ಕರ್ನಾಟಕ ಮೊದಲ ಹೆಣ್ಣು ಮಕ್ಕಳ ಶಾಲೆ ನೆಲಸಮ; ಇತಿಹಾಸ ಪುಟ ಸೇರಿದ ಎನ್‌ಟಿಎಂಎಸ್ ಶಾಲೆ
ರಾತ್ರೋರಾತ್ರಿ ಎನ್‌ಟಿಎಂಸ್ ಶಾಲೆ ಕಟ್ಟಡ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿದ್ದ ಈ ಶಾಲೆ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕಾಗಿ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರವಾಗಿತ್ತು.
ಮೈಸೂರು: ಕರ್ನಾಟಕದ ಮೊದಲ ಹೆಣ್ಣುಮಕ್ಕಳ ಶಾಲೆಯಾಗಿದ್ದ ಎನ್‌ಟಿಎಂಸ್ ಶಾಲೆ ನೆಲಸಮಗೊಂಡಿದೆ. ಪೊಲೀಸ್ ಭದ್ರತೆಯಲ್ಲಿ ಸುಮಾರು 140 ವರ್ಷಗಳ ಹಳೆಯ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ನಡೆದಿದೆ. ರಾತ್ರೋರಾತ್ರಿ ಎನ್‌ಟಿಎಂಸ್ ಶಾಲೆ ಕಟ್ಟಡ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿದ್ದ ಈ ಶಾಲೆ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕಾಗಿ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರವಾಗಿತ್ತು. ಇದರ ನಡುವೆ ಶಾಲೆಯ ಜಾಗ ನೀಡುವುದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಹೈಕೋರ್ಟ್ ಆದೇಶ ತಂದು ಜಾಗ ತೆರವುಗೊಳಿಸಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಜಾಗ ತೆರವು ಮಾಡಲಾಗಿದೆ. ವಿವೇಕಾನಂದರ 150ನೇ ಜಯಂತಿ ಹಿನ್ನೆಲೆ ವಿವೇಕಾನಂದರ ಸವಿ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಕಳೆದ 15 ವರ್ಷಗಳಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಮೈಸೂರಿನ ಎನ್‍ಟಿಎಂ ಶಾಲೆ ಕಟ್ಟಡವನ್ನ ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಆ ಮೂಲಕ ಕರ್ನಾಟಕದ ಮೊದಲ ಬಾಲಕಿಯರ ಕನ್ನಡ ಶಾಲೆ ಇತಿಹಾಸದ ಪುಟ ಸೇರಿದೆ. ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಮೈಸೂರಿನ ಎನ್.ಎಸ್ ರಸ್ತೆಯಲ್ಲಿರುವ ಎನ್.ಟಿ.ಎಂ ಶಾಲೆ ಜಾಗವನ್ನ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡಿತ್ತು. ಇದನ್ನ ಪ್ರಶ್ನಿಸಿ ಕನ್ನಡ ಪರ ಹೋರಾಟಗಾರರು, ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ನಂತರ ಕೋರ್ಟ್ ರಾಮಕೃಷ್ಣ ಆಶ್ರಮದ ಪರ ತೀರ್ಪು ನೀಡಿತ್ತು. ಹೀಗಾಗಿ ಶಾಲೆಯಲ್ಲಿದ್ದ ವಿದ್ಯಾರ್ಥಿಗಳನ್ನು ಪಕ್ಕದ ಮಹಾರಾಣಿ ವಿದ್ಯಾಸಂಸ್ಥೆಗೆ ಶಿಫ್ಟ್ ಮಾಡಲಾಗಿತ್ತು. ನಂತರ ಪೀಠೋಪಕರಣಗಳನ್ನೂ ಸ್ಥಳಾಂತರ ಮಾಡಿ ಇದೀಗ ಕಟ್ಟಡವನ್ನ ಧರೆಗುರುಳಿಸಲಾಗಿದೆ.
ಈ ನಡುವೆ ಕಾರ್ಯಾಚರಣೆ ತಡೆಯಲು ಬಂದ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ಸದಸ್ಯರನ್ನು ವಶಕ್ಕೆ ಪಡೆಯಲಾಯಿತು. ನಮಗೆ ಕೋರ್ಟ್‌ನಲ್ಲಿ ಸೋಲಾಯಿತು ಹೀಗಾಗಿ ಜಾಗ ಆಶ್ರಮದ ಪಾಲಾಗಿದೆ. ಆದ್ರೆ ನಾಡಿನ ಮೊದಲ ಬಾಲಕಿಯರ ಕನ್ನಡ ಶಾಲೆ ಉಳಿಯಬೇಕೆಂಬ ಮೂಲ ಉದ್ದೇಶ ಈಡೇರಿದೆ. ಮಹಾರಾಣಿ ಕಾಲೇಜಿನಲ್ಲಿರುವ, 1889ರಲ್ಲಿ ನಿರ್ಮಾಣವಾದ ಕಟ್ಟಡಕ್ಕೆ ಮಕ್ಕಳನ್ನ ಶಿಫ್ಟ್ ಮಾಡಿದ್ದಾರೆ. ಆ ಮೂಲಕ ಎನ್.ಟಿ.ಎಂ ಶಾಲೆ ಉಳಿದಿದೆ. ಆದ್ರೆ ಐತಿಹಾಸಿಕ ಮೂಲ ಶಾಲೆಯನ್ನ ತೆರವುಗೊಳಿಸಿ ವಿವೇಕಾನಂದರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತಂದಂತಾಗಿದೆ ಅಂತಾ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾತ್ರಿ ಇಡೀ ಡಿಸಿಪಿ ಗೀತಾ ಪ್ರಸನ್ನ ಸಾರಥ್ಯದಲ್ಲಿ ಸುಮಾರು 250ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ 4 ಹಿಟಾಚಿ, 3 ಜೆಸಿಬಿಗಳಿಂದ ಕಟ್ಟಡ ತೆರವುಗೊಳಿಸಲಾಗಿದೆ. ಆದ್ರೆ, ಮೈಸೂರು ಅರಸರ ಸಾಮಾಜಿಕ ಕೊಡುಗೆಗೆ ಕನ್ನಡಿಯಂತಿದ್ದ ರಾಜ್ಯದ ಮೊದಲ ಬಾಲಕಿಯರ ಶಾಲೆ ಕಣ್ಮೆರೆಯಾಗಿದ್ದು ಮಾತ್ರ ವಿಪರ್ಯಾಸವೇ ಸರಿ.
ಇದನ್ನೂ ಓದಿ: ಮೃತ ಸ್ನೇಹಿನ ಹೆಂಡತಿಗೆ ಬಾಳು ಕೊಟ್ಟು ಮಾದರಿಯಾದ ವ್ಯಕ್ತಿ; ವಿಧವೆ ವರಿಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜನ
PKL 8: ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ 100ನೇ ಪಂದ್ಯದಲ್ಲಿ ಗೆದ್ದು ಬೀಗಿದ ಜೈಪುರ್ ಪಿಂಕ್ ಪ್ಯಾಂಥರ್ಸ್
Published On - 8:03 am, Tue, 8 February 22