ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ, ಫ್ರೆಂಡ್ ಮನೆಯಲ್ಲಿ ಪೂಜೆ ಸಮಾರಂಭ, ಸ್ನೇಹಿತೆಗೆ ಒಂದೊಳ್ಳೆ ಗಿಫ್ಟ್ ಕೊಡಬೇಕು, ಮೊದಲ ತಿಂಗಳ ಸಂಬಳ, ಹಬ್ಬ ಹರಿ ದಿನಗಳಲ್ಲಿ ನಮಗೆಲ್ಲ ಮೊದಲು ನೆನಪಾಗುವುದೇ ಮೈಸೂರು ರೇಷ್ಮೆ ಸೀರೆ. ಭಾರತೀಯ ಪರಂಪರೆಯಲ್ಲಿ ರೇಷ್ಮೆ ಸೀರೆಗೆ ಅದರದೇ ಆದ ಮಹತ್ವವಿದೆ. ಭಾರತೀಯ ಸಂಸ್ಕೃತಿ, ಸಂಪ್ರದಾಯದಲ್ಲಿ ಸೀರೆ ಉಡುಗೆಗೆ ಅಗ್ರ ಸ್ಥಾನ ನೀಡಲಾಗಿದೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಯಾರಾಗುವ ರೇಷ್ಮೆ ಸೀರೆ ಹೆಚ್ಚಿನ ಜನ ಪ್ರಿಯತೆಯನ್ನು ಗಳಿಸಿದೆ. ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿರುವ ಅರಮನೆ ನಗರಿಗೆ ಭೇಟಿ ನೀಡುವ ವಿದೇಶಿಗರು ಮೈಸೂರು ಸಿಲ್ಕ್ ಸೀರೆಯ ಮಹತ್ವವನ್ನು ಅರಿತು ಖರೀದಿಸಿ ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಆದರೆ ನಿಮಗೆ ಗೊತ್ತಾ ನಿಮ್ಮ ಅಚ್ಚುಮೆಚ್ಚಿನ ಈ ರೇಷ್ಮೆ ಸೀರೆ ಮೈಸೂರಿಗೆ ಪರಿಚಯಿಸಿದ್ದು ಯಾರು? ಮೈಸೂರು ರೇಷ್ಮೆ ಸೀರೆ ಉದ್ಯಮ ಆರಂಭವಾಗಿದ್ದು ಹೇಗೆ ಅಂತಾ? ಬನ್ನಿ ಈ ಆರ್ಟಿಕಲ್ ಮೂಲಕ ತಿಳಿದುಕೊಳ್ಳಿ. ಸೀರೆ ನಮ್ಮ ಸಂಸ್ಕೃತಿಯ ಪ್ರತೀಕ. ಅನಾದಿ ಕಾಲದಿಂದಲೂ ಮಹಿಳೆಯರ ಪ್ರಮುಖ ಉಡುಗೆ. ನಮ್ಮ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಗಳ ಪ್ರಭಾವ ಬಿದ್ದರೂ ಸೀರೆ ಮೇಲಿನ ಗೌರವ, ವ್ಯಾಮೋಹ ಕಿಂಚಿತ್ತೂ ಕಡಿಮೆ ಆಗಿಲ್ಲ. ಈಗ ವಿದೇಶಿ ಮಹಿಳೆಯರಿಗೂ ಸೀರೆ ಮೇಲೆ ಮೋಹ ಹೆಚ್ಚಾಗಿದೆ. ಅಷ್ಟರಮಟ್ಟಿಗೆ ರೇಷ್ಮೆ ಸೀರೆಗಳು ಹವಾ ಸೃಷ್ಟಿಸಿವೆ. ಕರ್ನಾಟಕದಲ್ಲಿ ಉಡುಪಿ ಸೀರೆ, ಮೊಳಕಾಲ್ಮೂರು ಸೀರೆ, ಕಾಂಜೀವರಂ, ಬನಾರಸ್, ಇಳಕಲ್, ಧಮಾವರಂ, ಕೇರಳ ಕಾಟನ್, ಗಾರ್ಡನ್ ಸಿಲ್ಕ್, ಪ್ಲೇನ್, ಸಿಂಥೆಟಿಕ್, ಡಿಸೈನರ್, ಪಾಲಿಸ್ಟರ್, ಲೈಟ್ವೇಟ್, ಡಬಲ್ಷೇಡ್ ಹೀಗೆ ಸಾವಿರಾರು ಬಗೆಯ ರೇಷ್ಮೆ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ ಕನ್ನಡಿಗರಿಗೆ ಮಾತ್ರ...
Published On - 2:06 pm, Thu, 16 May 24