Chamundi Hill: ಚಾಮುಂಡಿ ಬೆಟ್ಟದಲ್ಲಿ ಅನೈತಿಕ, ಅಕ್ರಮ ಚಟುವಟಿಕೆ ನಡೆಸುವ ಪ್ರವಾಸಿಗರಿಗೆ ಎಚ್ಚರಿಕೆ ಮತ್ತು ದಂಡ ಪ್ರಯೋಗ
ಇದರಲ್ಲಿ ಬೆಟ್ಟಕ್ಕೆ ಹೋಗುವ ಮಧ್ಯದಲ್ಲಿ ವಾಹನ ನಿಲ್ಲಿಸಿಕೊಂಡು ಅಡ್ಡಾಡುತ್ತಿದ್ದ 62 ಪ್ರಕರಣದಿಂದ 62 ಸಾವಿರ ರೂ, ಅನಧಿಕೃತ ಅರಣ್ಯ ಪ್ರವೇಶ ಪ್ರಕರಣಗಳಲ್ಲಿ 88 ಪ್ರಕರಣ ಪತ್ತೆ ಮಾಡಿ 44 ಸಾವಿರ ರೂ., ಬೆಟ್ಟದಲ್ಲಿ ತ್ಯಾಜ್ಯ ಬಿಸಾಡಿರುವ ಒಂದು ಪ್ರಕರಣದಲ್ಲಿ 500 ರೂ. ಹಾಗೂ ಅನುಚಿತ ವರ್ತನೆ ಹಾಗೂ ವನ್ಯಜೀವಿಗಳಿಗೆ ಹಾನಿ ಮಾಡಿದ ಒಂದು ಕೇಸಿನಲ್ಲಿ ಒಂದು ಸಾವಿರ ರೂ. ದಂಡವನ್ನು ವಿಧಿಸಲಾಗಿದೆ.

ತಾಯಿ ಚಾಮುಂಡೇಶ್ವರಿ ದರ್ಶನಕ್ಕಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ (Chamundi Hill) ದೇಶದ ನಾನಾ ಮೂಲೆಗಳಿಂದ ಬರುತ್ತಾರೆ. ಆದರೆ ಅನೇಕ ಪ್ರವಾಸಿಗರು ( tourist) ಇಲ್ಲಿ ಬಹಳ ಕಾನೂನುಬಾಹಿರ ಚಟುವಟಿಕೆ (Illegal activities) ನಡೆಸುತ್ತಾರೆ. ಇದೀಗ ಅರಣ್ಯ ಇಲಾಖೆ (mysore forest departmnent) ಅದಕ್ಕೆಲ್ಲ ಬ್ರೇಕ್ ಹಾಕಿದ್ದು, ಕಾನೂನುಬಾಹಿರ ಚಟುವಟಿಕೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲು ಶುರು ಮಾಡಿದೆ. ಐತಿಹಾಸಿಕ ಮತ್ತು ಪೌರಾಣಿಕ ಚಾಮುಂಡಿ ಬೆಟ್ಟ… ಈ ಧಾರ್ಮಿಕ ಸ್ಥಳ ಮೀಸಲು ಅರಣ್ಯ ಪ್ರದೇಶಕ್ಕೆ ಒಳಪಡುತ್ತೆ. ಇದು ಸಾಕಷ್ಟು ವನ್ಯಜೀವಿಗಳಿಗೆ ಆಶ್ರಯದ ತಾಣವಾಗಿದೆ. ಆದ್ರೆ ಇತ್ತೀಚಿಗೆ ಬೆಟ್ಟದಲ್ಲಿ ಅಕ್ರಮ ಚಟುವಟಿಕೆ ನಡೆಯುವುದು ಹಾಗೂ ಕಸವನ್ನ ಎಲ್ಲೆಂದರಲ್ಲಿ ಬಿಸಾಡುವ ಅನೈತಿಕ ಪ್ರಸಂಗಗಳು ಹೆಚ್ಚಾಗಿವೆ. ಅದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಈಗಾಗಲೇ ಮುಂದಾಗಿದ್ದು, ಕಾನೂನು ಬಾಹಿರ ಚಟುವಟಿಕೆ ಮಾಡಿದವರ ವಿರುದ್ಧ ಬರೋಬ್ಬರಿ 290 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದೆ.
ಇದರಲ್ಲಿ 140 ಪ್ರಕರಣಗಳಿಗೆ ಶೂನ್ಯ ದಂಡ ವಿಧಿಸಲಾಗಿದೆ. ಮೊದಲಿಗೆ ಶೂನ್ಯದಂಡ ರಶೀದಿ ನೀಡಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ. ಬಳಿಕ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕಿ ಬರೋಬ್ಬರಿ 1,07,500 ರೂ ವಸೂಲಿ ಮಾಡಲಾಗಿದೆ. ದಂಡ ವಿಧಿಸುವ ಕೆಲಸವನ್ನ ಆಗಸ್ಟ್ ತಿಂಗಳ 7 ರಿಂದ ಪ್ರಾರಂಭ ಮಾಡಲಾಗಿತ್ತು. ಈ ವೇಳೆ ಮೊದಲ ಒಂದು ವಾರ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು. ಇದೀಗಾ ಅರಿವು ಮೂಡಿಸುವುದರ ಜೊತೆಗೆ ದಂಡ ಹಾಕಲಾಗುತ್ತೆ ಎಂಬ ಎಚ್ಚರಿಕೆಯ ಸೂಚನಾ ಫಲಕ ಅಳವಡಿಸಲಾಗಿದೆ. ಯಾರೆಲ್ಲ ನಿಯಮ ಉಲ್ಲಂಘನೆ ಮಾಡುತ್ತಾರೆ ಅಂತಹವರಿಗೆ ದಂಡ ಹಾಕಲಾಗುತ್ತಿದೆ.
ಇದರಲ್ಲಿ ಬೆಟ್ಟಕ್ಕೆ ಹೋಗುವ ಮಧ್ಯದಲ್ಲಿ ವಾಹನ ನಿಲ್ಲಿಸಿಕೊಂಡು ಅಡ್ಡಾಡುತ್ತಿದ್ದ 62 ಪ್ರಕರಣದಿಂದ 62 ಸಾವಿರ ರೂ, ಅನಧಿಕೃತ ಅರಣ್ಯ ಪ್ರವೇಶ ಪ್ರಕರಣಗಳಲ್ಲಿ 88 ಪ್ರಕರಣ ಪತ್ತೆ ಮಾಡಿ 44 ಸಾವಿರ ರೂ., ಬೆಟ್ಟದಲ್ಲಿ ತ್ಯಾಜ್ಯ ಬಿಸಾಡಿರುವ ಒಂದು ಪ್ರಕರಣದಲ್ಲಿ 500 ರೂ. ಹಾಗೂ ಅನುಚಿತ ವರ್ತನೆ ಹಾಗೂ ವನ್ಯಜೀವಿಗಳಿಗೆ ಹಾನಿ ಮಾಡಿದ ಒಂದು ಕೇಸಿನಲ್ಲಿ ಒಂದು ಸಾವಿರ ರೂ. ದಂಡವನ್ನು ವಿಧಿಸಲಾಗಿದೆ.
Also read: ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆಗೆ 100 ಕೋಟಿ ಅನುದಾನ
ದಂಡದ ಮೊತ್ತ ವಿವರ: ಅರಣ್ಯದೊಳಗೆ ಕಸ ಎಸೆಯುವುದು- 500, ನೋ ಪಾರ್ಕಿಂಗ್- 1000, ಅನಧಿಕೃತ ಅರಣ್ಯ ಪ್ರವೇಶ- 500 ಮತ್ತು ವನ್ಯಜೀವಿಗಳಿಗೆ ಹಾನಿ/ ಅನುಚಿತ ವರ್ತನೆ- 1000 ರೂಪಾಯಿ.
ಒಟ್ಟಾರೆ, ಸದ್ಯ ದಂಡ ಹಾಕುವ ಮೂಲಕ ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳು ಹಾಗೂ ಬೆಟ್ಟವನ್ನ ಅನೈರ್ಮಲ್ಯಗೊಳಿಸುತ್ತಿದ್ದವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇನ್ನು ಮುಂದೆಯೂ ಕೂಡ ಕಾನೂನುಬಾಹಿರ ಚಟುವಟಿಕೆ ನಡೆಸಿದರೆ ಇದೇ ರೀತಿ ದಂಡ ತೆರಬೇಕಾಗುತ್ತದೆ ಎಚ್ಚರ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಮೈಸೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:34 am, Sun, 12 November 23