AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ; ಮೈಸೂರಿನಲ್ಲಿ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ

ಸರ್ಕಾರವೇ ಅಸಮರ್ಥ ಸರ್ಕಾರ. ಸಮಸ್ಯೆಗೆ ಪರಿಹಾರ ಕೊಡಲು ಸಾಧ್ಯವಾಗದ ಸರ್ಕಾರ. ಸಿಎಂ ಬರಿ ಬಾಯಿ ಮಾತಿನಲ್ಲಿ ಹೇಳುತ್ತಾರೆ. ದೆಹಲಿ ಆರ್​ಎಸ್​ಎಸ್​ ಮುಖಂಡರಿಗೆ ತೋರಿಸುವುದಲ್ಲ. ನೀವು ಯಾರನ್ನೋ ಮೆಚ್ಚಿಸಲು ಸಿಎಂ ಅಲ್ಲ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ; ಮೈಸೂರಿನಲ್ಲಿ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
TV9 Web
| Updated By: sandhya thejappa|

Updated on:Apr 21, 2022 | 12:48 PM

Share

ಮೈಸೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕಾರಣ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆ ನೀಡಿದ್ದಾರೆ. ಮಾತೆತ್ತಿದ್ರೆ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತಾರೆ. ನಾನು ಜಾತಿ ಬಳಸಿ ಅಧಿಕಾರ ಮಾಡಲಿಲ್ಲ. ಭ್ರಷ್ಟಾಚಾರದ ಬಗ್ಗೆ ಸುಳ್ಳಿನ ರಾಮಯ್ಯ ಮಾತನಾಡುತ್ತಾರೆ. ಅರ್ಕಾವತಿ ಡೀಲ್ ಏನಾಯ್ತು? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, 2008ರಲ್ಲಿ ಸಿಎಂ ಜೊತೆ ಒಟ್ಟಿಗೆ ಮಾತನಾಡಿಕೊಂಡು ಬಂದರು. ಒಂದೇ ಹೆಲಿಕಾಪ್ಟರ್​ನಲ್ಲಿ ಬಂದಾಗ ಏನು ಮಾತನಾಡಿದರು. ಆಗ ನೀವು ಬಿಜೆಪಿ ಬಿ ಟೀಂ ಆಗಿರಲಿಲ್ಲವಾ? ಎಂದು ಕೇಳಿದರು.

ಸರ್ಕಾರವೇ ಅಸಮರ್ಥ ಸರ್ಕಾರ. ಸಮಸ್ಯೆಗೆ ಪರಿಹಾರ ಕೊಡಲು ಸಾಧ್ಯವಾಗದ ಸರ್ಕಾರ. ಸಿಎಂ ಬರಿ ಬಾಯಿ ಮಾತಿನಲ್ಲಿ ಹೇಳುತ್ತಾರೆ. ದೆಹಲಿ ಆರ್​ಎಸ್​ಎಸ್​ ಮುಖಂಡರಿಗೆ ತೋರಿಸುವುದಲ್ಲ. ನೀವು ಯಾರನ್ನೋ ಮೆಚ್ಚಿಸಲು ಸಿಎಂ ಅಲ್ಲ. ಜನರನ್ನು ಮೆಚ್ಚಿಸಲು ನೀವು ಅಧಿಕಾರ ಮಾಡಿ ಎಂದು ಮಾತನಾಡಿದ ಕುಮಾರಸ್ವಾಮಿ, ಆಜಾನ್ ಡೆಡ್​ಲೈನ್​ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಅವರ ನಿರ್ದೇಶನದಂತೆ ನೀವು ಅಧಿಕಾರ ಮಾಡುತ್ತಿದ್ದೀರ. ನನಗೆ ಈ ಬಗ್ಗೆ ಮಾತನಾಡಬೇಡಿ ಅಂತಾ ಹೇಳಿದ್ದಾರೆ. ಆದರೆ ನಾನು ಈ ವಿಚಾರವಾಗಿ ಮಾತನಾಡಿಯೇ ತೀರುತ್ತೇನೆ. ನನಗೆ ಚುನಾವಣೆ ಮುಖ್ಯವಲ್ಲ ಜನರ ಹಿತ ಮುಖ್ಯ ಎಂದರು.

ಇದೇ ವೇಳೆ ಹುಬ್ಬಳ್ಳಿ ಗಲಭೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗಲಭೆ ಮಾಡಿದವರ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಲಿ. ಗಲಭೆಕೋರರ ಮನೆಯನ್ನ ಬುಲ್ಡೋಜ್ ಮಾಡಿದರೆ ಲಾಭವಿಲ್ಲ. ಸಂಪತ್ತು ಲೂಟಿ, ಬೆಂಕಿ ಹಚ್ಚುವವರ ವಿರುದ್ಧ ಕಾರ್ಯಾಚರಣೆ ಮಾಡಿ ಎಂದು ಹೇಳಿದರು.

ಬಿಜೆಪಿ ಸರ್ಕಾರಕ್ಕೆ ನಾನು ಸರ್ಟಿಫಿಕೇಟ್ ಕೊಟ್ಟಿದ್ದೀನಾ?- ಕುಮಾರಸ್ವಾಮಿ: ಬಿಜೆಪಿ ವಿರುದ್ಧ ಹೆಚ್​ಡಿಕೆ ಸಾಫ್ಟ್ ಕಾರ್ನರ್ ಎಂಬ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಕುಮಾರಸ್ವಾಮಿ, ನಿಮ್ಮ ನಾಲಿಗೆಯಲ್ಲಿ ಮೂಳೆ ಇದೆಯಾ? 10 ನಿಮಿಷದಲ್ಲಿ ಸತ್ಯವನ್ನು ಜನರ ಮುಂದೆ ಇಡಬಹುದು. ಬಿಜೆಪಿ ಸರ್ಕಾರಕ್ಕೆ ನಾನು ಸರ್ಟಿಫಿಕೇಟ್ ಕೊಟ್ಟಿದ್ದೀನಾ? ನಾನು ದಾಖಲೆ ಇಟ್ಟುಕೊಂಡು ಮಾತನಾಡುವವನು. ನನ್ನ ಹೋರಾಟದಿಂದ ಯಡಿಯೂರಪ್ಪ ಬಿಜೆಪಿ ಬಿಟ್ಟರು. ಬಿಎಸ್​ವೈ ಬಿಜೆಪಿ ಬಿಟ್ಟ ಲಾಭದಿಂದ ಸಿದ್ದರಾಮಯ್ಯ ಸಿಎಂ ಆದ್ರು. ಸಿದ್ದರಾಮಯ್ಯ ಸಂತೆ ಭಾಷಣ ಮಾಡಿ ಸಿಎಂ ಆದರು ಎಂದು ಹೇಳಿದರು.

ಕಾಂಗ್ರೆಸ್‌ನವರದ್ದು ವೈಯಕ್ತಿಕವಾದ ಹೋರಾಟ: ಕಾಂಗ್ರೆಸ್ ಅವರು ಕಾಂಪಿಟೇಷನ್‌ನಲ್ಲಿ ಹಣದ ನೆರವು ಮಾಡುತ್ತಿದ್ದಾರೆ. ಅವರ ಸಹಾಯಕ್ಕೆ ಅಭಿನಂದನೆ.  ಈಶ್ವರಪ್ಪ ಸಾವಿಗೆ ನೇರ ಕಾರಣ ಅನ್ನೋ ದಾಖಲೆ ಕೊಟ್ಟು ಒತ್ತಾಯಿಸಿ. ಕಲ್ಲಪ್ಪ ಹಂಡಿಭಾಗ್ ಮೃತಪಟ್ಟಾಗ ನಾನು ಆತನ ಪರ ಹೋರಾಟ ಮಾಡಿದೆ. ಆಗ ನಾನು ರಾಜಕೀಯ ಮಾಡಲಿಲ್ಲ. ಅದು ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಅಲ್ಲವಾ? ಕಲ್ಲಪ್ಪ ಹಂಡಿಭಾಗ ಸಾಯಲು ಬಿಜೆಪಿ ಕಾರಣ. ಡಿವೈಎಸ್‌ಪಿ ಆತ್ಮಹತ್ಯೆಗೆ ಸಿದ್ದರಾಮಯ್ಯ ಅರೆಸ್ಟ್ ಮಾಡಿ ಅಂದವಾ? ಎಲ್ಲದರಲ್ಲೂ ರಾಜಕಾರಣ ಮಾಡಬಾರದು. ದ್ವೇಷವಿದ್ದರೆ ಅದು ಬೇರೆ. ಒಂದು ವೇಳೆ ಜೈಲಿಗೆ ಹೋಗಿ ಬಂದ ಮೇಲೆ ನಿರಪರಾಧಿ ಅಂದರೆ ಏನು ಮಾಡುವುದು. ದಾಖಲೆ ಇದ್ದರೆ ಜೈಲಿಗೆ ಕಳುಹಿಸಿ. ಕಾಂಗ್ರೆಸ್‌ನವರದ್ದು ವೈಯಕ್ತಿಕವಾದ ಹೋರಾಟ. ಸರ್ಕಾರ ಐದು ನಿಮಿಷದಲ್ಲಿ ಇದನ್ನು ಕ್ಲಿಯರ್ ಮಾಡಬಹುದು. ಪಾರದರ್ಶಕತೆ ಇದ್ದರೆ ಎಲ್ಲವನ್ನು ಜನರ ಮುಂದೆ ಇಡಬಹುದು ಅಂತ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಈಶ್ಚರಪ್ಪ ಬದಲು ಕುಮಾರಸ್ವಾಮಿಯನ್ನ ಬಂಧಿಸಬೇಕಾ? ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನನ್ನನ್ನ ಜೈಲಿಗೆ ಕಳುಹಿಸಲು ಸಿದ್ದರಾಮಯ್ಯ ಪ್ರಯತ್ನಿಸಿದ್ದರು. ಸಿದ್ದರಾಮಯ್ಯ ಮಹಾನ್ ನಾಯಕ. ಹುಟ್ಟಿದಾಗಿನಿಂದಲೂ ಜಾತ್ಯಾತೀತ ಶಕ್ತಿಗಳನ್ನು ಬೆಳೆಸಿದ್ರಾ? ಸಿದ್ದರಾಮಯ್ಯ ಜಾತ್ಯಾತೀತ ಶಕ್ತಿಗಳನ್ನ ಬೆಳೆಸಿದ್ದಾರಾ? ನಾನು, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಲಾಯರ್ ಅಲ್ಲ. ಈಶ್ವರಪ್ಪ ಮೇಲೆ ನನಗೆ ಸಾಫ್ಟ್ ಕಾರ್ನರ್ ಇಲ್ಲ ಎಂದು ತಿಳಿಸಿದರು.

ಬೆಂಗಳೂರಿನ ಅಕ್ರಮ ಕಟ್ಟಡಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಬಿಜೆಪಿಯವರು ಮೋದಿಯನ್ನ ತೆರವುಗೊಳಿಸಲು ಸಿದ್ಧರಿದ್ದಾರಾ? ನೈಸ್‌ ಸಂಸ್ಥೆಗೆ ರೆಡ್ ಕಾರ್ಪೆಟ್ ಹಾಕಿ ಭೂಮಿ ನೀಡಿದ್ದೀರಿ. ನೈಸ್​ಗೆ 100 ಕೋಟಿ ರೂ. ಕೊಟ್ಟು ಸರ್ಕಾರದ ಭೂಮಿ ಖರೀದಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸಿದ್ದರಾಮಯ್ಯಗೆ ಬಿಜೆಪಿಯ ಭಯವಿಲ್ಲ, ನಾನಂದ್ರೆ ಭಯ: ಸಿದ್ದರಾಮಯ್ಯಗೆ ನನ್ನ ಭಯ ಕಾಡುತ್ತಿದೆ. ಭಯದಿಂದ ಸಿದ್ದರಾಮಯ್ಯ ನನ್ನನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಸಿದ್ದರಾಮಯ್ಯಗೆ ಬಿಜೆಪಿಯ ಭಯವಿಲ್ಲ, ನಾನಂದ್ರೆ ಭಯ. ನಾನು ಅಧಿಕಾರಕ್ಕೆ ಬಂದುಬಿಡುತ್ತೇನೆ ಎಂಬ ಭಯ ಕಾಡುತ್ತಿದೆ. 2006ರಿಂದಲೂ ಸಿದ್ದರಾಮಯ್ಯಾಗೆ ನನ್ನ ಭಯ ಶುರುವಾಗಿದೆ ಅಂತ ಹೇಳಿದರು.

ಇದನ್ನೂ ಓದಿ

ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಹಾದಿಯೇ ತೋರಿದ ಹಾದಿ: ಈ ‘ಅರಸು’ ಆಳಾಗಿ ದುಡಿಯಲು ಸಿದ್ಧನಿದ್ದಾನೆ

Published On - 10:54 am, Thu, 21 April 22