ಮೈಸೂರು: ಹಾಲಿ, ಮಾಜಿ ಸಂಸದರ ನಡುವೆ ಶುರುವಾಯ್ತು ಪೈಪೋಟಿ? ಸಚಿವರ ಭೇಟಿ ಮಾಡಿದ ಪ್ರತಾಪ್ ಸಿಂಹ

ಮೈಸೂರಿನಲ್ಲಿ ಹಾಲಿ ಮತ್ತು ಮಾಜಿ ಸಂಸದರ ನಡುವೆ ಪೈಪೋಟಿ ಶುರುವಾಗಿದೆ. ಪ್ರತಾಪ್ ಸಿಂಹ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ರೈಲ್ವೆ ಸಚಿವ ವಿ.ಸೋಮಣ್ಣರಿಗೆ ಭೇಟಿ ಮಾಡಿ ಮನವಿ‌ ಮಾಡಿದ್ದಾರೆ. ಮಾಜಿ ಸಂಸದರ ನಡೆ ಕುತೂಹಲ ಮೂಡಿಸಿದೆ.

ಮೈಸೂರು: ಹಾಲಿ, ಮಾಜಿ ಸಂಸದರ ನಡುವೆ ಶುರುವಾಯ್ತು ಪೈಪೋಟಿ? ಸಚಿವರ ಭೇಟಿ ಮಾಡಿದ ಪ್ರತಾಪ್ ಸಿಂಹ
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರತಾಪ್ ಸಿಂಹ
Follow us
| Updated By: ಆಯೇಷಾ ಬಾನು

Updated on: Jun 27, 2024 | 10:30 AM

ಮೈಸೂರು, ಜೂನ್.27: ಮೈಸೂರಿನಲ್ಲಿ ಹಾಲಿ ಮತ್ತು ಮಾಜಿ ಸಂಸದರ ನಡುವೆ ಪೈಪೋಟಿ ಶುರುವಾಗಿದೆ. ಅಭಿವೃದ್ಧಿ ಕೆಲಸಕ್ಕಾಗಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಸಚಿವರಿಗೆ ಮನವಿ‌ ಮಾಡಿದ್ದಾರೆ. ಮಾಜಿ ಸಂಸದರಾದರೂ, ಪ್ರತಾಪ್ ಸಿಂಹ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ರೈಲ್ವೆ ಸಚಿವ ವಿ.ಸೋಮಣ್ಣರಿಗೆ (V Somanna) ಭೇಟಿ ಮಾಡಿ ಮನವಿ‌ ಮಾಡಿದ್ದಾರೆ.

ನಾವು ಸಂಸದರಾಗಿದ್ದ ಕಾಲದಲ್ಲಿ ಅನುಮೋದನೆ ಸಿಕ್ಕಿ, ಪ್ರಧಾನಿಯಿಂದ ಗುದ್ದಲಿ ಪೂಜೆ ನೆರವೇರಿದ್ದ ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಆರಂಭಿಸುವಂತೆ ದೆಹಲಿಯಲ್ಲಿ ಸಚಿವ ವಿ.ಸೋಮಣ್ಣರನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ. ಅದಷ್ಟೇ ಅಲ್ಲದೆ ಮೈಸೂರು ಮುಂಬೈ ನಡುವೆ ಹೊಸ ರೈಲು ಆರಂಭಿಸುವಂತೆಯು ಮನವಿ ಮಾಡಿದ್ದಾರೆ. ಒಂದೆಡೆ ಸಚಿವ ವಿ.ಸೋಮಣ್ಣರನ್ನು ಹಾಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೌಹಾರ್ದಯುತವಾಗಿ ಭೇಟಿ ಮಾಡಿದರೆ, ಇತ್ತ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕೂಡ ಭೇಟಿ ಮಾಡಿದ್ದಾರೆ. ಮಾಜಿ ಸಂಸದರ ನಡೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಹಾಲಿನ ದರ ಹೆಚ್ಚಳ ಪರಿಣಾಮ: ಕರ್ನಾಟಕದ ಹೋಟೆಲ್​​ಗಳಲ್ಲಿ ಏರಿಕೆಯಾಗುತ್ತಾ ಚಹಾ, ಕಾಫಿ ದರ?

ಮೈಸೂರು–ಕೊಡಗು ಸಂಸದರಾಗಿದ್ದಾಗ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದ ಪ್ರತಾಪ್ ಸಿಂಹ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆ ಟಿಕೆಟ್ ಕೈ ತಪ್ಪಿದೆ. ಬಿಜೆಪಿ ಹೈಕಮಾಂಡ್ ಹೊಸ ಮುಖ ಯದುವೀರ್ ಅವರಿಗೆ ಮಣೆ ಹಾಕಿದ್ದು ಯದುವೀರ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದರೆ ಮಾಜಿ ಸಂಸದ ಪ್ರತಾಪ್ ಸಿಂಹ ಟಿಕೆಟ್ ಸಿಗದೆ ಸಂಸದ ಸ್ಥಾನ ಕೈ ತಪ್ಪಿದ್ದರೂ ತಮ್ಮ ಕ್ಷೇತ್ರದ ಮೇಲಿನ ಕಾಳಜಿಯನ್ನು ಸಚಿವರಿಗೆ ತಲುಪಿಸಿದ್ದಾರೆ. ಹಾಲಿ ಸಂಸದರೊಂದಿಗೆ ಚರ್ಚಿಸದೆ ಸ್ವತಃ ಅವರೇ ಸಚಿವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರದ ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದ್ದಾರೆ.

ಅಟ್ಟಿಕಾ ಗೋಲ್ಡ್​ ಕಂಪನಿಯ ಬಾಬು ಅರೆಸ್ಟ್

ಅಟ್ಟಿಕಾ ಗೋಲ್ಡ್ ಕಂಪನಿಯ ನಿರ್ದೇಶಕ ಅಟ್ಟಿಕಾ ಬಾಬುರನ್ನ ಬಂಧಿಸಲಾಗಿದೆ. ಕಳವು ಮಾಡಿದ್ದ ಚಿನ್ನಾಭರಣ ಸ್ವೀಕರಿಸಿದ ಆರೋಪದಡಿ ತುಮಕೂರು ಜಿಲ್ಲೆ ತುರುವೇಕೆರೆ ಸಿಪಿಐ ಲೋಹಿತ್ ನೇತೃತ್ವದಲ್ಲಿ ಅವರ ನಿವಾಸದಲ್ಲೇ ಬಂಧಿಸಲಾಗಿದೆ. ಸದ್ಯ ಅವರ ವಿರುದ್ಧ ಐಪಿಸಿ ಸೆಕ್ಷನ್​​ 454, 380, 411, 413ರಡಿ ಕೇಸ್​ ದಾಖಲು ಮಾಡಿ ತನಿಖೆ ನಡೆಸಲಾಗ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ