ಮೈಸೂರು: ಪ್ರೀತಿಸುವಾಗ(Love) ಇರುವ ಕಾಳಜಿ, ಆಸಕ್ತಿ ಮದುವೆ(Marriage) ವಿಚಾರ ಬಂದಾಗ ಇರೋದಿಲ್ಲ ಎಂಬ ಮಾತಿಗೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ. ಪ್ರಿಯಕರನ ಮನೆಯಲ್ಲಿ ವಿಷಸೇವಿಸಿ(Poison) ಪ್ರಿಯತಮೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ. ಕಂದೇಗಾಲದ ತ್ಯಾಗರಾಜ್ ನಿವಾಸದಲ್ಲಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕಳೆದ 4 ವರ್ಷಗಳಿಂದ ತ್ಯಾಗರಾಜ್ ಎಂಬ ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನೆ ತ್ಯಾಗರಾಜ್ ಹುಟ್ಟುಹಬ್ಬ ಆಚರಣೆಗಾಗಿ ತನ್ನ ಪ್ರಿಯತಮೆಯನ್ನು ಮನೆಗೆ ಆಹ್ವಾನಿಸಿದ್ದ. ಪ್ರಿಯತಮನ ಬರ್ತ್ಡೇ ದಿನವೇ ಯುವತಿ ವಿವಾಹ ವಿಚಾರ ಪ್ರಸ್ತಾಪಿಸಿದ್ದಳು. ಎಲ್ಲರ ಎದುರು ವಿವಾಹ ವಿಚಾರ ಪ್ರಸ್ತಾಪಿಸಿದ್ದಕ್ಕೆ ಯುವಕ ಕಪಾಳಮೋಕ್ಷ ಮಾಡಿದ್ದ. ಜನರ ಎದುರು ಕಪಾಳಕ್ಕೆ ಹೊಡೆದಿದ್ದಕ್ಕೆ ಯುವತಿಗೆ ತೀವ್ರ ಬೇಸರವಾಗಿತ್ತು. ಹೀಗಾಗಿ ಮನನೊಂದ ಯುವತಿ ತನ್ನ ಪ್ರಿಯತಮ ತ್ಯಾಗರಾಜ್ ಮನೆಯಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಯುವತಿ ಅಸ್ವಸ್ಥಗೊಂಡಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರಿನಲ್ಲಿ ವರದಕ್ಷಿಣೆ ಕಿರುಕುಳ; ವಿಷಸೇವಿಸಿ ಗೃಹಿಣಿ ಆತ್ಮಹತ್ಯೆ, ಗಂಡನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲು ಚಿಕ್ಕಮಗಳೂರು: ವರದಕ್ಷಿಣೆ ಕಿರುಕುಳ(Dowry Harassment) ತಾಳದೇ ವಿಷಸೇವಿಸಿ ಗೃಹಿಣಿ ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿ ಗಾನವಿ(27) ಎಂಬ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆಂದು ಪತಿಯ ಕುಟುಂಬಸ್ಥರ ವಿರುದ್ಧ ಗಾನವಿ ಪೋಷಕರು ಆರೋಪಿಸಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಯುಗಾದಿ ಹಬ್ಬ. ಹೊಸ ವರ್ಷದ ಸಂಭ್ರದಲ್ಲಿರಬೇಕಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಯುಗಾದಿ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನೊಂದ ನವವಿವಾಹಿತೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ತರುವಂತೆ ಪೀಡಿಸಿ ಪತಿಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಗಾನವಿ ಪತಿ ನಂದಿತ್, ಅತ್ತೆ ಸಾವಿತ್ರಮ್ಮ, ಮಾವ ಚಂದ್ರೆಗೌಡ ನಿಂದ ಕೃತ್ಯ ಶಂಕೆ ವ್ಯಕ್ತವಾಗಿದೆ.
ನಂದೀಪ್ ಹಾಗೂ ಗಾನವಿಗೆ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ಮದುವೆಯಾದ ಬಳಿಕ ಅನೇಕ ಬಾರಿ ಹಣ ತರುವಂತೆ ನಂದಿತ್ ದೈಹಿಕ ಕಿರುಕುಳ ನೀಡಿ ಪೀಡಿಸುತ್ತಿದ್ದ ಎನ್ನಲಾಗಿದೆ. ಮೃತ ಗಾನವಿ ತಂದೆ ಲೋಕಪ್ಪಗೌಡ ಇತ್ತೀಚೆಗಷ್ಟೇ 2 ಲಕ್ಷ ಹಣ ನೀಡಿದ್ದರು. ಆದರೂ ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದನಂತೆ. ಗಾನವಿ ತನ್ನ ಮೇಲೆ ಹಲ್ಲೆ ಮಾಡಿರುವ, ಬೈದಿರುವುದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಈ ರೀತಿ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ತಿಳಿದ ನಂತರ ಕೋಪಿತಗೊಂಡ ಗಂಡ ಗಾನವಿಗೆ ವಿಷ ಕುಡಿಸಿ ಕೊಲೆಗೈದಿದ್ದಾರೆ ಎಂದು ಗಾನವಿ ಕುಟುಂಬಸ್ಥರು ಆರೋಪಿಸಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲುವೆಗೆ ಬಿದ್ದು ಬಾಲಕ ಸಾವು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದ ಬಳಿ ಕಾಲುವೆಗೆ ಬಿದ್ದು ಬಾಲಕ ಮೃತಪಟ್ಟ ಘಟನೆ ನಡೆದಿದೆ. ರಿಜ್ವಾನ್ ಅಲ್ಲಾಭಕ್ಷ್ ತಾರಾಘರ(6) ಮೃತಪಟ್ಟ ಬಾಲಕ. ತಂದೆ ಅಲ್ಲಾಭಕ್ಷ್ ಜತೆ ಕಾಲುವೆ ಬಳಿ ತೆರಳಿದ್ದಾಗ ದುರ್ಘಟನೆ ನಡೆದಿದೆ. ಸ್ಥಳೀಯರ ಸಹಾಯದಿಂದ ಬಾಲಕನ ಮೃತ ದೇಹ ಹೊರ ತರಲಾಗಿದೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಇಲ್ಲಿ ನೋಡು ‘ಮಾರಾಯ’: ಮೈ ಆಟೋಗ್ರಾಫ್ ಚಿತ್ರದಲ್ಲಿ ಹೈಸ್ಕೂಲ್ ಹುಡುಗನಾಗಿದ್ದ ನಟ ಈಗ ಹೇಗಿದ್ದಾರೆ?
Crime News: ಎಲ್ಪಿಜಿ ಸಿಲಿಂಡರ್ ಡೆಲಿವರಿ ಸಿಬ್ಬಂದಿಯನ್ನು ಅಪಹರಿಸಿ 2 ಲಕ್ಷ ರೂ ವಸೂಲಿ ಮಾಡಿದ ಗ್ಯಾಂಗ್