ಕಾಂಗ್ರೆಸ್ ಪ್ರತಿಭಟನೆ ವೇಳೆ ಹೈಡ್ರಾಮ; ಅರೆಸ್ಟ್​ ಮಾಡಿ ಎಂದರೂ ಮಾಡದ ಪೊಲೀಸರ ವಿರುದ್ದ ‘ಕೈ’ ನಾಯಕರ ಆಕ್ರೋಶ

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಇಂದು(ಶುಕ್ರವಾರ) ವಿರೋಧ ಪಕ್ಷ ಬಿಜೆಪಿ ಮೈಸೂರಿನ ಮುಡಾ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಬಿಜೆಪಿಯವರ ಪ್ರತಿಭಟನೆ ವಿರೋಧಿಸಿ ಕಾಂಗ್ರೆಸ್​ ಕೂಡ ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಕಾಂಗ್ರೆಸ್​ ನಾಯಕರು ಹೈಡ್ರಾಮ ಮಾಡಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ ವೇಳೆ ಹೈಡ್ರಾಮ; ಅರೆಸ್ಟ್​ ಮಾಡಿ ಎಂದರೂ ಮಾಡದ ಪೊಲೀಸರ ವಿರುದ್ದ ‘ಕೈ’ ನಾಯಕರ ಆಕ್ರೋಶ
ಕಾಂಗ್ರೆಸ್ ಪ್ರತಿಭಟನೆ ವೇಳೆ ಹೈಡ್ರಾಮ
Edited By:

Updated on: Jul 12, 2024 | 2:51 PM

ಮೈಸೂರು, ಜು.12: ಮೈಸೂರಿ(Mysore)ನ ಮುಡಾ ಕಚೇರಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಇಂದು(ಶುಕ್ರವಾರ) ವಿಪಕ್ಷ ಬಿಜೆಪಿ(BJP) ಮುಡಾ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ಬಿಜೆಪಿ ಪ್ರತಿಭಟನೆಯನ್ನು ವಿರೋಧಿಸಿ ಕಾಂಗ್ರೆಸ್(Congress) ಕಾರ್ಯಕರ್ತರೂ ಕೂಡ ಪ್ರತಿಭಟನೆ ನಡೆಸಿದ್ದರು. ಆದರೆ, ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಲಿಲ್ಲ. ಈ ಹಿನ್ನಲೆ ನಮ್ಮನ್ನೂ ಬಂಧಿಸಿ ಎಂದು ಕೈ ಕಾರ್ಯಕರ್ತರು ಹೈಡ್ರಾಮ ಮಾಡಿದ್ದಾರೆ.

ನಮ್ಮನ್ನು ಅರೆಸ್ಟ್ ಮಾಡದೆ ಇನ್​ಸಲ್ಟ್ ಮಾಡಿದ್ದೀರಿ

‘ಬಿಜೆಪಿ ಕಾರ್ಯಕರ್ತರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಮುತ್ತಿಗೆ ಹಾಕಲು ಬಿಡದಿದ್ದಾಗ ತಮ್ಮನ್ನೂ ಅರೆಸ್ಟ್ ಮಾಡುವಂತೆ ಪಟ್ಟು ಹಿಡಿದಿದ್ದರು. ಇದೇ ವೇಳೆ ಮೈಸೂರು ಕಮಿಷನರೇಟ್ ಪೊಲೀಸರ ವಿರುದ್ಧ ಕಾಂಗ್ರೆಸ್​ ಮುಖಂಡರು ಆಕ್ರೋಶ ಹೊರಹಾಕಿ, ನಮ್ಮನ್ನೂ ಬಂಧಿಸಿ, ನಮ್ಮನ್ನು ಅರೆಸ್ಟ್ ಮಾಡದೆ ನೀವು ಅವಮಾನ ಮಾಡಿದ್ದೀರಿ, ನಿಮ್ಮ ಕಮಿಷನರ್ ಎಲ್ಲಿ ಎಂದು ಡಿಸಿಪಿ ಜಾಹ್ನವಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​ ಆವಾಜ್ ಹಾಕಿದ್ದಾರೆ. ಆದರೂ ಪೊಲೀಸರು ಬಂಧಿಸಲು ಮುಂದಾಗಿಲ್ಲ.

ಇದನ್ನೂ ಓದಿ:ಮುಡಾ ಗೆಬ್ಬೆದ್ದು ಹೋಗಿದೆ, ನಮ್ಮಿಂದಲೂ ತಪ್ಪಾಗಿದೆ ಸರಿ ಮಾಡುತ್ತೇವೆ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಪ್ರತಿಭಟನ ಸ್ಥಳದಿಂದ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು

ಇನ್ನು ಎಲ್ಲಾ ಹೈಡ್ರಾಮಾ ಬಳಿಕ ಪ್ರತಿಭಟನೆ ಕೈಬಿಡುವಂತೆ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್ ಮೂರ್ತಿ ಸೂಚನೆ ನೀಡಿದರು. ಅವರ ಸೂಚನೆ ಮೇರೆಗೆ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಕೈಬಿಟ್ಟು ಮುಡಾ ಕಚೇರಿಯಿಂದ ತೆರಳಿದ್ದಾರೆ.

ಪ್ರತಿಭಟನೆಗೆ ತೆರಳಿದ್ದ ಬಿಜೆಪಿ ನಾಯಕರನ್ನ ಬೆಂಗಳೂರಿನಲ್ಲೇ ತಡೆದಿದ್ದ ಪೊಲೀಸರು

ಇನ್ನು ಮುಡಾ ಹಗರಣ ವಿರೋಧಿಸಿ ಮೈಸೂರಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಗೆ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಪಕ್ಷದ ಸಂಸದರು, ಶಾಸಕರನ್ನ ಬೆಂಗಳೂರಿನಲ್ಲೇ ಬಂಧಿಸಲಾಗಿತ್ತು. ಈ ಹಿನ್ನಲೆ ಕಿಡಿಕಾರಿದ ಬಿಜೆಪಿ, ‘ಮಾತಾಡುವಾಗ ಸಂವಿಧಾನ ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಬಡಾಯಿಕೊಚ್ಚಿಕೊಳ್ಳುವ ಸಿದ್ದರಾಮಯ್ಯನವರು ವಿಪಕ್ಷಗಳ ಹೋರಾಟ ಹತ್ತಿಕ್ಕುತ್ತಿದ್ದಾರೆ ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ