ನಾನು ರೆಬೆಲ್​ ಅಲ್ಲ, ಲಾಯಲ್.. ನನ್ನ ಅಪ್ಪ-ಅಮ್ಮ ಅಡಿಕೆ ಮಂಡಿಯಲ್ಲಿ ಕೆಲಸ ಮಾಡ್ತಿದ್ರು, ನನ್ನನ್ನು ಈ ಪಕ್ಷ ಡಿಸಿಎಂ ಮಾಡಿದೆ: ಕೆ.ಎಸ್​. ಈಶ್ವರಪ್ಪ

ನಿಮ್ಮ ಸಚಿವ ಸ್ಥಾನ ಬದಲಾವಣೆಯಾದರೆ ಮುಂದಿನ ನಿರ್ಧಾರ ಏನು? ಎಂಬ ಮಾಧ್ಯಮದವರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಇದನ್ನ ತೀರ್ಮಾನ ಮಾಡೋಕೆ ನಾನ್ಯಾರು. ನಾನೊಬ್ಬ ಪಕ್ಷದ ಕಾರ್ಯಕರ್ತ ಅಷ್ಟೇ. ನಮ್ಮಪ್ಪ ಅಡಿಕೆ ಮಂಡಿ ಗುಮಾಸ್ತ. ನಮ್ಮಮ್ಮ ಅಡಿಕೆ ಮಂಡಿಯಲ್ಲಿ ಕೆಲಸ ಮಾಡೋಳು. ಆದ್ರೆ ಪಕ್ಷ ನನ್ನನ್ನ ಡಿಸಿಎಂ ತನಕ ಏರಿಸಿದೆ ಎಂದು ಹೇಳಿದ್ದಾರೆ.

ನಾನು ರೆಬೆಲ್​ ಅಲ್ಲ, ಲಾಯಲ್.. ನನ್ನ ಅಪ್ಪ-ಅಮ್ಮ ಅಡಿಕೆ ಮಂಡಿಯಲ್ಲಿ ಕೆಲಸ ಮಾಡ್ತಿದ್ರು, ನನ್ನನ್ನು ಈ ಪಕ್ಷ ಡಿಸಿಎಂ ಮಾಡಿದೆ: ಕೆ.ಎಸ್​. ಈಶ್ವರಪ್ಪ
ಕೆ.ಎಸ್ .ಈಶ್ವರಪ್ಪ
Follow us
Skanda
| Updated By: ಸಾಧು ಶ್ರೀನಾಥ್​

Updated on: Apr 02, 2021 | 2:11 PM

ಮೈಸೂರು: ಬಿ.ಎಸ್​.ಯಡಿಯೂರಪ್ಪ ಹಾಗೂ ಕೆ.ಎಸ್​.ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ವತಃ ಈಶ್ವರಪ್ಪನವರೇ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆಯಲ್ಲಿ, ನಿಮ್ಮ ಸಚಿವ ಸ್ಥಾನ ಬದಲಾವಣೆಯಾದರೆ ಮುಂದಿನ ನಿರ್ಧಾರ ಏನು? ಎಂಬ ಮಾಧ್ಯಮದವರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಇದನ್ನ ತೀರ್ಮಾನ ಮಾಡೋಕೆ ನಾನ್ಯಾರು. ನಾನೊಬ್ಬ ಪಕ್ಷದ ಕಾರ್ಯಕರ್ತ ಅಷ್ಟೇ. ನಮ್ಮಪ್ಪ ಅಡಿಕೆ ಮಂಡಿ ಗುಮಾಸ್ತ. ನಮ್ಮಮ್ಮ ಅಡಿಕೆ ಮಂಡಿಯಲ್ಲಿ ಕೆಲಸ ಮಾಡೋಳು. ಆದ್ರೆ ಪಕ್ಷ ನನ್ನನ್ನ ಡಿಸಿಎಂ ತನಕ ಏರಿಸಿದೆ. ಹಾಗಾಗಿ ಏನೇ ಇದ್ದರೂ ಅದನ್ನು ಪಕ್ಷವೇ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಬಿ.ಎಸ್​.ಯಡಿಯೂರಪ್ಪ ಅವರೊಂದಿಗಿನ ಮನಸ್ತಾಪ ವೈಯುಕ್ತಿಕವಾದುದಲ್ಲ ಆಡಳಿತಾತ್ಮಕವಾದದ್ದು ಎನ್ನುವ ಬಗ್ಗೆ ಸ್ಪಷ್ಟೀಕರಿಸಿದ ಅವರು, ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನವೇ ಇನ್ನೂ ಬಿಡುಗಡೆ ಆಗಿಲ್ಲ. ಅದು ಒಂದು ಕಡೆ ಇರಲಿ. ಇದು ಬೇಸಿಗೆ ಕಾಲ, ರಾಜ್ಯದಲ್ಲಿ ರಸ್ತೆಗಳು ಹಾಳಾಗಿವೆ. ಹೀಗಿರುವಾಗ ನಮ್ಮ ಗಮನಕ್ಕೆ ತರದೇ ಅನುದಾನ ಬಿಡುಗಡೆ ಮಾಡುವುದು ಎಷ್ಟು ಸಮಂಜಸ? ನಾನು ಈ ಬಗ್ಗೆ ಆರ್ಥಿಕ ಇಲಾಖೆಯ ಜತೆ ಮಾತನಾಡಿದ್ದೇನೆ. ಅವರು ತಮ್ಮಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ. ಇಷ್ಟಾದರೂ ನಾನು ಮುಖ್ಯಮಂತ್ರಿಗಳ ವಿರುದ್ಧ ರೆಬೆಲ್​ ಅಲ್ಲ, ಲಾಯಲ್​ ಎಂದು ತಮ್ಮ ನಿಷ್ಠೆಯ ಬಗ್ಗೆ ಹೇಳಿಕೊಂಡಿದ್ದಾರೆ.

ರಾಜ್ಯಪಾಲರಿಗೆ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡುತ್ತಾ, ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರ ಬರೆದಿರುವುದು ನಿಜ. ಪತ್ರ ಬರೆಯುವುದಕ್ಕೂ ಮುನ್ನ ಯಡಿಯೂರಪ್ಪ ಜತೆ ಚರ್ಚಿಸಿಲ್ಲ. ಹಾಗಂತ, ಅವರ ವಿರುದ್ಧ ಯಾರಿಗೂ ದೂರು ನೀಡಿಲ್ಲ. ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿಲ್ಲ. ಈಶ್ವರಪ್ಪ ಪತ್ರ ಬರೆದಿರುವುದು ತಪ್ಪು ಎಂದು ಅರುಣ್​ ಸಿಂಗ್​ ಹೇಳಿದ್ದಾರೆ. ಆದರೆ ಅದು ಅವರ ಅಭಿಪ್ರಾಯ. ನಾನು ಅವರೊಂದಿಗೆ ಚರ್ಚೆ ಮಾಡುತ್ತೇನೆ. ಆಡಳಿತ ವಿಚಾರವಾಗಿ ನಾನು ನೇರವಾಗಿ ಯಡಿಯೂರಪ್ಪ ಅವರಿಗೇ ಪತ್ರ ಬರೆದಿದ್ದೇನೆ. ಆಡಳಿತದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಅದನ್ನು ಸರಿಪಡಿಸಿ ಎಂದು ಹೇಳಿದ್ದೇನೆ ಎಂದಿದ್ದಾರೆ.

ಇನ್ನು, ನಾಲ್ವರು ಸಚಿವರು, ನಾಲ್ವರು ಶಾಸಕರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ರಾಜೀನಾಮೆ ಕೇಳಿದ್ದಾರೆ, ಖಾತೆ ಬದಲಾವಣೆ ಬಗ್ಗೆ ಚರ್ಚೆಯಾಗಿದೆ. ಇಂತಹ ಯಾವುದಕ್ಕೂ ನಾನು ಬಗ್ಗುವ ಪ್ರಶ್ನೆಯೇ ಇಲ್ಲ. ನನ್ನ ನಿರ್ಧಾರ ನ್ಯಾಯಬದ್ಧವಾಗಿದೆ. ರಾಜ್ಯದ ಹಲವು ಶಾಸಕರು, ಸಚಿವರು, ಸಂಸದರು, ಬಿಜೆಪಿ ಪದಾಧಿಕಾರಿಗಳು ನನ್ನ ಪರವಾಗಿ ಮಾತಾಡಿದ್ದಾರೆ. ಸಹಿ ಸಂಗ್ರಹಿಸುವ ಬಗ್ಗೆಯೂ ಅವರು ಕೇಳಿದ್ದಾರೆ. ಆದರೆ, ಸಹಿ ಸಂಗ್ರಹ ಮಾಡುವುದು ಬೇಡ ಎಂದು ಹೇಳಿದ್ದೆ. ಶಾಸಕರು ಸಹಿ ಸಂಗ್ರಹ ಮಾಡುವುದು ಸಹ ತಪ್ಪು. ಇದು ನನ್ನ, ಯಡಿಯೂರಪ್ಪ ನಡುವಿನ ವೈಯಕ್ತಿಕ ವಿಚಾರವಲ್ಲ, ನೀತಿ, ನಿಯಮ ಜಾರಿ ಮಾಡಬೇಕೆಂಬ ನನ್ನ ಪ್ರಯತ್ನವಷ್ಟೇ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೆಜೆಪಿ ಕಟ್ಟುವಾಗಲೂ ಯಡಿಯೂರಪ್ಪನವರಿಗೆ ಬೇಡವೆಂದೇ ಹೇಳಿದ್ದೆ.. ಎಂಬುದನ್ನು ಸ್ಮರಿಸಿದ ಕೆ.ಎಸ್.ಈಶ್ವರಪ್ಪ 

ಅರುಣ್ ಸಿಂಗ್-ಕಟೀಲ್ ನನ್ನೊಂದಿಗೆ ಚರ್ಚಿಸಿದ್ದಾರೆ.. ಬೈ ಎಲೆಕ್ಷನ್​ ಬಳಿಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ: ಈಶ್ವರಪ್ಪ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ