ಹತ್ತಾರು ವರ್ಷದಿಂದ ಕಾಟನ್‌ವುಡ್ ಮರದಲ್ಲೇ ನೂರಾರು ಜೇನುಗೂಡು ಕಟ್ಟುತ್ತಿದೆ! ಅದರ ವಿಶೇಷ ಮಾಹಿತಿ ಇಲ್ಲಿದೆ

| Updated By: ಸಾಧು ಶ್ರೀನಾಥ್​

Updated on: May 20, 2024 | 10:38 AM

ಒಂದೇ ಮರದಲ್ಲಿ ನೂರಾರು ಜೇನುಗೂಡುಗಳು... ಅಷ್ಟೊಂದು ಜೇನು ನೊಣಗಳಿರುವ ಗೂಡುಗಳನ್ನ ನೋಡಿದ್ರೆ ಎಂತಹವರಿಗಾದ್ರು ಎದೆ ಝಲ್ಲೆನ್ನುತ್ತೆ. ಇಷ್ಟೊಂದು ಜೇನುಗಳು ಒಮ್ಮೆಲೆ ದಾಳಿ ಮಾಡಿಬಿಟ್ರೆ ಗತಿಯೇನು ಅಂತ ಅನಿಸಿ ಗಡಗಡ ಆಗಿಬಿಡುತ್ತೆ. ಆದ್ರೆ‌ ಈ ಜೇನು ನೊಣಗಳು ಮಾತ್ರ ಯಾರಿಗೂ ಅಪಾಯವನ್ನು ಮಾಡಿಲ್ಲ. ಹತ್ತಾರು ವರ್ಷಗಳಿಂದ ಒಂದೇ ಮರದಲ್ಲಿ ನೂರಾರು ಗೂಡು ಕಟ್ಟಿವೆ. ಯಾವೂರಲ್ಲಿ?

ಹತ್ತಾರು ವರ್ಷದಿಂದ ಕಾಟನ್‌ವುಡ್ ಮರದಲ್ಲೇ ನೂರಾರು ಜೇನುಗೂಡು ಕಟ್ಟುತ್ತಿದೆ! ಅದರ ವಿಶೇಷ ಮಾಹಿತಿ ಇಲ್ಲಿದೆ
ಹತ್ತಾರು ವರ್ಷದಿಂದ ಕಾಟನ್‌ವುಡ್ ಮರದಲ್ಲೇ ನೂರಾರು ಜೇನುಗೂಡು ಕಟ್ಟುತ್ತಿದೆ!
Follow us on

ಸಾಂಸ್ಕೃತಿಕ ನಗರಿ ಮೈಸೂರಿನ‌ ಸೌಂದರ್ಯಕ್ಕೆ ಪ್ರವಾಸಿಗರು ಮನಸೋತಿದ್ದಾರೆ. ನಗರದ ಸೌಂದರ್ಯಕ್ಕೆ ಕೇವಲ ಪ್ರವಾಸಿಗರು ಮಾತ್ರವಲ್ಲ ಜೇನುನೊಣಗಳು ಸಹ ಮಾರು ಹೋಗಿವೆ. ಕಳೆದ ಹಲವು ವರ್ಷಗಳಿಂದ ಮೈಸೂರಿನ ಆ ಮರವೊಂದರಲ್ಲಿ ನೂರಾರು ಜೇನುಗೂಡುಗಳು ಆಶ್ರಯ ಪಡೆದು ಅಚ್ಚರಿ ಮೂಡಿಸಿವೆ.

ಒಂದೇ ಮರದಲ್ಲಿ ನೂರಾರು ಜೇನುಗೂಡುಗಳು… ಅಷ್ಟೊಂದು ಜೇನು ನೊಣಗಳಿರುವ ಗೂಡನ್ನ ನೋಡಿದ್ರೆ ಎಂತವರಿಗಾದ್ರು ಒಂದು ಕ್ಷಣ ಎದೆ ನಡುಗಿಸುತ್ತೆ. ಇಷ್ಟೊಂದು ಜೇನುಗಳು ಒಮ್ಮೆಲೆ ದಾಳಿ ಮಾಡಿದ್ರೆ ಏನು ಗತಿ ಅಂತ ಅನಿಸಿಬಿಟ್ಟು ಗಡಗಡ ಅನಿಸುತ್ತೆ. ಆದ್ರೆ‌ ಈ ಜೇನು ನೊಣಗಳು ಮಾತ್ರ ಯಾರಿಗೂ ಅಪಾಯವನ್ನು ಮಾಡಿಲ್ಲ. ಹತ್ತಾರು ವರ್ಷಗಳಿಂದ ಒಂದೇ ಮರದಲ್ಲಿ ನೂರಾರು ಗೂಡು ಕಟ್ಟುವ ಜೇನು ನೊಣಗಳು ಯಾರಿಗೂ ಅಪಾಯ ಮಾಡಿಲ್ಲ. ಇದು ಅಚ್ಚರಿ ಆದರೂ ಸತ್ಯ.

ಈ ದೃಶ್ಯ ಸಿಗೋದು ಮೈಸೂರಿನ ಹೃದಯ ಭಾಗದ‌ ಹಾರ್ಡಿಂಗ್ ವೃತ್ತದ ಬಳಿ ಇರುವ ತೋಟಗಾರಿಕಾ ಇಲಾಖೆಯ ಸಸ್ಯಕ್ಷೇತ್ರದಲ್ಲಿ. ಸಸ್ಯ ಕ್ಷೇತ್ರದ ಕಾಡು ಹತ್ತಿ ಮರ ಜೇನುನೊಣಗಳಿಗೆ ಅಚ್ಚುಮೆಚ್ಚಿನ ಹಾಗೂ ಸುರಕ್ಷತೆಯ ತಾಣವಾಗಿ ಮಾರ್ಪಟ್ಟಿದೆ. ಆ ಕಾರಣದಿಂದಲೇ ೫-೬ ದಶಕಗಳಿಂದ ಅಜ್ಞಾತ ಸ್ಥಳದಿಂದ ತಂಡೋಪತಂಡವಾಗಿ ಬಂದು ಸಂತಾನೋತ್ಪತ್ತಿ ಮಾಡಿಕೊಂಡು ೬ ತಿಂಗಳ ನಂತರ ವಾಪಸ್ಸಾಗುತ್ತಿವೆ.

 

ಮನಷ್ಯರಂತೆ ಜೇನುನೊಣಗಳು ಪೂರ್ವಜರ ಮಾರ್ಗದರ್ಶನದಂತೆ ಆಯ್ದ ಕೆಲವೇ ಕೆಲವು ಮರಗಳಲ್ಲಿ ಪ್ರತಿವರ್ಷವೂ ಗೂಡು ಕಟ್ಟುತ್ತಿರುವುದು ಸ್ಥಳೀಯರಲ್ಲಿ ಅಚ್ಚರಿಯುಂಟು ಮಾಡಿದೆ. ತೋಟಗಾರಿಕಾ ಇಲಾಖೆಗೆ ಸೇರಿದ ಜಾಗದಲ್ಲಿ ಹಲವು ಮರಗಳಿದ್ದರೂ ಜೇನುನೊಣಗಳು ಮಾತ್ರ ಕಾಟನ್‌ವುಡ್ ಮರವನ್ನೇ ಪ್ರತಿ ವರ್ಷವೂ ಆಯ್ಕೆ ಮಾಡಿಕೊಳ್ಳುತ್ತಿರುವುದು ವಿಶೇಷ.

Also Read: ಸರ್ಕಾರದಲ್ಲಿ ಹಣವಿಲ್ಲ ಅಂತಾ ಕೆಲಸ ನೀಡದ ಪಿಡಿಓ: ಬೆಳ್ಳಂಬೆಳಗ್ಗೆ ರೊಚ್ಚಿಗೆದ್ದ ಜನ್ರಿಂದ ಪ್ರತಿಭಟನೆ, ಆಕ್ರೋಶ

ಸುಮಾರು 40-50 ಅಡಿ ಎತ್ತರದ ಒಂದೇ ಮರದಲ್ಲಿ ೧೦೦ಕ್ಕೂ ಹೆಚ್ಚು ಜೇನುಗೂಡುಗಳು ಕಣ್ಣಿಗೆ ರಾಚುತ್ತವೆ. ಜೇನುನೊಣಗಳ ಕುಟುಂಬಗಳು ಹೆಚ್ಚಾಗುತ್ತಿದ್ದಂತೆ ಆ ಮರದ ಅಕ್ಕಪಕ್ಕವಿರುವ 2-3 ಮರಗಳಿಗೆ ಜೇನುಗೂಡುಗಳು ವಿಸ್ತರಿಸುತ್ತವೆ. ನೆನಪಿನ ಶಕ್ತಿಯಿಂದ ಪ್ರತಿವರ್ಷ ಒಂದೇ ಸ್ಥಳಕ್ಕೆ ಬಂದು, ಈ ಹಿಂದೆ ಗೂಡು ಕಟ್ಟಿದ್ದ ಮರವನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ಜೇನುಗಳು ತಮ್ಮ ನೆನಪಿನ ಶಕ್ತಿಯನ್ನು ತೋರ್ಪಡಿಸಿವೆ!

ಇದನ್ನ ಪ್ರತಿವರ್ಷ ನೋಡುತ್ತಿರುವ ಸ್ಥಳೀಯರಿಂದ ಹಿಡಿದ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಇಷ್ಟೊಂದು ಜನನಿಬಿಡ ಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿರುವ ಜೇನುನೊಣಗಳಲ್ಲಿ ಒಂದೆರಡು ನೊಣಗಳು ಆಕಸ್ಮಿಕವಾಗಿ ಕಚ್ಚಿದ್ದು ಹೊರತು ಪಡಿಸಿ ದೊಡ್ಡದಾಗಿ ಹಾನಿ ಮಾಡಿಲ್ಲ ಎನ್ನುತ್ತಾರೆ ನವೀನ್, ತೋಟಗಾರಿಕೆ‌ ಇಲಾಖೆ ಅಧಿಕಾರಿ.

ಇದನ್ನೂ ಓದಿ: ಲಾಲ್ ಬಾಗ್​ನಲ್ಲಿ ನೀರಿಲ್ಲದೆ ಒಣಗುತ್ತಿವೆ ಗಿಡಗಳು: ತೋಟಗಾರಿಕೆ ಇಲಾಖೆಗೂ ತಟ್ಟಿದ ನೀರಿನ ಬಿಕ್ಕಟ್ಟಿನ ಬಿಸಿ

ಒಟ್ಟಾರೆ, ಇಷ್ಟೊಂದು ಜೇನುನೊಣಗಳು ಒಂದೆಡೆ ಗೂಡುಕಟ್ಟಿ ಅಚ್ವರಿ ಮೂಡಿಸಿದೆ. ಇಂತಹ ಜೇನು ಕುಟುಂಬಗಳು ಮತ್ತಷ್ಟು ಹೆಚ್ಚಾದ್ರೆ ಅದು ರೈತರಿಗೂ ಅನುಕೂಲ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.