಂಭಾಗ ಮೈವಿ ರವಿಶಂಕರ್ ಬೇಸರದ ಮಾತುಗಳನ್ನಾಡಿದರು. ಸತತ ಹಿನ್ನೆಡೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಒಬ್ಬಂಟಿಯಾಗಿದ್ದಾರೆ. ಎಣಿಕಾ ಕೇಂದ್ರ ಮುಂಭಾಗದಲ್ಲಿ ಮೈವಿ ರವಿಶಂಕರ್ ಒಬ್ಬಂಟಿಯಾಗಿ ಕುಳಿತಿದ್ದಾರೆ. ಬಹಳಷ್ಟು ಕಷ್ಟ ಪಟ್ಟಿದ್ದೆವು ಈ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಜೆಡಿಎಸ್ ಮತಗಳೆಲ್ಲಾ ಕಾಂಗ್ರೆಸ್ ಪಾಲಾಗಿವೆ. ಇನ್ನೆರಡು ಸುತ್ತು ಮಾತ್ರ ಬಾಕಿ ಇದೆ. ಗೆಲುವು ಕಷ್ಟ ಸಾಧ್ಯ, ಅಪ್ಪಟ ಬಿಜೆಪಿಗರ ಮತ ಮಾತ್ರ ನನಗೆ ಸೇರಿದೆ ಎಂದು ಬೇಸರದ ಹೇಳಿಕೆಯನ್ನು ನೀಡಿದರು.

ಮೊದಲ ಪ್ರಾಶಸ್ತ್ಯದ ಮತ ಎಣಿಕೆ ನಿನ್ನೆ ಮುಕ್ತಾಯ

ದಕ್ಷಿಣ ಪದವೀಧರ ಕ್ಷೇತ್ರ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ನಿನ್ನೆ ಮುಕ್ತಾಯಗೊಂಡಿದೆ ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ಹೇಳಿದ್ದಾರೆ. ಒಟ್ಟು 49,700 ಮತಗಳು ಎಣಿಕೆಯಾಗಿದ್ದು, ಇನ್ನೂ 49,000 ಮತ ಎಣಿಕೆ ಬಾಕಿ ಇವೆ ಎಂದು ತಿಳಿಸಿದ್ದಾರೆ.  ಕಾಂಗ್ರೆಸ್ (Congress) : 16,137, ಬಿಜೆಪಿ (BJP) : 13,179, ಜೆಡಿಎಸ್ (JDS) : 8,512 ಪ್ರಸನ್ನ ಗೌಡ : 3,142, ವಿನಯ್ : 1,890, ಬಿಎಸ್ಪಿ : 1,418 , ತಿರಸ್ಕೃತ : 3,718, ಕಾಂಗ್ರೆಸ್ ಅಭ್ಯರ್ಥಿ 2,958 ಮತಗಳ ಮುನ್ನೆಡೆಯಲ್ಲಿವೆ ಎಂದು ಹೇಳಿದರು.

ವಿಧಾನ ಪರಿಷತ್​ನ (MLC Election) ನಾಲ್ಕು ಸ್ಥಾನಗಳಿಗೆ ಜೂನ್ 13ರಂದು ನಡೆದಿದ್ದ ಚುನಾವಣಾ ಫಲಿತಾಂಶ ಇಂದು ಹೊರಬೀಳುತ್ತಿದೆ. ​​ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇ 59, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶೇ 70, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 80, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶೇ 84ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​​ ಸೇರಿ ಒಟ್ಟು 49 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,84,992 ಮತದಾರರು ಇದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:41 am, Thu, 16 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್